Friday, January 23, 2026
Google search engine

Homeರಾಜ್ಯಸುದ್ದಿಜಾಲಸರ್ಕಾರಿ ಪ್ರಾಥಮಿಕ ಶಾಲಾ ಉಪಾಧ್ಯಾಯರ ಸಹಕಾರ ಸಂಘದ ಅಧ್ಯಕ್ಷರಾಗಿ ತೊಳಸಿ ರಾಮ ನಾಯಕ, ಉಪಾಧ್ಯಕ್ಷರಾಗಿ ಕುಮಾರ...

ಸರ್ಕಾರಿ ಪ್ರಾಥಮಿಕ ಶಾಲಾ ಉಪಾಧ್ಯಾಯರ ಸಹಕಾರ ಸಂಘದ ಅಧ್ಯಕ್ಷರಾಗಿ ತೊಳಸಿ ರಾಮ ನಾಯಕ, ಉಪಾಧ್ಯಕ್ಷರಾಗಿ ಕುಮಾರ ಆಯ್ಕೆ

ಕೆ ಆರ್ ನಗರ:ಸರ್ಕಾರಿ ಪ್ರಾಥಮಿಕ ಶಾಲಾ ಉಪಾಧ್ಯಾಯರ ಸಹಕಾರ ಸಂಘದ ಅಧ್ಯಕ್ಷರಾಗಿ ತೊಳಸಿ ರಾಮ ನಾಯಕ ಉಪಾಧ್ಯಕ್ಷರಾಗಿ ಕುಮಾರ ಆಯ್ಕೆಯಾದರು ಎಂದು ಸಹಕಾರ ಇಲಾಖೆಯ ಅಧಿಕಾರಿ ರವಿ ತಿಳಿಸಿದರು. ಇಂದು ವಿನಾಯಕ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲಾ ಉಪಾಧ್ಯಾಯರ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೊಳಸಿ ರಾಮ ನಾಯಕ, ಉಪಾಧ್ಯಕ್ಷ ಸ್ಥಾನಕ್ಕೆ ಕುಮಾರ್ ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷ ಉಪಾಧ್ಯಕ್ಷ ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣೆ ಅಧಿಕಾರಿ ರವಿ ಘೋಷಣೆ ಮಾಡಿದರು.

ಅಧ್ಯಕ್ಷ ತೋಳಸಿ ರಾಮ ನಾಯಕ ಮಾತನಾಡಿ ನನ್ನ ಮೇಲೆ ವಿಶ್ವಾಸ ಬಿಟ್ಟು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೂ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ಎಲ್ಲರ ವಿಶ್ವಾಸದೊಂದಿಗೆ ನಮ್ಮ ಸಹಕಾರ ಸಂಘವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಸಕಾಲದಲ್ಲಿ ಸದಸ್ಯರಿಗೆ ಸಾಲ ಸೌಲಭ್ಯ ನೀಡುವ ಜೊತೆಗೆ ಇನ್ನಿತರ ಕಾರ್ಯ ಚಟುವಟಿಕೆಯಲ್ಲೂ ಪಾಲ್ಗೊಳ್ಳುವಂತೆ ನೋಡಿಕೊಳ್ಳುತ್ತೇನೆ ಎಂಬ ಭರವಸೆ ನೀಡಿದರು. ಈಗಿರುವ ಕಚೇರಿ ಚಿಕ್ಕದಾಗಿದ್ದು ಹೊಸದಾಗಿ ಬೇರೊಂದು ಕಡೆಗೆ ಕಚೇರಿಯನ್ನು ವರ್ಗಾಯಿಸುವ ಮೂಲಕ ನಮ್ಮ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಇನ್ನಿತರ ಕಾರ್ಯ ಚಟುವಟಿಕೆಯನ್ನು ನಡೆಸುವ ಮೂಲಕ ತಾಲೂಕಿನಲ್ಲಿ ಮಾದರಿ ಸಂಘವನ್ನಾಗಿ ಮಾಡುವ ಮಹತ್ಕಾಂಸೆ ಹೊಂದಿದ್ದೇನೆ ಎಂದರು .

RELATED ARTICLES
- Advertisment -
Google search engine

Most Popular