ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಂಘದ ಆಡಳಿತ ಕಚೇರಿ ನಿರ್ಮಾಣ ಮಾಡಲು ಶಾಸಕರೊಂದಿಗೆ ಮಾತನಾಡಿ ಅನುದಾನ ಕೊಡಿಸುತ್ತೇನೆ ಎಂದು ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.
ತಾಲೂಕಿನ ತಿಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ೧೯೫೦ರಲ್ಲಿ ಸ್ಥಾಪನೆಗೊಂಡ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಇನ್ನಷ್ಟು ಸೇವೆ ಒದಗಿಸಬೇಕು ಎಂದರು.
ಸAಘದ ೭೫ನೇ ವರ್ಷದ ವಾರ್ಷಿಕೋತ್ಸವ ಆಚರಿಸಲು ಅನುದಾನ ಕಾದಿರಿಸಿಕೊಳ್ಳುವಂತೆ ಸಲಹೆ ನೀಡಿದ ದೊಡ್ಡಸ್ವಾಮೇಗೌಡ ಈ ಭಾಗದ ಮಹಿಳಾ ಸ್ವ-ಸಹಾಯ ಸಂಘಗಳಿಗೂ ಸಾಲ ಸೌಲಭ್ಯ ನೀಡಿ ಅವುಗಳ ಆರ್ಥಿಕಾಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಎಸ್.ಸಿದ್ದೇಗೌಡ ಮಾತನಾಡಿ ಕನುಗನಹಳ್ಳಿ, ಡೆಗ್ಗನಹಳ್ಳಿ, ಚಾಮಲಾಪುರ ಮತ್ತು ತಿಪ್ಪೂರು ಗ್ರಾಮಗಳಿಂದ ೧೩೫೫ ಮಂದಿ ಷೇರುದಾರ ಸದಸ್ಯರಿದ್ದು, ಷೇರು ಬಂಡವಾಳ ಹೆಚ್ಚಿಸುವ ಸಲುವಾಗಿ ರೈತರ ಮನೆ ಮನೆಗೆ ತೆರಳಿ ಸದಸ್ಯತ್ವ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಹೇಳಿದರು.
ಸದಸ್ಯರಿಗೆ ೬.೮೦ ಕೋಟಿ ಸಾಲ ವಿತರಿಸಿದ್ದು, ಈ ಬಾರಿ ಹೊಸ ಸದಸ್ಯರಿಗೂ ಸಾಲ ವಿತರಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದ ಸಿದ್ದೇಗೌಡ ಪಡಿತರ ಮತ್ತು ರಸಗೊಬ್ಬರ ಮಾರಾಟದಿಂದ ಸಂಘಕ್ಕೆ ಲಾಭ ಬಂದಿದ್ದು, ಗ್ರಾಹಕರಿಗೆ ತೊಂದರೆಯಾಗದAತೆ ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಮಹದೇವ್ ವಾರ್ಷಿಕ ವರದಿ ಮತ್ತು ೨೦೨೫-೨೬ನೇ ಸಾಲಿನ ಆಯ-ವ್ಯಯವನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು.
ಉಪಾಧ್ಯಕ್ಷೆ ನಿಂಗಾಜಮ್ಮ, ನಿರ್ದೇಶಕರಾದ ಕೆ.ಆರ್.ರಮೇಶ್, ವಿಷಕಂಠೇಗೌಡ, ಕೆ.ಮಹದೇವ್, ವಿಶ್ವನಾಥ್, ಕೃಷ್ಣಮೂರ್ತಿ, ಡಿ.ಕೆ.ಕರೀಗೌಡ, ಮಣಿಯಮ್ಮ, ಭೀಮಪ್ಪ, ತಿಮ್ಮಪ್ಪ, ಗೌರಮ್ಮ, ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಟಿ.ಉಮೇಶ್, ಮುಖ್ಯಕಾರ್ಯನಿರ್ವಾಹಕಾಧಿಕಾರಿ ಮಹದೇವ್, ಸಿಬ್ಬಂದಿಗಳಾದ ಎಂ.ಶೋಭ, ಪಿ.ಎಂ.ಸAಜಯ್ ಹಾಜರಿದ್ದರು.