Wednesday, July 16, 2025
Google search engine

Homeಅಪರಾಧಉತ್ತರಾಖಂಡದಲ್ಲಿ ಕಮರಿಗೆ ಉರುಳಿದ ವಾಹನ: 8 ಸಾವು, 3 ಮಂದಿಗೆ ಗಾಯ: ಪ್ರಧಾನಿ ಮೋದಿ ಸಂತಾಪ

ಉತ್ತರಾಖಂಡದಲ್ಲಿ ಕಮರಿಗೆ ಉರುಳಿದ ವಾಹನ: 8 ಸಾವು, 3 ಮಂದಿಗೆ ಗಾಯ: ಪ್ರಧಾನಿ ಮೋದಿ ಸಂತಾಪ

ಉತ್ತರಾಖಂಡದ ಪಿಥೋರಗಡ್ ಜಿಲ್ಲೆಯ ಮುವಾನಿ ಪ್ರದೇಶದಲ್ಲಿ ಮಂಗಳವಾರ 13 ಪ್ರಯಾಣಿಕರನ್ನು ಹೊತ್ತ ಮ್ಯಾಕ್ಸ್ ವಾಹನವು 150 ಮೀಟರ್ ಆಳದ ಕಮರಿಗೆ ಬಿದ್ದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಎಂಟು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇತರ ಮೂವರು ಗಂಭೀರ ಗಾಯಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಾಣಹಾನಿ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ನೆರವು ಘೋಷಿಸಿದ್ದಾರೆ.

ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕೃತ ಹ್ಯಾಂಡಲ್ ಮೂಲಕ ಸಂತಾಪ ಸೂಚಿಸಿ ಮಾತನಾಡಿದ ಅವರು, ಉತ್ತರಾಖಂಡದ ಪಿಥೋರಗಢದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಜೀವಹಾನಿಯಾಗಿರುವುದು ದುಃಖ ತಂದಿದೆ. ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ” ಎಂದಿದ್ದಾರೆ. ಮೃತರ ಕುಟುಂಬಗಳಿಗೆ ಪಿಎಂಎನ್ಆರ್ಎಫ್ನಿಂದ ತಲಾ 2 ಲಕ್ಷ ರೂ. ಗಾಯಗೊಂಡವರಿಗೆ 50,000 ರೂ  ಪರಿಹಾರ ಘೋಷಣೆ ಆಗಿದೆ.

RELATED ARTICLES
- Advertisment -
Google search engine

Most Popular