ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ (ಶಿವಪ್ರಕಾಶ್) ಹತ್ಯೆ ಪ್ರಕರಣದಲ್ಲಿ ಭಾರತಿನಗರ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಅನಿಲ್, ಅರುಣ್ ಮತ್ತು ನವೀನ್ ಎಂದು ಗುರುತಿಸಲಾಗಿದೆ. ಅರುಣ್ ಮತ್ತು ನವೀನ್ ಪ್ರಕರಣದ ಎ1 ಆರೋಪಿ ಜಗದೀಶ್ನ ಸಹಚರರಾಗಿದ್ದು, ಕೊಲೆ ಬಳಿಕ ತಲೆಮರೆಸಿಕೊಂಡಿದ್ದರು.
ಜುಲೈ 15ರಂದು ರಾತ್ರಿ, ಹಲಸೂರು ಮನೆ ಎದುರು ಶಿವನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಹಿಂದೆ ಪೊಲೀಸರು ಕಿರಣ್, ವಿಮಲ್, ಪ್ರದೀಪ್, ಮದನ್ ಮತ್ತು ಸ್ಯಾಮ್ಯುವೆಲ್‌ನ್ನು ಬಂಧಿಸಿದ್ದರು. ಪ್ರಕರಣದ ಎ5 ಆರೋಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಶನಿವಾರ ವಿಚಾರಣೆ ಮಾಡಲಾಗಿತ್ತು.