Tuesday, May 20, 2025
Google search engine

Homeರಾಜ್ಯಇಂದಿನಿಂದ ವಾಹನ ಸವಾರರಿಗೆ ಟೋಲ್ ಬಿಸಿ; ಶೇ.5ರಷ್ಟು ದರ ಏರಿಕೆ

ಇಂದಿನಿಂದ ವಾಹನ ಸವಾರರಿಗೆ ಟೋಲ್ ಬಿಸಿ; ಶೇ.5ರಷ್ಟು ದರ ಏರಿಕೆ

ರಾಮನಗರ: ರಾಜ್ಯದಲ್ಲಿ ಬೆಲೆ ಏರಿಕೆ ನಡುವೆಯೇ ಇಂದಿನಿಂದ ವಾಹನ ಸವಾರರಿಗೆ ಟೋಲ್ ದರ ಏರಿಕೆ ಬಿಸಿ ಕೂಡಾ ತಟ್ಟಲಿದೆ. ಶೇ. 5ರಷ್ಟು ಟೋಲ್ ದರ ಏರಿಕೆಯಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ(NHAI) ವಾರ್ಷಿಕ ಟೋಲ್ ದರ ಏರಿಕೆಯು ಇಂದಿನಿಂದ ಅನ್ವಯವಾಗಲಿದೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆಯಲ್ಲೂ ಪರಿಷ್ಕೃತ ದರ ಜಾರಿ ಆಗಿದೆ. ಬೆಂಗಳೂರಿನಿಂದ ನಿಢಗಟ್ಟದವರೆಗಿನ 56ಕಿ.ಮೀ ಗೆ ಶೇ.5ರಷ್ಟು ಟೋಲ್ ದರ ಏರಿಕೆಯಾಗಿದ್ದು, ಬಿಡದಿ ಸಮೀಪದ ಶೇಷಗಿರಿಹಳ್ಳಿ ಹಾಗೂ ಕಣಮಿಣಕಿ ಟೋಲ್‌ನಲ್ಲೂ ದರ ಏರಿಕೆ ಮಾಡಲಾಗಿದೆ.

ಎಕ್ಸ್‌ಪ್ರೆಸ್‌ ಹೈವೆ ಟೋಲ್‌ನ ಹೊಸ ದರ ಹೀಗಿರಲಿದೆ:

ಕಾರು/ಜೀಪು: ಏಕಮುಖ ಸಂಚಾರದ ಹೊಸ ದರ 180 ರೂ. ಆಗಿದ್ದು, ಹಳೆ ದರ 170 ರೂ. ಇತ್ತು. ಇದೀಗ 10 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರದ ಹೊಸ ದರ 270 ರೂ. ಆಗಿದ್ದು, ಹಳೆ ದರ 255 ರೂ. ಇತ್ತು. 15 ರೂ. ಹೆಚ್ಚಿಸಲಾಗಿದೆ.

ಲಘು ವಾಣಿಜ್ಯ ವಾಹನ: ಏಕಮುಖ ಸಂಚಾರ ಹೊಸ ದರ 290 ರೂ. ಆಗಿದ್ದು, ಹಳೆ ದರ 275 ರೂ. ಇತ್ತು. 15 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರದ ಹೊಸ ದರ 430 ರೂ. ಆಗಿದ್ದು, ಹಳೆ ದರ 415 ರೂ. ಇತ್ತು. ಇದೀಗ 15 ರೂ. ಹೆಚ್ಚಿಸಲಾಗಿದೆ.

ಬಸ್/ಟ್ರಕ್: ಏಕಮುಖ ಸಂಚಾರ ಹೊಸ ದರ 605 ರೂ. ಆಗಿದ್ದು, ಹಳೆ ದರ 580 ರೂ. ಇತ್ತು. 25 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರದ ಹೊಸ ದರ 905 ರೂ. ಆಗಿದ್ದು, ಹಳೆ ದರ 870 ರೂ. ಇತ್ತು. ಇದೀಗ 35 ರೂ. ಹೆಚ್ಚಳವಾಗಿದೆ.

ಮೂರು ಆಕ್ಸಲ್ ವಾಣಿಜ್ಯ ವಾಹನ: ಏಕಮುಖ ಸಂಚಾರದ ಹೊಸ ದರ 660 ರೂ. ಆಗಿದ್ದು, ಹಳೆ ದರ 635 ರೂ. ಇತ್ತು. ಇದೀಗ 25 ರೂ. ಹೆಚ್ಚಿಸಲಾಗಿದೆ. ದ್ವಿಮುಖ ಸಂಚಾರದ ಹೊಸ ದರ 990 ರೂ. ಆಗಿದ್ದು, ಹಳೆ ದರ 950 ರೂ. ಇತ್ತು. ಇದೀಗ 40 ರೂ. ಹೆಚ್ಚಳವಾಗಿದೆ.

ಮಲ್ಟಿ ಆಕ್ಸಲ್ ವೆಹಿಕಲ್ಸ್(4-6 ಆಕ್ಸಲ್): ಏಕಮುಖ ಸಂಚಾರದ ಹೊಸ ದರ 945 ರೂ. ಆಗಿದ್ದು, ಹಳೆ ದರ 910 ರೂ. ಇತ್ತು. ಇದೀಗ 35 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರದ ಹೊಸ ದರ 1,420 ರೂ. ಆಗಿದ್ದು, ಹಳೆ ದರ 1,365 ಇತ್ತು. ಇದೀಗ 55 ರೂ. ಹೆಚ್ಚಿಸಲಾಗಿದೆ.

ಭಾರಿ ವಾಹನಗಳು(7 ಆಕ್ಸೆಲ್ ಅಥವಾ ಅಧಿಕ): ಏಕಮುಖ ಸಂಚಾರದ ಹೊಸ ದರ 1,155 ರೂ. ಆಗಿದ್ದು, ಹಳೆ ದರ 1,110 ಇತ್ತು. 55 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರದ ಹೊಸ ದರ 1,730 ರೂ. ಆಗಿದ್ದು, ಹಳೆ ದರ 1,660 ರೂ. ಇತ್ತು. ಇದೀಗ 100 ರೂ. ಹೆಚ್ಚಿಸಲಾಗಿದೆ.

RELATED ARTICLES
- Advertisment -
Google search engine

Most Popular