ತುಮಕೂರು: ಮತದಾನದ ಬಳಿಕ ದಿಢೀರನೆ ಕುಸಿದು ಬಿದ್ದು ಮತದಾರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಮಯೂರ ಯುವ ವೇದಿಕೆಯ ಸದಸ್ಯ ಹೆಚ್.ಕೆ.ರಮೇಶ್, ಮೃತಪಟ್ಟವರು. ಇಂದು ಶುಕ್ರವಾರ ನಗರದ ಎಸ್‌ಎಸ್ ಪುರಂ ಮತಗಟ್ಟೆಗೆ ಪತ್ನಿ ಸಮೇತ ಬಂದು ಮತ ಚಲಾಯಿಸಿದ್ದರು. ಬಳಿಕ ತಮ್ಮದೇ ಮಾಲೀಕತ್ವದ ಬಟ್ಟೆ ಅಂಗಡಿಯಲ್ಲಿದ್ದಾಗ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.