Friday, September 26, 2025
Google search engine

Homeರಾಜ್ಯಸುದ್ದಿಜಾಲಗೋಕುಲಂ ಶಾಲೆಯಲ್ಲಿ ಮುಗಿಯದ ಗೊಂದಲ: ಕ್ರಿಮಿನಲ್ ಕೇಸ್ ದಾಖಲು ಮಾಡುವಂತೆ ಪೋಷಕರ ಒತ್ತಾಯ

ಗೋಕುಲಂ ಶಾಲೆಯಲ್ಲಿ ಮುಗಿಯದ ಗೊಂದಲ: ಕ್ರಿಮಿನಲ್ ಕೇಸ್ ದಾಖಲು ಮಾಡುವಂತೆ ಪೋಷಕರ ಒತ್ತಾಯ

ನಂಜನಗೂಡು: ಪೋಷಕರಿಗೆ ಯಾಮಾರಿಸಿ ಮಾನ್ಯತೆ ಪಡೆಯದೆ ಅಕ್ರಮವಾಗಿ ಶಾಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಖಾಸಗಿ ಶಾಲೆಯ ಮುಂದೆ ಪಾಲಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಗುರುವಾರ ನಡೆದಿದೆ.

ನಂಜನಗೂಡು ತಾಲ್ಲೂಕಿನ ಹುಣಸನಾಳು ಗ್ರಾಮದ ಬಳಿ ಇರುವ ಗೋಕುಲಂ ಶಾಲೆಯಲ್ಲಿ ಈ ಘಟನೆ ನಡೆದಿದೆ. ಗೋಕುಲಂ ಇಂಟರ್ನ್ಯಾಷನಲ್ ಸ್ಕೂಲ್ ಹೆಸರಿನಲ್ಲಿ ಸರ್ಕಾರದಿಂದ ಯಾವುದೇ ಮಾನ್ಯತೆ ಪಡೆಯದೆ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಒಂದರಿಂದ ಐದನೇ ತರಗತಿಯವರೆಗೆ ಈ ಹಿಂದೆ ಇದ್ದ ಗಾರ್ಡಿಯನ್ ಏಂಜಲ್ಸ್ ಸ್ಕೂಲ್ ಹೆಸರಿನಲ್ಲಿ ಅನುಮತಿ ಪಡೆದುಕೊಳ್ಳಲಾಗಿತ್ತು. ಇದೇ ಅನುಮತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಆದರೆ, ಅನುಮತಿಯನ್ನು ನವೀಕರಣ‌ ಮಾಡದೆ ಶಾಲೆಯನ್ನು ನಡೆಸುತ್ತಿದ್ದಾರೆ. ಸರ್ಕಾರ ಮಾನ್ಯತೆ ನೀಡಿಲ್ಲ ಹಾಗಾಗಿ ಈ ಕೂಡಲೇ ಗೋಕುಲಂ ಇಂಟರ್ನ್ಯಾಷನಲ್ ಸ್ಕೂಲ್ ಹೆಸರಿನಲ್ಲಿ ಅಳವಡಿಸಿರುವ ನಾಮಫಲಕವನ್ನು ಕಿತ್ತುಹಾಕಿ ಕ್ರಿಮಿನಲ್ ಕೇಸ್ ದಾಖಲು ಮಾಡುವಂತೆ ಎಂದು ಪೋಷಕರು ಪಟ್ಟುಹಿಡಿದರು.

ಈಗಾಗಲೇ 1 ರಿಂದ 5ನೇ ತರಗತಿಯವರೆಗೆ ರಾಜ್ಯ ಪಠ್ಯಕ್ರಮ ಬೋಧನೆಗೆ ಅನುಮತಿ ನೀಡಲಾಗಿದೆ. ಆದರೆ, ಶಾಲಾ ಆಡಳಿತ ಮಂಡಳಿ ಕೇಂದ್ರ ಪಠ್ಯಕ್ರಮ ಬೋಧನೆ ಮಾಡುತ್ತಿದ್ದೇವೆ ಎಂದು ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಿರುವ ಶುಲ್ಕವನ್ನು ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.

