ಮಂಡ್ಯ: ಜನಗಣತಿ ಕಾರ್ಯವು ರಾಷ್ಟ್ರದ ಅತ್ಯಂತ ಪ್ರಮುಖ ಮತ್ತು ಬೃಹತ್ ಕಾರ್ಯಕ್ರಮವಾಗಿದ್ದು, ದೇಶದ ಜನಗಣತಿ ತರಬೇತಿ ಕಾರ್ಯಕ್ಕೆ ನಿಯೋಜಿಸಿರುವ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಮರ್ಪಕವಾಗಿ ತರಬೇತಿಯನ್ನು ಪಡೆದು ಪ್ರಾಮಾಣಿಕವಾಗಿ ಜವಾಬ್ದಾರಿಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ ಕುಮಾರ ಅವರು ನಿರ್ದೇಶನ ನೀಡಿದರು.
ಇಂದು ನಗರದ ದೇವರಾಜ ಅರಸು ಭವನದಲ್ಲಿ ನಡೆದ ಜನಗಣತಿ ಕಾರ್ಯದ ಫೀಲ್ಡ್ ಲೆವಲ್ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜನಗಣತಿಯು ದೇಶದ ಅತಿದೊಡ್ಡ ಸಾರ್ವಜನಿಕ ಅಭ್ಯಾಸ ಚಟುವಟಿಕೆಯಾಗಿದ್ದು, ದೇಶದಲ್ಲಿ ಅತ್ಯಂತ ತಳಮಟ್ಟದಿಂದ ಮಾಹಿತಿ ಸಂಗ್ರಹಿಸುವ ಏಕೈಕ ಕಾರ್ಯಕ್ರಮ ಇದಾಗಿದ್ದು, ಮುಂದಿನ 10 ವರ್ಷಗಳ ಕಾಲ ದೇಶದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಈ ದಾಖಲೆ ಬಳಕೆಯಾಗಲಿದ್ದು, ಗಣತಿ ಕಾರ್ಯದಲ್ಲಿ ತೊಡಗಿರುವ ಪ್ರತಿಯೊಬ್ಬರೂ ಅತ್ಯಂತ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕುಎಂದು ತಿಳಿಸಿದರು.
ಜನಗಣತಿಯು ರಾಷ್ಟ್ರೀಯ ಮಟ್ಟದ ಪ್ರಮುಖ ಕಾರ್ಯವಾಗಿದ್ದು ಚುನಾವಣಾ ಕೆಲಸದಷ್ಟೇ ಗಂಭೀರವಾದುದು. ಅಧಿಕಾರಿಗಳ ನಡುವೆ ಸಮರ್ಪಕ ಸಮನ್ವಯತೆ ಇರಬೇಕು ಎಂದು ಅವರು ತಿಳಿಸಿದರು.
ಈ ಬಾರಿಯ ಜನಗಣತಿಯು ಸ್ವತಂತ್ರ ನಂತರ ನಡೆಯುತ್ತಿರುವ 8 ನೇ ಜನಗಣತಿಯಾಗಿದ್ದು, ಡಿಜಿಟಲ್ ಮೋಡ್ ನಲ್ಲಿ ನಡೆಯುತ್ತಿರುವ ಮೊದಲ ಗಣತಿಯಾಗಿದೆ. ಜನಗಣತಿಯು 2 ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ 2026ರ ಏಪ್ರಿಲ್ 16 ರಿಂದ ಮೇ 15 ರ ವರೆಗೆ ಮನೆ ಪಟ್ಟಿ ಕ್ಷೇತ್ರ ಕಾರ್ಯ ನಡೆಯಲಿದೆ ಹಾಗೂ ಎರಡನೇ ಹಂತದ ಜನಗಣತಿಯೂ 2027ರ ಫೆಬ್ರವರಿ 1 ರಿಂದ ಫೆಬ್ರವರಿ 28ರವರೆಗೆ ನಡೆಯಲ್ಲಿದೆ ಎಂದು ತಿಳಿಸಿದರು.
