14.03.2026 ರಂದು ಸಂಜೆ ಶ್ರೀರಾಮ್ ಪೇಟೆಯಲ್ಲಿರುವ ರಾಜೇಶ್ ಬಾರ್‌ನಲ್ಲಿ ನಿತೇಶ್ ಆರ್.ಕೆ (33) ಮತ್ತು ಅವರ ಸ್ನೇಹಿತ ಹರೀಶ್ ಮೇಲೆ ಇಬ್ಬರು ಯುವಕರು ಶುಲ್ಲಕ ಕಾರಣಕ್ಕೆ ಚೂರಿಯಿಂದ ಹಲ್ಲೆ ಮಾಡಿದ್ದು, ಹರೀಶನ ಎಡ ಕುತ್ತಿಗೆ ಹಾಗೂ ಇಬ್ಬರ ಎಡ ಕೈಗಳಿಗೆ ಗಾಯಗಳಾಗಿವೆ. ಬಾರ್‌ನಲ್ಲಿದ್ದ ಇತರರು ಹಲ್ಲೆ ತಡೆದು ಗಾಯಾಳುಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಗಾಯಾಳು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 31/2026 ಕಲಂ 118(1), 109 r/w 3(5) BNS 2023 ರಡಿ ಪ್ರಕರಣ ದಾಖಲಿಸಿಕೊಂಡು ಅಜ್ಜಾವರ ಗ್ರಾಮದ ರಾಜೇಶ್ ಬಿ.ಆರ್ (27) ಮತ್ತು ದಯಾನಂದ್ (30) ಎಂಬ ಆರೋಪಿಗಳನ್ನು ದಸ್ತಗಿರಿ ಮಾಡಿ ತನಿಖೆ ನಡೆಸಲಾಗುತ್ತಿದೆ.
ಬಾರ್ ನಲ್ಲಿ ಇಬ್ಬರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ; ಇಬ್ಬರ ಬಂಧನ
RELATED ARTICLES



