Wednesday, May 21, 2025
Google search engine

Homeಅಪರಾಧಅಯೋಧ್ಯೆ ಬಳಿ ಲಾರಿ -ಟಿಟಿ ನಡುವೆ ಮುಖಾಮುಖಿ ಡಿಕ್ಕಿ: ಮೂವರ ಸಾವು

ಅಯೋಧ್ಯೆ ಬಳಿ ಲಾರಿ -ಟಿಟಿ ನಡುವೆ ಮುಖಾಮುಖಿ ಡಿಕ್ಕಿ: ಮೂವರ ಸಾವು

ಕಲಬುರಗಿ: ನಿನ್ನೆ ರಾತ್ರಿ ಅಯೋಧ್ಯೆ ಬಳಿ ಲಾರಿ ಮತ್ತು ಟಿಟಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಲಬುರಗಿ ಮೂಲದ ಮೂವರು ರಾಮ ಭಕ್ತರು ಸಾವನ್ನಪ್ಪಿದ್ದಾರೆ.

ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಿವರಾಜ್, ಕಾಶಿನಾಥ್ ಹಾಗೂ ತಂಗೆಮ್ಮ ಮೃತ ದುರ್ದೈವಿಗಳು.

ಗಾಯಾಳುಗಳಿಗೆ ಅಯೋಧ್ಯೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಒಂದೇ ಕುಟುಂಬದ 22 ಜನ ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಟಿಟಿಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆದಲ್ಲಿರುವ ರಾಮಲಲ್ಲಾ ನೋಡಲು ತೆರಳುತ್ತಿದ್ದಾಗ ದುರಂತ ಸಂಭವಿಸಿದೆ.

ಸುಗ್ಲಾಬಾಯಿ, ಅನುರಪ್ಪ, ರಾಜಾರಾಂ, ತಾರಾವತಿ, ಪ್ರೀತಿ, ಶಿವಲೀಲಾ, ಚಂದ್ರಕಾಂತ, ಇಂದು, ಚಂದ್ರಮ್ಮ, ಮಹದೇವ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಜಿಲ್ಲಾ ಆಸ್ಪತ್ರೆಯ ತುರ್ತು ವೈದ್ಯಾಧಿಕಾರಿ ಆಶಿಶ್ ಪಾಠಕ್ ಪ್ರತಿಕ್ರಿಯಿಸಿದ್ದು, ಪರಿಸ್ಥಿತಿ ಗಂಭೀರವಾಗಿರುವುದರಿಂದ ದರ್ಶನ್ ನಗರದ ವೈದ್ಯಕೀಯ ಕಾಲೇಜಿಗೆ ರೋಗಿಯನ್ನು ರವಾನಿಸಲಾಗಿದೆ.

ಉಳಿದ ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular