Saturday, August 2, 2025
Google search engine

Homeಅಪರಾಧರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಇಬ್ಬರ ಬಂಧನ– ದರ್ಶನ್ ಅಭಿಮಾನಿಗಳ ಮೇಲೆ ಕಠಿಣ ಕ್ರಮ

ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಇಬ್ಬರ ಬಂಧನ– ದರ್ಶನ್ ಅಭಿಮಾನಿಗಳ ಮೇಲೆ ಕಠಿಣ ಕ್ರಮ

ನಟಿ ರಮ್ಯಾ ಅವರಿಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳು ಬಂದಿದ್ದವು. ಈ ಸಂದೇಶಗಳನ್ನು ಕಳಿಸಿರುವವರು ದರ್ಶನ್ ಅಭಿಮಾನಿಗಳೆಂದು ಶಂಕಿಸಲಾಗಿದೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ರಮ್ಯಾ ಅವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತ್ವರಿತವಾಗಿ ಕಾರ್ಯಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ ಮತ್ತು ಮತ್ತೊಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರು ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳಿಂದ ಆಗಿದ್ದಾರೆ.

ಈ ಘಟನೆಯ ಹಿಂದಿನ ಹಿನ್ನೆಲೆ ಏನೆಂದರೆ, ರಮ್ಯಾ ಅವರು ರೇಣುಕಾಸ್ವಾಮಿ ಪರವಾಗಿ ಮೌಖಿಕ ಬೆಂಬಲ ವ್ಯಕ್ತಪಡಿಸಿದ್ದರು. ಇದರಿಂದ ದರ್ಶನ್ ಅಭಿಮಾನಿಗಳು ಕೋಪಗೊಂಡು ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಪದಗಳಲ್ಲಿ ಕಾಮೆಂಟ್‌ ಮಾಡಿದ್ದು ಮಾತ್ರವಲ್ಲ, ನೇರವಾಗಿ ಅಶ್ಲೀಲ ಸಂದೇಶಗಳಿಗೂ ಮುಂದಾಗಿದ್ದರು.

ಈ ಪ್ರಕರಣದಲ್ಲಿ ಇನ್ನಷ್ಟು ಹೆಸರುಗಳು ಉಲ್ಲೇಖವಾಗಿದ್ದು, ತನಿಖೆ ಮುಂದುವರೆದಿದೆ. ಬಂಧನದ ಭೀತಿ ಈಗ ಹಲವು ಅಭಿಮಾನಿಗಳ ನಡುವೆ ನಡುಕ ಮೂಡಿಸಿದೆ. ಈ ಪ್ರಕರಣದಲ್ಲಿ ಕೇಸ್ ಆದರೆ ಅಭಿಮಾನಿ ತೋರಿಸಲು ಹೋದವರು ಕೋರ್ಟ್​ಗೆ ಅಲೆಯುವ ಪರಿಸ್ಥಿತಿ ನಿರ್ಮಾಣ ಆಗಲಿದೆ.

RELATED ARTICLES
- Advertisment -
Google search engine

Most Popular