2027ನೇ ಜನಗಣತಿಯ ಮಹತ್ವ ಮತ್ತು ತೀವ್ರತೆಯ ಅರ್ಥ ಮಾಡಿಕೊಂಡು ಕಾರ್ಯನಿರ್ವಹಿಸಬೇಕು ಅಧಿಕಾರಿಗಳು ತರಬೇತಿಗೆ ವಿಳಂಬವಾಗಿ ಬಾರದೆ ಜವಾಬ್ದಾರಿಯುತವಾಗಿ ತರಬೇತಿ ಪಡೆದು ಗಂಭೀರವಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
2027 ರ ಜನಗಣತಿಯ ಮನೆಗಳ ಪಟ್ಟಿ (house listing )ತರಬೇತಿ ಕಾರ್ಯಗಾರ ಮೂರು ದಿನಗಳ ಕಾಲ ಇದ್ದು ದೇಶಾದ್ಯಂತ ಮಾಡುತ್ತಿರುವುದರಿಂದ ತರಬೇತಿಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬೇಕು ಮತ್ತು ತಾಲ್ಲೂಕುವಾರು enumerators & supervisors ಗಳಿಗೆ ತಿಳಿಸಬೇಕು ಎಂದು ಸೂಚಿಸಿದರು.
ಗುಣಮಟ್ಟ ತರಬೇತಿಯನ್ನು ಪಡೆದು ನ್ಯೂನ್ಯತೆ ಆಗದಂತೆ ಸಮರ್ಥವಾಗಿ ತರಬೇತಿ ಪಡೆಯಕೊಳ್ಳಬೇಕು ಹಾಗೂ ಜೆಲ್ಲೆಯಲ್ಲಿ 4,000 ಕ್ಕೂ ಹೆಚ್ಚು enumerators ಗಳನ್ನು ಆಯೋಜಿಸಿದ್ದು ತಾಲ್ಲೂಕುವಾರು enumerators & supervisors ರವರಿಗೆ ಸಮರ್ಪಕವಾದ ಗುಣಮಟ್ಟ ತರಬೇತಿಯನ್ನು ನೀಡಬೇಕು ಎಂದು ಸೂಚಿಸಿದರು.
ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಮೂರ್ತಿ ರವರು ಮಾತನಾಡಿ 2027ರ ಜನಗಣತಿ ತರಬೇತಿ ಕಾರ್ಯಗಾರವನ್ನುಅಧಿಕಾರಿಗಳು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕು ಮುಂದಿನ 1.5 ವರ್ಷ ವರ್ಷಗಳು ಕಾರ್ಯನಿರ್ವಹಿಸಬೇಕಾಗಿರುವುದರಿಂದ ಉತ್ತಮ ತರಬೇತಿಯನ್ನು ಪಡೆದು, ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಮನೆಗಳ ಪಟ್ಟಿ ಮತ್ತು ಬ್ಲಾಕ್ ನಕ್ಷೆ ರೆಡಿಯಾಗುತ್ತಿದ್ದು ಬ್ಲಾಕ್ ಲ್ಯಾಂಡ್ ಮಾರ್ಕ್ ಅನ್ನು ಸ್ಥಾಪಿಸಲಾಗುತ್ತಿದೆ. ಜಿಯೋ ಟ್ಯಾಗ್ ಮೂಲಕ ಮನೆಗಳ ಪಟ್ಟಿಯನ್ನು ಮಾಡಬೇಕು.ಮನೆಗಳ ಪಟ್ಟಿಯಲ್ಲಿ ಮನೆ, ಛಾವಣಿ ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು ಮತ್ತು ಪರಿಶೀಲನೆ ಮಾಡಬೇಕು ಎಂದು ಹೇಳಿದರು.
ಫೀಲ್ಡ್ ತರಬೇತಿ ಗ್ರೂಪ್ ಮಾಡಿ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಡಿಜಿಟಲ್ ಮೂಲಕ ಅಪ್ಡೇಟ್ ಮಾಡುವುದರಿಂದ ತರಬೇತಿಯನ್ನು ಅಧಿಕಾರಿಗಳು ಮತ್ತು enumerators & supervisors ಸಮರ್ಪವಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಸಾಂಖಿಕ ಅಧಿಕಾರಿ ಕೇಶವಮೂರ್ತಿ, ಜಿಲ್ಲಾಧಿಕಾರಿ ಕಚೇರಿಯ ಸಹಾಯಕರು ಚೇತನ್ ಮತ್ತು ಧನ್ಯಾರವರು ಉಪಸ್ಥಿತರಿದ್ದರು.



