ನವದೆಹಲಿ/ಬೆಂಗಳೂರು : ಕೇಂದ್ರ ಸರ್ಕಾರ 2026-27ರ ಬಜೆಟ್ ಪ್ರಸ್ತುತ ಪಡಿಸಿದೆ. ನಿರ್ಮಲಾ ಸೀತಾರಾಮನ್ ಅವರು ಸತತ 9ನೇ ಬಜೆಟ್ ಮಂಡಿಸಿದರು. ಈ ಮೂಲಕ ದೇಶದಲ್ಲಿ ಅತ್ಯಧಿಕ ಬಜೆಟ್ ಮಂಡಿಸಿದ ಹಣಕಾಸು ಸಚಿವೆಯಾಗಿ ದಾಖಲೆ ಬರೆದಿದ್ದಾರೆ. ಈ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಲವು ಕೊಡುಗೆಗಳನ್ನೂ ಘೋಷಿಸಿದ್ದಾರೆ. ಬೆಟ್ಟದಷ್ಟು ನಿರೀಕ್ಷೆಗಳೂ ಈಡೇರಿದೇ ಉಳಿದಿವೆ. ಅದೇನು ಅಂತ ನೋಡೋದಾದ್ರೆ…
ಕರ್ನಾಟಕಕ್ಕೆ ಪ್ರತ್ಯಕ್ಷ & ಪರೋಕ್ಷವಾಗಿ ಸಿಕ್ಕಿದ್ದೇನು?
* ಹೈ-ಸ್ಪೀಡ್ ರೈಲ್ ಕಾರಿಡಾರ್‌ಗಳು:
ಹೈದರಾಬಾದ್- ಬೆಂಗಳೂರು ಮತ್ತು ಚೆನ್ನೈ-ಬೆಂಗಳೂರು ಮಾರ್ಗಗಳಲ್ಲಿ ಹೈ-ಸ್ಪೀಡ್ ರೈಲುಗಳ ಅಭಿವೃದ್ಧಿ.
* ಟರ್ಟಲ್ ಟ್ರೈಲ್ಸ್ (ಕಡಲಾಮೆ ಮಾರ್ಗಗಳು):
ಒಡಿಶಾ, ಕರ್ನಾಟಕ ಮತ್ತು ಕೇರಳದ ಕರಾವಳಿ ಪ್ರದೇಶಗಳಲ್ಲಿ ಕಡಲಾಮೆಗಳ ಮೊಟ್ಟೆಯಿಡುವ ಸ್ಥಳಗಳಲ್ಲಿ ಪ್ರಕೃತಿ-ಆಧಾರಿತ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಯೋಜನೆ. ಇದು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಮತ್ತು ಸಂರಕ್ಷಣೆಯನ್ನು ಉತ್ತೇಜಿಸುತ್ತದೆ.
* ಗಂಧದ ಮರಗಳ ಪುನರುಜ್ಜೀವನ ಯೋಜನೆ:
ಶ್ರೀಗಂಧದ ಉದ್ಯಮ ಪುನರುಜ್ಜೀವನಗೊಳಿಸುವ ವಿಶೇಷ ಯೋಜನೆ, ರಾಜ್ಯದಲ್ಲಿ ಶ್ರೀಗಂಧ ಬೆಳೆಯುವ ರೈತರಿಗೆ ಅನುಕೂಲ
* ಕೋಕೋ ಮತ್ತು ತೆಂಗು ಬೆಳಗಾರರಿಗೆ ವಿಶೇಷ ಯೋಜನೆ:
ಕೋಕೋ ಮತ್ತು ತೆಂಗು ಉತ್ಪನ್ನಗಳಿಗೆ ವಿಶೇಷ ಯೋಜನೆಗಳು. ತೆಂಗು ಉತ್ಪಾದನೆಯನ್ನು ಹೆಚ್ಚಿಸಲು ಮೂರು ಕೋಟಿ ಫಲಾನುಭವಿಗಳಿಗೆ ನಿಧಿ ನೀಡಲಾಗುತ್ತದೆ. ಇದು ತುಮಕೂರು, ಮಂಗಳೂರು, ಉಡುಪಿ ಮತ್ತು ಕಾರವಾರ ಪ್ರದೇಶಗಳ ರೈತರಿಗೆ ಪ್ರಯೋಜನಕಾರಿ.
* ಕರಾವಳಿ ಪ್ರದೇಶಗಳಲ್ಲಿ ಪರ್ವತಾರೋಹಣ:
ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಮೌಂಟೇನ್ ಟ್ರೆಕ್ಕಿಂಗ್‌ಗೆ ಅನುಮತಿ, ಇದು ಪ್ರವಾಸೋದ್ಯಮ ಉತ್ತೇಜಿಸುತ್ತದೆ
* ರಾಜ್ಯಗಳಿಗೆ ಹಣಕಾಸು ಆಯೋಗದ ಅನುದಾನ:
ಎಲ್ಲಾ ರಾಜ್ಯಗಳಿಗೆ (ಕರ್ನಾಟಕ ಸೇರಿದಂತೆ) 1.4 ಲಕ್ಷ ಕೋಟಿ ರೂ. ಅನುದಾನ. ಇದರಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಮತ್ತು ವಿಪತ್ತು ನಿರ್ವಹಣೆಗೆ ನಿಧಿ ಸೇರಿದೆ.