ನಂತರ ಮಾತನಾಡಿದ ಡಿಡಿಪಿಐ ಜವರೇಗೌಡ ಪೋಷಕರ ಜೊತೆ ಸಭೆ ನಡೆಸಿ ಚರ್ಚೆ ನಡೆಸಿದ್ದೇವೆ. ಈಗಾಗಲೇ ನಮ್ಮ ಇಲಾಖೆಯಿಂದ 1 ರಿಂದ 5 ನೇ ತರಗತಿಯವರೆಗೆ ಅನುಮತಿ ನೀಡಲಾಗಿದೆ. 6ನೇ ತರಗತಿ ಅನಧಿಕೃತವಾಗಿ ನಡೆಸುತ್ತಿದ್ದಾರೆ. ಮಾನ್ಯತೆ ನವೀಕರಣ ಆಗಿಲ್ಲ ಆದಷ್ಟು ಬೇಗ ನವೀಕರಣ ಮಾಡುವಂತೆ ತಿಳಿಸಿದ್ದೇನೆ. ಕೇಂದ್ರೀಯ ಪಠ್ಯಕ್ರಮವನ್ನು ಮಾಡುತ್ತಿವೆ ಎಂದು ಪೋಷಕರಿಂದ ಶೂಲ್ಕವನ್ನು ತೆಗೆದುಕೊಂಡಿರುವುದನ್ನು ಕೂಡಲೇ ವಾಪಸ್ ನೀಡಬೇಕು ಎಂದು ಸೂಚಿಸಿದ್ದೇನೆ. ಪೋಷಕರನ್ನು ನಂಬಿಸಿ ಸುಳ್ಳು ಮಾಹಿತಿ ನೀಡಿದ್ದಾರೆ. ಅನಧಿಕೃತವಾಗಿ 6ನೇ ತರಗತಿಯನ್ನು ನಡೆಸುತ್ತಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ. ಅರ್ಹತೆ ಇರುವ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮಾನ್ಯತೆಯನ್ನು ರದ್ದು ಪಡಿಸಲಾಗುತ್ತದೆ ಎಂದು ಶಾಲಾ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು. ಈಗಾಗಲೇ ಶಾಲಾ ಆಡಳಿತ ಮಂಡಳಿ ಒಂದು ತಿಂಗಳ ಅವಧಿಯನ್ನು ಕೇಳಿದ್ದಾರೆ.‌ ಲಿಖಿತವಾಗಿ ನೀಡುವಂತೆ ಪೋಷಕರು ಕೇಳಿಕೊಂಡಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ನನಗೆ ಸರಿಯಾದ ಮಾಹಿತಿ ನೀಡದೆ ಬಿಇಒ ಗೊಂದಲ ಸೃಷ್ಟಿ ಮಾಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಹೇಶ್ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧವು ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಪತ್ರಕರ್ತರ ಮೇಲೆ ಡಿಡಿಪಿಐ ಗರಂ

ಸೆ.25 ರಂದು ಗೋಕುಲಂ ಶಾಲೆಗೆ ಡಿಡಿಪಿಐ ಅವರನ್ನು ಕರೆಸುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಮಹೇಶ್ ಭರವಸೆ ನೀಡಿದ್ದರು. ಅದರಂತೆ ಶಾಲೆಗೆ ಶಿಕ್ಷಣ ಇಲಾಖೆಯ ಡಿಡಿಪಿಐ ಜವರೇಗೌಡ ಆಗಮಿಸಿದ್ದರು. ಈ ವೇಳೆ ಪತ್ರಕರ್ತರು ವಿಡಿಯೋ ಮತ್ತು ಫೋಟೋವನ್ನು ಚಿತ್ರೀಕರಣ ಮಾಡುವಾಗ ವಿಡಿಯೋ, ಫೋಟೋ ತೆಗೆಯಬೇಡಿ ಎಂದು ಡಿಡಿಪಿಐ ಜವರೇಗೌಡ ಪತ್ರಕರ್ತರ ಮೇಲೆ ಗರಂ ಆಗಿದ್ದರು. ಈ ನಡುವೆ ಡಿಡಿಪಿಐ ಮತ್ತು ಪತ್ರಕರ್ತರ ನಡುವೆ ಕೆಲವು ಸಮಯ ಮಾತಿನ ಚಕಮಕಿಯೂ ನಡೆಯಿತು.

ರಾಜ ಕಾಲುವೆ ಒತ್ತುವರಿ:

ಗೋಕುಲಂ ಇಂಟರ್ನ್ಯಾಷನಲ್ ಸ್ಕೂಲ್ ಎಂಬ ಹೆಸರಿನಲ್ಲಿ ದೊಡ್ಡ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಕಟ್ಟಡದ ಮುಂಭಾಗವೇ ಹಾದುಹೋಗಿರುವ ರಾಜ ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಶಾಲೆಯ ಗೋಪುರವನ್ನು ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಅನುಮತಿ ಯಾರು ಕೊಟ್ಟಿದ್ದಾರೆ. ಕೂಡಲೇ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡು ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿರುವ ಶಾಲೆಯ ಗೋಪುರ ಮತ್ತು ಕಾಂಪೌಂಡನ್ನು ತೆರವುಗೊಳಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ರೈತ ಸಂಘಟನೆಯ ಮುಖಂಡ ಹುಣಸನಾಳು ಮಹೇಶ್ ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular