ವರದಿ: ಸ್ಟೀಫನ್ ಜೇಮ್ಸ್ ಬೆಳಗಾವಿ
ಬೆಳಗಾವಿ : ಗಣೇಶೋತ್ಸವ ವಿಸರ್ಜನೆ ವೇಳೆ ಜಿಲ್ಲೆಯ ಪ್ರತ್ಯೇಕವಾಗಿ ಎರಡು ದುರಂತಗಳು ನಡೆದಿದೆ. ಗಣೇಶ ವಿಸರ್ಜನೆ ಗೆ ತೆರಳಿದ್ದ ಇಬ್ಬರು ದಾರುಣ ಸಾವಿಗೀಡಾದ ಘಟನೆ ಶನಿವಾರ ನಡೆದಿವೆ.
ಬೆಳಗಾವಿ ನಗರದ ಜಕ್ಕೇರಿ ಹೊಂಡದಲ್ಲಿ ಬಿದ್ದು ನಗರದ ವಡ್ಡರವಾಡಿ ನಿವಾಸಿ ರಾಹುಲ್ ಬ್ಯಾಕವಾಡಕರ್ (33) ಮೃತಪಟ್ಟಿದ್ದಾರೆ.
ಜಕ್ಕೇರಿ ಹೊಂಡದಲ್ಲಿ ಬಿದ್ದ ರಾಹುಲ್ ಅವರನ್ನು ಸ್ಥಳೀಯರಿಂದ ರಕ್ಷಣೆಗೆ ಯತ್ನಿಸಿದರೂ, ಜಿಲ್ಲಾಸ್ಪತ್ರೆ ಸಾಗಿಸುವ ಮುನ್ನವೇ ರಾಹುಲ್ ಮೃತಪಟ್ಟಿದ್ದರು. ಅಲ್ಲದೇ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಮನೆ ಗಣೇಶ ವಿಸರ್ಜನೆ ವೇಳೆ ಒರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.