* ಸಿಟಿ ಇಕನಾಮಿಕ್ ರೀಜನ್‌ಗಳು (CER):
ಪ್ರತಿ CERಗೆ 5 ವರ್ಷಗಳಲ್ಲಿ 5,000 ಕೋಟಿ ರೂ. ಹಂಚಿಕೆ. ಟೈರ್-2 ಮತ್ತು ಟೈರ್-3 ನಗರಗಳ ಅಭಿವೃದ್ಧಿಗೆ ಗಮನ, ಇದರಡಿ ಕರ್ನಾಟಕದಲ್ಲಿನ ಎರಡು ಮತ್ತು ಮೂರನೇ ಹಂತದ ನಗರಗಳು ಪ್ರಯೋಜನ ಪಡೆಯಬಹುದು.
* MSME ಗ್ರೋತ್ ಫಂಡ್:
10,000 ಕೋಟಿ ರೂ. ನಿಧಿ ಮೀಸಲಿಟ್ಟಿದ್ದು ಇದು ಕರ್ನಾಟಕದ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಬೆಂಬಲಿಸುತ್ತದೆ
* ರಾಷ್ಟ್ರೀಯ ಟೆಕ್ಸ್‌ಟೈಲ್ ಪಾಲಿಸಿ ಮತ್ತು ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗಳು:
ಟೆಕ್ಸ್‌ಟೈಲ್ ಉದ್ಯಮವನ್ನು ಉತ್ತೇಜಿಸುವ ಯೋಜನೆಗಳು, ಕರ್ನಾಟಕದ ಟೆಕ್ಸ್‌ಟೈಲ್ ಹಬ್‌ಗಳಿಗೆ ಪ್ರಯೋಜನ
* ಮಹಿಳಾ ಸಬಲೀಕರಣ ಯೋಜನೆಗಳು:
‘ಸ್ಟ್ರೀ ಮಾರ್ಟ್’ ಯೋಜನೆ ಮತ್ತು ಪ್ರತಿ ಜಿಲ್ಲೆಯಲ್ಲಿ ಮಹಿಳಾ ವಸತಿ ಸೌಲಭ್ಯಗಳ ರಾಜ್ಯಕ್ಕೂ ದೊರೆಯಲಿದೆ
* ಇತರ ರಾಷ್ಟ್ರೀಯ ಯೋಜನೆಗಳು:
ಸೆಮಿಕಂಡಕ್ಟರ್ ಮಿಷನ್ 2.0, ಎಲೆಕ್ಟ್ರಾನಿಕ್ಸ್ ಕಾಂಪೋನೆಂಟ್ ಉತ್ಪಾದನೆಗೆ 40,000 ಕೋಟಿ ರೂ., ಬಯೋಫಾರ್ಮಾ ಶಕ್ತಿ ಯೋಜನೆಗೆ 10,000 ಕೋಟಿ ರೂ., ಕರ್ನಾಟಕದ ಟೆಕ್ ಮತ್ತು ಫಾರ್ಮಾ ಹಬ್‌ಗಳಿಗೆ ಪರೋಕ್ಷ ಪ್ರಯೋಜನ.
ಈಡೇರದ ಕರ್ನಾಟಕದ ನಿರೀಕ್ಷೆಗಳು
* ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಈಗಾಗಲೇ ಘೋಷಿಸಲಾಗಿರುವ 5,300 ಕೋಟಿ ರೂ. ಇನ್ನು ಬಿಡುಗಡೆಯಾಗಿಲ್ಲ, ಈ ಬಾರಿಯೂ ಇದರ ಪ್ರಸ್ತಾಪ ಇಲ್ಲ.
* ಕರ್ನಾಟಕಕ್ಕೆ ಹಣಕಾಸು ಆಯೋಗ ಶಿಫಾರಸು ಮಾಡಿರುವ 11,495 ಕೋಟಿ ರೂ. ಅನುದಾನ ಬಿಡುಗಡೆಗೆ ಬೇಡಿಕೆ ಇತ್ತು, ಈಗ 16ನೇ ಹಣಕಾಸು ಆಯೋಗದ ಶಿಫಾರಸ್ಸು ಶುರುವಾಗಿದ್ದು ಬಹುತೇಕ ಈ ಹಣ ಬರುವುದು ಅನುಮಾನವಾಗಿದೆ.
* ಬೆಂಗಳೂರು ಅಭಿವೃದ್ಧಿ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಕೇಳಲಾಗಿತ್ತು, ಅದು ಸಾಧ್ಯವಾಗಿಲ್ಲ.
* ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಲು ಕೋರಲಾಗಿತ್ತು. ಈ ಬಗ್ಗೆ ನೇರ ಉಲ್ಲೇಖಗಳಿಲ್ಲ.
* ಬಹುಬೇಡಿಕೆಯ ರಾಯಚೂರಿಗೆ ಎಐಐಎಂಎಸ್ ಘೋಷಣೆಯಾಗಿಲ್ಲ.



