ಚಿಕ್ಕಮಗಳೂರಿನಿಂದ ತಿರುಪತಿಗೆ ಸಂಚರಿಸುವ ರೈಲಿಗೆ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಶುಕ್ರವಾರ ಚಾಲನೆ ನೀಡಿದ್ದಾರೆ. ಈ ಭಾಗದ ಜನರು ದಶಕದ ಬೇಡಿಕೆ ಈ ಮೂಲಕ ಈಡೇರಿದಂತಾಗಿದೆ.
ಚಿಕ್ಕಮಗಳೂರು ರೈಲ್ವೆ ನಿಲ್ದಾಣದಲ್ಲಿ ಸೋಮಣ್ಣ ಹಸಿರು ನಿಶಾನೆ ತೋರುವ ಮೂಲಕ ರೈಲಿಗೆ ಚಾಲನೆ ನೀಡಿದರು.
ರೈಲಿಗೆ ಚಾಲನೆ ನೀಡಿ, ಬಳಿಕ ಸಿಎಂ ಕುರ್ಚಿ ಕದನದ ವಿಚಾರವಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಸಿಎಂ ಆಗಿ ನಾನೇ ಇರ್ತೀನಿ, ನಾನೇ ಇರ್ತೀನಿ ಎನ್ನುತ್ತಾರೆ. ನೀವು ಇದ್ದೀರೋ ಇಲ್ವೋ? ನಿಮ್ಮ ಪಂಚೆ ಬೇರೆಯವರು ಎಳೆದಿದ್ದಾರೋ ಏನೋ ಗೊತ್ತಿಲ್ಲ. ಆ ಕೆಲಸ ಮಾಡುತ್ತಿರುವವರು ನಿಮ್ಮವರೇ ಹೊರತು ನಾವಲ್ಲ. ಜನರನ್ನು ದಾರಿ ತಪ್ಪಿಸಲು ಡಿಕೆಶಿ-ಸಿದ್ದು ಇಬ್ಬರು ನಾಟಕ ಮಾಡುತ್ತಿದ್ದಾರೆ. ಇವರ ನಾಟಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೃಪಾಪೋಷಿತ ನಾಟಕ ಮಂಡಳಿ. ಏನಾದ್ರೂ ಆಗಲಿ ಜನಕ್ಕೆ ಒಳ್ಳೆಯದನ್ನ ಮಾಡಲಿ. ರಾಜ್ಯದಲ್ಲಿ ಒಂದಾದರೂ ಕೆಲಸ ಆಗ್ತಿದ್ಯಾ ಎಂದು ಪ್ರಶ್ನಿಸಿದ್ದಾರೆ.