ಚಿತ್ರದುರ್ಗ: ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿಯಿಂದ ಎಣ್ಣೆ ಪಾರ್ಟಿ ನಡೆದಿರುವ ಕುರಿತು ಆಕ್ಷೇಪ ಕೇಳಿಬಂದಿದ್ದು, ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಚೇರಿಯ ಸಿಬ್ಬಂದಿಯೋರ್ವ ಹೊಸ ಕಾರು ಖರೀದಿಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಎಣ್ಣೆ ಪಾರ್ಟಿ ನಡೆಸಿರೊ ವೀಡಿಯೋ ವೈರಲ್ ಆಗಿದೆ.
20 ಲೀಟರ್‌ನ ವಾಟರ್ ಕ್ಯಾನ್‌ಗೆ ಉಪನಿರ್ದೇಶಕರ ಕಾರಿನ ಚಾಲಕ ಮದ್ಯ ಬೆರೆಸಿದ್ದು, ಇನ್ನಿತರೆ ಸಿಬ್ಬಂದಿ ಅಯ್ಯಪ್ಪ ಸ್ವಾಮಿಗೆ ಬಂಗಾರ ಮೀಸಲು ಹೋಗುತ್ತಲ್ಲ ಹಾಗಾಯ್ತು ಇದು ಅಂತ ಸಂಭಾಷಣೆ ನಡೆಸಿದ್ದಾರೆ. ಶಿಕ್ಷಣ ಇಲಾಖೆ ಸಿಬ್ಬಂದಿ ಕಚೇರಿಯನ್ನೇ ಎಣ್ಣೆ ಪಾರ್ಟಿಗೆ ದುರ್ಬಳಕೆ ಮಾಡಿದ್ದಾರೆ.
ಹಾಗೆಯೇ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿ ಕುಡಿದು ಮೋಜು ಮಸ್ತಿ ಮಾಡಿರುವ ವೀಡಿಯೋ ವೈರಲ್ ಆದ ಪರಿಣಾಮ ಶಿಕ್ಷಣ ಇಲಾಖೆ ನೈತಿಕತೆಯ ಮೇಲೆ ಪ್ರಶ್ನೆ ಕೇಳಿಬರುತ್ತಿದ್ದು, ಜಿಲ್ಲೆಯಾದ್ಯಂತ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.