Saturday, February 21, 2026
Google search engine

Homeರಾಜ್ಯವಿದ್ಯಾರ್ಥಿಗಳು ಕಲಿಯುಗದ ಸರ್ವಜ್ಞರಾಗಿ ಜ್ಞಾನವಂತರಾಗಲು ಕರೆ

ವಿದ್ಯಾರ್ಥಿಗಳು ಕಲಿಯುಗದ ಸರ್ವಜ್ಞರಾಗಿ ಜ್ಞಾನವಂತರಾಗಲು ಕರೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ.ಜಿಲ್ಲೆ ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಭಾಕರಾವಳಿ ವಿಭಾಗ ಮತ್ತು ದ.ಕ.ಜಿಲ್ಲಾ ಕುಲಾಲ- ಕುಂಬಾರರ ಯುವ ವೇದಿಕೆ ಮಂಗಳೂರು ಇವರ ಸಹಕಾರದೊಂದಿಗೆ ನಡೆದ ಸಂತ ಕವಿ ಸರ್ವಜ್ಞ ಜಯಂತಿ ಶುಕ್ರವಾರ ಮಂಗಳೂರು ಬೋಂದೆಲ್ ಮಹಿಳಾ ಪಾಲಿಟೆಕ್ನಿಕ್ ವಿದ್ಯಾಲಯದಲ್ಲಿ ನಡೆಯಿತು.
ಬೋಂದೆಲ್ ಸರ್ವಜ್ಞ ವೃತ್ತದಲ್ಲಿ ಸರ್ವಜ್ಞ ಪ್ರತಿಮೆಗೆ ಅತಿಥಿಗಳು ಹಾರಾರ್ಪಣೆಗೈದರು. ಮಹಿಳಾ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲ ಗುಣವಂತ ವಿ.ಗುನಗಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಲಿಯುಗದ ಸರ್ವಜ್ಞರಾಗಿ ಜ್ಞಾನವಂತರಾಗಬೇಕು.  ನಮ್ಮ ವಿದ್ಯಾಲಯದ ವಿದ್ಯಾರ್ಥಿಗಳು ಪುಣ್ಯವಂತರು. ಪ್ರತಿದಿನ ಸರ್ವಜ್ಞನ ಪ್ರತಿಮೆಯ ದರ್ಶನ ಪಡೆಯುತ್ತಾರೆ. ಅವರ ನುಡಿಯಂತೆ ನಡೆಯಲು ತ್ರಿಪದಿ ಕವಿ ಸರ್ವಜ್ಞ ಪ್ರೇರೇಪಿಸಲಿ ಎಂದರು.
       ನಿವೃತ್ತ ಶಿಕ್ಷಕ ಮಹಾಬಲ ಕುಲಾಲ್ ಉಪನ್ಯಾಸ ನೀಡಿ ಮಾತನಾಡಿ, ಸರ್ವಜ್ಞ ಸಮಾಜದ ಓರೆ ಕೋರೆಯನ್ನು ತನ್ನ ತ್ರಿಪದಿಯ ಮೂರು ಸಾಲುಗಳಲ್ಲಿ ಜನರಿಗೆ ತಿಳಿಸಿದ ಮೇಧಾವಿ. ಜೀವನದ ಕಟು ಸತ್ಯಗಳನ್ನು ಪದಗಳಲ್ಲಿ ಕಟ್ಟಿಕೊಟ್ಟ ಅವನ ಬರಹಗಳು ಜ್ಞಾನದ ಭಂಡಾರ. ಶ್ರೇಷ್ಟ ಕವಿಗಳ ಸಾಲಲ್ಲಿ ಈ ಸರ್ವಜ್ಞ ಸೇರುತ್ತಾನೆ ಎಂದರು.
     ಕುಲಾಲ ಕುಂಬಾರರ ಯುವ ವೇದಿಕೆಯ ರಾಜ್ಯಾಧ್ಯಕ್ಷ ಸುಧಾಕರ ಸಾಲಿಯಾನ್ ಶುಭ ಹಾರೈಸಿದರು.
     ಕುಲಾಲ ಕುಂಬಾರರ ಯುವ ವೇದಿಕೆಯ ಜಿಲ್ಲಾಧ್ಯಕ್ಷÀ ಅನಿಲ್‍ದಾಸ್, ಜಿಲ್ಲಾ ಮತ್ತು ಸುರತ್ಕಲ್ ಕುಲಾಲ ಸಂಘ ಹಾಗೂ ಯುವ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
   ಮಹಿಳಾ ಪಾಲಿಟೆಕ್ನಿಕ್ ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ವಿಧ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು ಹಾಗೂ ಕುಲಾಲ ಸಮುದಾಯದ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ.ಸ್ವಾಗತಿಸಿ,  ಗಂಗಾಧರ ಬಂಜನ್ ವಂದಿಸಿದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular