Tuesday, May 20, 2025
Google search engine

Homeರಾಜ್ಯಸುದ್ದಿಜಾಲಕೃಷಿ ಚಟುವಟಿಕೆಯಲ್ಲಿ ಪಾರಂಪರಿಕ ಕೃಷಿ ಪದ್ಧತಿ ಸೂಕ್ತ-ಜಿ.ಪಿ.ಮೂರ್ತಿ

ಕೃಷಿ ಚಟುವಟಿಕೆಯಲ್ಲಿ ಪಾರಂಪರಿಕ ಕೃಷಿ ಪದ್ಧತಿ ಸೂಕ್ತ-ಜಿ.ಪಿ.ಮೂರ್ತಿ

ಚಿಮುಕು ಭೂಮಿ ಬಳಗದ ಅಧ್ಯಕ್ಷರಾಗಿ ಮುದ್ದನಹಳ್ಳಿ ಸೋ‌ಮಪ್ಪ , ಉಪಾಧ್ಯಕ್ಷರಾಗಿ ಸಿ.ಟಿ.ಬಾಲಕೃಷ್ಣ ಆಯ್ಕೆ

ಹೊಸೂರು : ಕೃಷಿ ಚಟುವಟಿಕೆಯಲ್ಲಿ ರಾಸಾಯನಿಕ ಗೊಬ್ಬರ ಬಳಕೆಯಿಂದ ಜೀವ ಸಂಕುಲ ನಾಶ ಆಗುತ್ತಿದ್ದು ಇದನ್ನು ತಪ್ಪಿಸಲು ನಮ್ಮ ಪಾರಂಪರಿಕ ಕೃಷಿ ಪದ್ದತಿಯೇ ಪರಿಹಾರ ಎಂದು ಗೆಜ್ಜಲಗೆರೆ ಸಮಗ್ರ ಕೃಷಿ ಮತ್ತು ಸಾವಯವ ಕೃಷಿ ಸಂಸ್ಥೆಯ ಸಲಹೆಗಾರ ಜಿ.ಪಿ.ಮೂರ್ತಿ ಹೇಳಿದರು.
ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಚಿಮುಕು ಭೂಮಿ ಚಿಮುಕು ಭೂಮಿ ಬಳಗದ ವತಿಯಿಂದ ಆಯೋಜಿಸಿದ್ದ ಶುದ್ದ ಮಣ್ಣು-ಗಾಳಿ- ನೀರು ಸಂರಕ್ಷಿಸುವ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತಿಚ್ಚಿನ ದಿನಗಳಲ್ಲಿ ಪ್ರತಿಯೊಂದು ಬೆಳೆಗೆ ರಸಗೊಬ್ಬರ ಬಳಕೆ ಹೆಚ್ಚುತ್ತಿರುವ ಪರಿಣಾಮ ಭೂಮಿ ತನ್ನ ಫಲವತ್ತೆಯನ್ನು ಕಳೆದು ಕೊಂಡು ಮುಂದೆ ಬೆಳೆಯನ್ನು ಬೆಳೆಯಲು ಆಗದ ಸ್ಥಿತಿಗೆ ತಲುಪಲಿದ್ದು ಈ ಬಗ್ಗೆ ಅನ್ನದಾತರು ಎತ್ತೆಚ್ಚುಕೊಳ್ಳುವುದು ಅತಿ ಅವಶ್ಯಕ ಎಂದರು. ಈ ಹಿಂದೆ ಕೆರೆ,ಕಟ್ಟೆಗಳಲ್ಲಿ ನೀರು ಕುಡಿಯುವ ಬಹುದಾಗಿತ್ತು ಅದರೆ ರಸಾಯನಿಕ ಗೊಬ್ಬರದಿಂದ ಇದು ಕೂಡ ಮಲಿನಗೊಂಡು ಇಲ್ಲಿ ನೀರು ಕುಡಿದರೇ ರೋಗರುಜಿನಗಳು ಬರುತ್ತಿದ್ದು ಜೊತಗೆ ಮರಗಳ ನಾಶದಿಂದ ಶುದ್ದ ಗಾಳಿ ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು ಇದನ್ನು ತಡೆಯಲು ಜಮೀನುಗಳಲ್ಲಿ ಹೆಚ್ಚು ಆಮ್ಲಜನಕ ಒದಗಿಸುವ ಮರಗಳನ್ನು ಬೆಳೆಸಿ ಎಂದು ಸಲಹೆ ಇತ್ತರು.

ಕಾರ್ಯಕ್ರಮದಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಕೊಟ್ಟಿಗೆ ಗೊಬ್ಬರ, ಹಸಿರು ಸೊಪ್ಪು ಸೇರಿದಂತೆ ನಮ್ಮಲ್ಲೇ ಸಿಗುವ ವಸ್ತುಗಳಿಂದ ಔಷಧಿ, ಗೊಬ್ಬರ ಮಾಡಿಕೊಳ್ಳುವ ವಿಧಾನದ ಬಗೆಗೆ ಕುರಿತು ಸುದೀರ್ಘ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಚಿಮುಕು ಭೂಮಿ ಬಳಗದ ಅಧ್ಯಕ್ಷರಾಗಿ ಮುದ್ದನಹಳ್ಳಿ ಸೋ‌ಮಪ್ಪ ಮತ್ತು ಉಪಾಧ್ಯಕ್ಷರಾಗಿ ಸಿ.ಟಿ.ಬಾಲಕೃಷ್ಣ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಸಂಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಸಿ.ಡಿ. ಪರುಶುರಾಮ,ಕುಪ್ಪೆ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಸಿ.ಟಿ.ಪಾರ್ಥ,ಕುಪ್ಪೆ ಮಂಜುನಾಥ್, ನಿರ್ದೇಶಕ ಸತೀಶ್, ನಿವೃತ್ತ ಶಿಕ್ಷಕ ಸಿ.ಎಲ್,ಕಾಲೇಗೌಡ, ಮುಖಂಡರಾದ ಎಚ್.ರಾಮೇಗೌಡ,ಡಿ.ಕುಮಾರಸ್ವಾಮಿ, ಮುದ್ದನಹಳ್ಳಿ ಗಂಗಾಧರ್,ಸೋಮಣ್ಣ ನಾಮದಾರಿ ಸಂಘದ ಅಧ್ಯಕ್ಷ ರವಿ , ಮಾಯಿಗೌಡನಹಳ್ಳಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕುಮಾರಸ್ವಾಮಿ, ಕುಪ್ಪೆ ಗ್ರಾ.ಪಂ. ಮಾಜಿ ಸದಸ್ಯ ರವೀಂದ್ರ ಸೇರಿದಂತೆ 50 ಕ್ಕು ಹೆಚ್ಚು ರೈತರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular