ಮಂಗಳೂರು (ದಕ್ಷಿಣ ಕನ್ನಡ) : ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ಬರುವುದು ಹೇಗೆ ಎಂಬ ಯೋಚನೆಯಲ್ಲಿ ಇರುವವರಿಗಾಗಿ ರೈಲ್ವೆ ಇಲಾಖೆ ಒಂದು ಶುಭಸುದ್ದಿ ನೀಡಿದೆ. ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣಿಕರು ಊರಿಗೆ ಬರುವ ನಿರೀಕ್ಷೆಯ ಹಿನ್ನೆಲೆ, ಹುಬ್ಬಳ್ಳಿ – ಬೆಂಗಳೂರು – ಮಂಗಳೂರು ಮಾರ್ಗದಲ್ಲಿ ಮೂರು ವಿಶೇಷ ರೈಲುಗಳು ಸಂಚರಿಸಲಿವೆ.
ರೈಲು ಸಂಖ್ಯೆ 07353, ಅ. 17 ರಂದು ಸಂಜೆ 4ಕ್ಕೆ ಹುಬ್ಬಳ್ಳಿ ಜಂಕ್ಷನ್‌ನಿಂದ ಹೊರಟು ರಾತ್ರಿ 11.25ಕ್ಕೆ ಬೆಂಗಳೂರಿಗೆ (ಯಶವಂತಪುರ) ತಲುಪಲಿದೆ. 18 ರಂದು ಬೆಳಗ್ಗೆ 11.15ಕ್ಕೆ ಮಂಗಳೂರಿಗೆ ತಲುಪಲಿದೆ.
ರೈಲು ಸಂಖ್ಯೆ 07354, ಅ. 18 ರಂದು ಮಧ್ಯಾಹ್ನ 2.35ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ರಾತ್ರಿ 11.25ಕ್ಕೆ ಯಶವಂತಪುರ ತಲುಪಲಿದೆ.
ರೈಲು ಸಂಖ್ಯೆ 06229, ಅ. 19 ರಂದು ಬೆಂಗಳೂರಿನಿಂದ ರಾತ್ರಿ 12.15ಕ್ಕೆ ಹೊರಟು ಬೆಳಗ್ಗೆ 11.15ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರು – ಬೆಂಗಳೂರು ಕಂಟೋನ್ಮೆಂಟ್ ರೈಲು ಸಂಖ್ಯೆ 06230 ಅ. 19 ರಂದು ಮಧ್ಯಾಹ್ನ 2.35ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 12.30ಕ್ಕೆ ಬೆಂಗಳೂರು ತಲುಪಲಿದೆ.
ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಕುಣಿಗಲ್, ಯಶವಂತಪುರ, ತುಮಕೂರು, ಅರಸೀಕೆರೆ, ಬಿರೂರು, ದಾವಣಗೆರೆ, ಹರಿಹರ, ಹಾವೇರಿ.
4 ಜನರಲ್ ಕೋಚ್
10 ಸ್ಲೀಪರ್ ಕೋಚ್
2 ತೃತೀಯ ದರ್ಜೆ ಎಸಿ
1 ದ್ವಿತೀಯ ದರ್ಜೆ ಎಸಿ
1 ಪ್ರಥಮ ದರ್ಜೆ / ಕ್ಯಾಬಿನ್ ಎಸಿ
ಹಬ್ಬದ ಸಮಯದಲ್ಲಿ ಊರಿಗೆ ಬಂದು ಮನೆಯವರೊಂದಿಗೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವವರಿಗೆ ಈ ವಿಶೇಷ ರೈಲುಗಳು ನಿಜವಾದ ಅನುಕೂಲವಾಗಲಿವೆ. ಟಿಕೆಟ್‌ಗಳನ್ನು ಮುಂಚಿತವಾಗಿ ಕಾಯ್ದಿರಿಸಿಕೊಳ್ಳಬೇಕು ಮತ್ತು ಜನರು ಈ ರೈಲಿನ ಅನುಕೂಲವನ್ನು ಪಡೆದುಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.