ಸರಗೂರು: ಸರಗೂರು ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ ಕಾರ್ಯಕ್ರವನ್ನು ಪಟ್ಟಣದ ಸರ್ಕಾರಿ ಬಾಲಕರ ಪ್ರೌಡಶಾಲೆ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸರಗೂರು ವಲಯ ಅರಣ್ಯಾಧಿಕಾರಿ ಎಸ್.ಡಿ. ಮಧು, ರಾಜ್ಯದಾದ್ಯಂತ ಜುಲೈ ೧ರಿಂದ ಜುಲೈ ೭ ತನಕ ನಡೆಯುವ ವನಮಹೋತ್ಸವಕ್ಕೆ ಪ್ರತಿಯೋಬ್ಬರ ಬೆಂಬಲ ಅತ್ಯ ಗತ್ಯ, ಸಸಿ ನೆಡುವ ಸಪ್ತಾಹ ನನ್ನ ಗಿಡ ನನ್ನ ಹೆಮ್ಮೆ ಎಂನ ಘೋಷಣೆಯಂತೆ ಕರ್ನಾಟಕ ರಾಜ್ಯದಲ್ಲಿ ೫ಕೋಟಿ ಸಸಿ ನೆಡೋಣ ಕನ್ನಡ ನಾಡನ್ನು ಹಸಿರು ಹೊದಿಕೆಯ ಕ್ರಾಂತಿ ಮಾಡಲು ಎಲ್ಲರ ಸಹಕಾರ ಮುಖ್ಯ ಹತ್ತಿರದ ಅರಣ್ಯ ಇಲಾಖೆಗೆ ಎಲ್ಲರು ಬೇಟಿ ನೀಡಿ ವನಮಹೋತ್ಸವದಲ್ಲಿ ಭಾಗಿಯಾಗಿ, ಹಾಗೆ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಸಿಗುವ ಸಸಿ ಪಡೆದು ಸಸಿ ನೆಟ್ಟು ಬೆಳಸಿರಿ, ಮುಂದಿನ ೫ವರ್ಷಗಳಲ್ಲಿ ೨೫ ಕೋಟಿ ಸಸಿ ನೆಟ್ಟು ಪೋಷಿಸುವ ನಿರ್ಣಯಕ್ಕೆ ಪ್ರತಿಯೋಬ್ಬರು ಕೈಜೋಡಿಸುಲು ಮನವಿ ಮಾಡಿದರು,
ಪಟ್ಟಣ ಪಂಚಾಯಿತಿ ಉಪಾದ್ಯಕ್ಷ ವಿನಾಯಕ ಪ್ರಸಾದ್, ಮಾತನಾಡಿ ಗ್ರಾಮೀಣ ಭಾಗದಲ್ಲಿ ಉತ್ತಮ ಪರಿಸರ ಉಳಿಸಿ ಬೆಳಸ ಬೇಕಿದೆ, ಇಂದು ನಾವುಗಳು ಸಸಿ ನೆಟ್ಟರೆ ಮುಂದೆ ಇದರಿಂದ ಉಚಿತವಾಗಿ ಆಸ್ಸಿಜನ್ ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು,
ವನಮಹೋತ್ಸವದಲ್ಲಿ ವಲಯ ಅರಣ್ಯಾಧಿಕಾರಿ ಅಭಿಲಾಶ್, ಡಿಆರ್‌ಎಫ್ ಗಳಾದ ಲಿಂಗರಾಜು, ಅಭಿಲಾಶ್, ಕಿರಣ್, ತ್ಯಾಗರಾಜ್, ಹಾಗೂ ಭುವನೇಶ್‌ಕುಮಾರ್, ಲೋಕೇಶ್, ಮಿತುನ್, ಪಟ್ಟಣ ಪಂಚಾಯಿತಿ ಉಪಾದ್ಯಕ್ಷ ವಿನಾಯಕ ಪ್ರಸಾದ್, ಸರ್ಕಾರಿ ಬಾಲಕರ ಪ್ರೌಡಶಾಲೆ ಉಪ ಪ್ರಾಶುಪಾಲ್ ಜಿ.ನಾಗೇಶ್, ಶಿಕ್ಷಕರಾದ ಸಣ್ಣಸ್ವಾಮಯ್ಯ, ಸಂಜಯ್, ಮುರಳಿ, ಯಮುನಾ,ಲೀಲಾವತಿ, ವಿಜಯ, ಶಿವಸ್ವಾಮಿ, ಸವಿತಾ, ಮಾಲಶ್ರೀ, ಶಾಲಾ ಮಕ್ಕಳು ಭಾಗಿಯಾಗಿದ್ದರು,