Wednesday, May 21, 2025
Google search engine

HomeUncategorizedರಾಷ್ಟ್ರೀಯಕಮರಿಗೆ ಉರುಳಿದ ಟಿಟಿ ವಾಹನ; ಕನಿಷ್ಠ 8 ಮಂದಿ ಸಾವು

ಕಮರಿಗೆ ಉರುಳಿದ ಟಿಟಿ ವಾಹನ; ಕನಿಷ್ಠ 8 ಮಂದಿ ಸಾವು

ಡೆಹ್ರಾಡೂನ್: ಟಿಟಿ ವಾಹನವೊಂದು  ಆಳವಾದ ಕಮರಿಗೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 8 ಮಂದಿ ಮೃತಪಟ್ಟಿರುವ ಭೀಕರ ಘಟನೆ ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯಲ್ಲಿ ಶನಿವಾರ(ಜೂ.15 ರಂದು) ನಡೆದಿರುವುದು ವರದಿಯಾಗಿದೆ.

ರಿಷಿಕೇಶ-ಬದ್ರಿನಾಥ್ ಹೆದ್ದಾರಿಯ ಅಲಕಾನಂದ ನದಿಯ ಬಳಿ ಈ ಘಟನೆ ನಡೆದಿದೆ. ಟಿಟಿಯಲ್ಲಿ ಒಟ್ಟು 23 ಜನ ಪ್ರಯಾಣಿಸುತ್ತಿದ್ದರು. ಟಿಟಿ ವಾಹನ ಉರುಳಿ ಆಳವಾದ ಕಮರಿಗೆ ಬಿದ್ದಿದೆ. ಎಂಟು ಮಂದಿ ಘಟನೆಯಲ್ಲಿ ಮೃತಪಟ್ಟಿದ್ದು 7 ಮಂದಿಗೆ ಗಾಯಗಳಾಗಿವೆ.

ಪ್ರಯಾಣಿಕರು ದೆಹಲಿ ಹಾಗೂ ಗಾಜಿಯಾಬಾದ್‌ನಿಂದ ಚೋಪ್ತಾ ತುಂಗನಾತ್‌ಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಸ್ಥಳೀಯ ಆಡಳಿತ ಮತ್ತು ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ಇಳಿದಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಘಟನೆಯ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular