Wednesday, August 20, 2025
Google search engine

Homeರಾಜ್ಯಸುದ್ದಿಜಾಲಎಚ್.ಡಿ. ಕೋಟೆಯಲ್ಲಿ ಯುಡಿಐಡಿ ಕಾರ್ಡ್ ಶಿಬಿರ: 150ಕ್ಕೂ ಅಧಿಕ ವಿಶೇಷ ಚೇತನರಿಗೆ ತಜ್ಞ ವೈದ್ಯರಿಂದ ತಪಾಸಣೆ

ಎಚ್.ಡಿ. ಕೋಟೆಯಲ್ಲಿ ಯುಡಿಐಡಿ ಕಾರ್ಡ್ ಶಿಬಿರ: 150ಕ್ಕೂ ಅಧಿಕ ವಿಶೇಷ ಚೇತನರಿಗೆ ತಜ್ಞ ವೈದ್ಯರಿಂದ ತಪಾಸಣೆ

ವರದಿ ಎಡತೊರೆ ಮಹೇಶ್

ಎಚ್ ಡಿ ಕೋಟೆ: ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹೆಚ್‍ಡಿ ಕೋಟೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ೆಚ್‍ಡಿ ಕೋಟೆ.ಇವರ ವತಿಯಿಂದ ,

ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ.ಹೆಚ್.ಡಿ.ಕೋಟೆ,ಸಾರ್ವಜನಿಕ ಆಸ್ಪತ್ರೆ ಹೆಚ್.ಡಿ.ಕೋಟೆ ,ಇವರ ಸಹೋಗದೊಂದಿಗೆ, ವಿಕಲಚೇತನರ ಮನೆ ಬಾಗಿಲಿಗೆ ಯುಡಿಐಡಿ ಕಾರ್ಡ್.ದಿನಾಚರಣೆ 2025 ಕಾರ್ಯ ಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀನಿವಾಸ್ ಅಧ್ಯಕ್ಷತೆಯನ್ನು ವಹಿಸಿ,ಕಾರ್ಯಕ್ರಮವನ್ನು ಉದ್ಘಾಟಿಸಿದರು.

ತಾಲ್ಲೂಕು ವಿಕಲಚೇತನರ ಕಾರ್ಯಕರ್ತರಾದ ಮಹದೇವಯ್ಯ ಕಾರ್ಯಕ್ರಮದ ಪ್ರಾಸ್ತವಿಕ ನುಡಿಯನ್ನು ನೋಡಿದರು.

ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ”ರವಿಕುಮಾರ್ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ 300ರಿಂದ 350 ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ಮಾಡಿಸಬೇಕಾಗಿದೆ, ಆದ್ದರಿಂದ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ, ಹಾಗೂ ಸರ್ಕಾರದಿಂದ ಬರುವ ಸೌಲತ್ತುಗಳನ್ನು ವಿಶೇಷ ಚೇತನರಿಗೆ ನೀಡಬೇಕಾದರೆ ಯುಡಿಐಡಿ ಕಾರ್ಡ್ ಕಡ್ಡಾಯವಾಗಿರುತ್ತದೆ, ಆದುದರಿಂದ ಫಲಾನುಭವಿಗಳು ಈ ಶಿಬಿರವನ್ನು ಸದುಪಯೋಗಪಡಿಸಿ ಪಡೆಸಿಕೊಂಡು ಯುಡಿಐಡಿ ಕಾರ್ಡನ್ನು ಪಡೆದುಕೊಳ್ಳಿ ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಗಳಾದ ಡಾ” ಪೂರ್ಣಿಮಾ ಮಾತನಾಡಿ ನಾನು ಕೆಲವು ದಿನಗಳಿಂದ ಆಡಳಿತ ವೈದ್ಯಾಧಿಕಾರಿ ಅಧಿಕಾರಿಯನ್ನು ತೆಗೆದುಕೊಂಡಿರುತ್ತೇನೆ ಮುಂದಿನ ದಿನಗಳಲ್ಲಿ ಪ್ರತಿ ಮಾಹೆಯಲ್ಲಿ 15 ದಿನಕ್ಕೊಮ್ಮೆ ವಿಶೇಷ ಚೇತನರಿಗೆ ಒಂದು ಶಿಬಿರವನ್ನು ನಡೆಸುತ್ತೇವೆ ಎಂದು ತಿಳಿಸಿದರು.

ತಾಲೂಕು ದಂಡಾಧಿಕಾರಿಗಳಾದ ಶ್ರೀನಿವಾಸ್ ಮಾತನಾಡಿ ಆರೋಗ್ಯ ಇಲಾಖೆ ಮತ್ತು ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯಿಂದ ವತಿಯಿಂದ ಈ ಶಿಬಿರವನ್ನು ನಡೆಸುತ್ತಿರುವುದು ತುಂಬಾ ಸಂತೋಷಕರವಾದ ವಿಷಯ ಸರ್ಕಾರಿ ಸೌಲಭ್ಯವನ್ನು ತೆಗೆದುಕೊಳ್ಳಬೇಕಾದರೆ ಯುಡಿಐಡಿ ಕಾರ್ಡ್ ಬೇಕಾಗುತ್ತದೆ ಆದುದರಿಂದ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಫಲಾನುಭವಿಗಳು ಬಂದು ಯುಡಿಐಡಿ ಕಾರ್ಡನ್ನು ಪಡೆದುಕೊಳ್ಳಿ ಎಂದು ತಿಳಿಸಿದರು. ಈ ಕಾರ್ಯ ಕ್ರಮದಲ್ಲಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಭಾರತ ಸರ್ಕಾರದ ನಶೆಮುಕ್ತ ಭಾರತ ಅಭಿಯಾನ ಯೋಜನೆ ಪ್ರತಿಜ್ಞಾವಿಧಿ ಬೋಧಿಸಲಾಯಿತು ಮತ್ತು ಸ್ವೀಕರಿಸಿದರು.ಹಾಗೂ ಶಿಬಿರಲ್ಲಿ ಒಟ್ಟು 150 ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ಮಾಡಿಸಲು ತಜ್ಞವೈದ್ಯರಿಂದ ತಪಾಸಣೆಯನ್ನು ಮಾಡಿಸಲಾಯಿತು.

ಈ ಶಿಬಿರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಕಣ್ಣಿನ ತಜ್ಞರಾದ ಡಾ” ರಾಜಶೇಖರ್, ಕಿವಿ ಮತ್ತು ಮೂಗಿನ ತಜ್ಞರಾದ ಡಾ.” ಶಿವಕುಮಾರ್, ಮೂಳೆ ತಜ್ಞರಾದಡಾ” ಶ್ರೀನಿವಾಸ್ ಮೂರ್ತಿ, ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದ ಶಿಕ್ಷಕರಾದ ಗಿರೀಶ್, ಮಹದೇವ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರವಿರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಗಾಯತ್ರಿ, ಶಾಂತ, ವಿಶೇಷ ಚೇತನರ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು, ವಿಶೇಷ ಚೇತನರು , ಹಿರಿಯ ನಾಗರಿಕರು ಸಾರ್ವಜನಿಕರು,ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular