Tuesday, November 4, 2025
Google search engine

Homeರಾಜ್ಯಸುದ್ದಿಜಾಲಬಾಲಕನನ್ನ ರಕ್ಷಿಸಲು ಹೋಗಿ ಇಬ್ಬರು ಯುವಕರು ನೀರು ಪಾಲು!

ಬಾಲಕನನ್ನ ರಕ್ಷಿಸಲು ಹೋಗಿ ಇಬ್ಬರು ಯುವಕರು ನೀರು ಪಾಲು!

ಮೈಸೂರು ಜಿಲ್ಲೆಯ ಬಡಗಲಹುಂಡಿ ಗ್ರಾಮದಲ್ಲಿ ಸಂಭವಿಸಿದ ದುರದೃಷ್ಟ ಘಟನೆಯಲ್ಲಿ, ಇಬ್ಬರು ಸಹೋದರರು ನೀರು ಪಾಲಾಗಿ ಮೃತಪಟ್ಟಿದ್ದಾರೆ. ರಮೇಶ್ ಪುತ್ರ ನವವಿವಾಹಿತ ನಂದನ್ (25) ಮತ್ತು ರಮೇಶ್ ಸಹೋದರನ ಪುತ್ರ ರಾಕೇಶ್ (20) ಮೃತಪಟ್ಟಿದ್ದು, ಇಬ್ಬರೂ ಅಣ್ಣ-ತಮ್ಮಂದಿರ ಮಕ್ಕಳು.

ಮಂಜು ಎಂಬ ಬಾಲಕ ವರಣ ನಾಳೆಯಲ್ಲಿ ಈಜಲು ಹೋಗಿದ್ದಾಗ, ಅವರು ನೀರಿನಲ್ಲಿ ಮುಳುಗುತ್ತಿರುವುದನ್ನು ನಂದನ್ ಮತ್ತು ರಾಕೇಶ್ ಗಮನಿಸಿದರು. ತಕ್ಷಣ ಎರಡೂ ಯುವಕರು ಗೊಬ್ಬರ ತೆಗೆದುಕೊಂಡು ನಾಲೆಯ ಮೇಲ್ಭಾಗಕ್ಕೆ ಹೋಗುತ್ತಿದ್ದರು. ಬಾಲಕನನ್ನು ರಕ್ಷಿಸಲು ನೀರಿಗೆ ಹಾರಿದ್ದಾರೆ. ಆದರೆ, ಪ್ರಯತ್ನದ ವೇಳೆ ನಂದನ್ ಮತ್ತು ರಾಕೇಶ್ ಇಬ್ಬರೂ ನೀರು ಪಾಲಾಗಿ ಮೃತಪಟ್ಟಿದ್ದಾರೆ.

ಈ ಘಟನೆಯು ಗ್ರಾಮದಲ್ಲಿ ಆಕ್ರಂದನ ಸೃಷ್ಟಿಸಿರುತ್ತದೆ. ಸ್ಥಳೀಯರು ಮೃತರ ಕುಟುಂಬಕ್ಕೆ ಸಹಾನುಭೂತಿ ತೋರಿಸಿದ್ದಾರೆ ಮತ್ತು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಬಾಲಕ ಮಂಜು ಸಾವನ್ನು ತಪ್ಪಿಸಿದರೂ, ಇಬ್ಬರು ಯುವಕರ ದುರ್ಮರಣದಿಂದ ಗ್ರಾಮದಲ್ಲಿ ಆಕ್ರಂದನ ಸೃಷ್ಟಾಗಿದೆ.

RELATED ARTICLES
- Advertisment -
Google search engine

Most Popular