Thursday, May 22, 2025
Google search engine

Homeರಾಜಕೀಯಯುಗಾದಿ: ಸಿದ್ದರಾಮಯ್ಯ ಅವರಿಗೆ ವ್ಯಂಗ್ಯವಾಗಿ ಶುಭ ಕೋರಿದ ಬಿಜೆಪಿ

ಯುಗಾದಿ: ಸಿದ್ದರಾಮಯ್ಯ ಅವರಿಗೆ ವ್ಯಂಗ್ಯವಾಗಿ ಶುಭ ಕೋರಿದ ಬಿಜೆಪಿ

ಬೆಂಗಳೂರು: ಯುಗಾದಿ ದಿನದಂದು ರಾಜ್ಯ ಬಿಜೆಪಿ ಸಿಎಂ ಸಿದ್ದರಾಮಯ್ಯ ಅವರಿಗೆ ವ್ಯಂಗ್ಯವಾಗಿ ಎಕ್ಸ್ ಪೋಸ್ಟ್ ಮಾಡಿ ಹಬ್ಬದ ಶುಭಾಶಯ ಕೋರಿದೆ.

ಎಕ್ಸ್ ಪೋಸ್ಟ್ ನಲ್ಲಿ ”ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯುಗಾದಿ ಹಬ್ಬದ ಶುಭಾಶಯಗಳು. ಹಳೆಯ ಎಲೆ ಉದುರಿ ಹೊಸ ಚಿಗುರು ಮೂಡುವ ಸಮಯ ಬಂದಿದೆ. ಇನ್ನಾದರೂ ಭಗವಂತ ಅವರಿಗೆ ಸದ್ಬುದ್ಧಿ ಕರುಣಿಸಿ ಈ ಬದಲಾವಣೆ ತರಲೆಂದು ವಿಘ್ನ ವಿನಾಶಕ ವಿನಾಯಕನಲ್ಲಿ ಕರುನಾಡು ಮೊರೆಯಿಡುತ್ತಿದೆ.

ಅರಾಜಕತೆಯನ್ನು ಹೋಗಲಾಡಿಸುವ ಬುದ್ಧಿ ನೀಡಲಿ

ಕಾವೇರಿಯನ್ನು ತಮಿಳುನಾಡಿಗೆ ಹರಿಸದೆ ಕನ್ನಡಿಗರ ಹಿತಾಸಕ್ತಿ ಕಾಪಾಡುವ ಸ್ಥೈರ್ಯ ತೋರಿಸಲಿ

ಸುಳ್ಳು‌ ಹೇಳುವುದನ್ನು ಕಡಿಮೆ ಮಾಡುವ ಜ್ಞಾನ ನೀಡಲಿ

ರೈತರಿಗೆ ಬರ ಪರಿಹಾರ ನೀಡುವಂತಹ ಗುಣ ಕರುಣಿಸಲಿ

ಮಹಿಳೆಯರ ರಕ್ಷಣೆ ಮಾಡುವ ಹೊಣೆ ಹೊರುವಂತಾಗಲಿ

ಭಯೋತ್ಪಾದಕರನ್ನು ಹತ್ತಿಕ್ಕುವ ಧೈರ್ಯ ತುಂಬಲಿ

ಬಡವರ ಮೇಲೆ ಮಮಕಾರ ತೋರುವ ಮಾನವೀಯತೆ ದೊರೆಯಲಿ

ಮೋಜು ಮಾಡದೆ ಕನ್ನಡಿಗರ ತೆರಿಗೆ ಹಣ ಉಳಿಸುವ ಜವಾಬ್ದಾರಿ ತೋರಲಿ

ನಾಲಿಗೆ ಹರಿಬಿಡದೆ ಗೌರವ ನೀಡುವ ಸಂಸ್ಕಾರ ಸಿಗುವಂತಾಗಲಿ

ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ‌ ಕೆಲಸ ಬಿಡುವ ಸದ್ಗುಣ ನೀಡಲಿ

ಇಷ್ಟು ಬುದ್ಧಿಯನ್ನು ಆ ಭಗವಂತ ಕರುಣಿಸಿ‌ಬಿಟ್ಟರೆ, ಸಮೃದ್ಧವಾಗಿ ಕಾಲಕಾಲಕ್ಕೆ ಮಳೆ-ಬೆಳೆಯಾಗಿ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಲಿದೆ ಎಂದು ಬಿಜೆಪಿ ಟೀಕಾತ್ಮಕ ಪೋಸ್ಟ್ ಮಾಡಿ ಶುಭ ಕೋರಿದೆ.

RELATED ARTICLES
- Advertisment -
Google search engine

Most Popular