ಬೆಂಗಳೂರು : ವಿಧಾನಸಭೆ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡುವ ಅಧಿಕಾರ ಸ್ಪೀಕರ್‌ಗೆ ಇಲ್ಲ ಅಂತ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ಯೋಗೇಶ್ ಗೌಡ ಹತ್ಯೆ ಕೇಸ್‌ನಲ್ಲಿ ಕೋರ್ಟ್ ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಅಂತ ಆದೇಶಿಸಿದೆ. ಶಾಸಕ ಸ್ಥಾನ ರದ್ದು ಮಾಡದ ಬಗ್ಗೆ ಬಸವರಾಜ ಕೊರವರ ಮನವಿ ಸಲ್ಲಿಸಿದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಾವೊಬ್ಬ ಸದಸ್ಯನ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸ್ಪೀಕರ್‌ಗೆ ಇಲ್ಲ. ಇದು ಎಲ್ಲಿಯಾದ್ರೂ ಉಂಟಾ? ವಿಧಾನಸಭೆ ವ್ಯಾಪ್ತಿಯಲ್ಲಿ ಏನಾದ್ರೂ ಆದಾಗ ಮಾತ್ರ ಅಧಿಕಾರ ಇದೆ. ನಿಯಮದ ಪ್ರಕಾರ ಯಾರಾದ್ರೂ ಶಿಕ್ಷೆಗೆ ಒಳಪಟ್ಟಾಗ ಅನರ್ಹ ಎಂದು ಪರಿಗಣಿಸುತ್ತಾರೆ. ಅದು ಆಟೋಮೆಟಿಕ್ ಆಗಿಯೇ ರದ್ದು ಆಗುತ್ತದೆ. ನಾವು ಇಂಟಿಮೇಷನ್ ಕೊಡಲು ಮಾತ್ರ ಸಾಧ್ಯ ಎಂದಿದ್ದಾರೆ.
ನಾನು ಇಂದು ಕಾರ್ಯದರ್ಶಿಗೆ ಈ ಬಗ್ಗೆ ನೋಡಲು ಹೇಳಿದ್ದೇನೆ. ನಮ್ಮಿಂದ ಒಂದು ದಿನ, ಎರಡು ದಿನ ಬಾಕಿ ಆದರೆ ಅನ್ನೋದೇನಿಲ್ಲ. ಇದು ಆಟೋಮೆಟಿಕ್ ಆಗಿ ರದ್ದಾಗಿದೆ. ಸ್ಟೇ ಸಿಕ್ಕರೆ ಮತ್ತೆ ರೀ ಇನ್ಸ್ಟಿಕೇಟ್ ಆಗುತ್ತದೆ. ನಮ್ಮ ಕೆಲಸ ಇಂಟಿಮೇಷನ್ ಕೊಡೋದು ಮಾತ್ರ. ಕಾನೂನು ವ್ಯಾಪ್ತಿಯಲ್ಲಿ ಆದೇಶ ಮಾಡಿದಾಗ ತನ್ನಿಂದ ತಾನೇ ಶಾಸಕ ಸ್ಥಾನ ರದ್ದು ಆಗಿದೆ. ಇಲ್ಲಿ ಬಿಜೆಪಿ, ಕಾಂಗ್ರೆಸ್ ತಾರತಮ್ಯ ಮಾಡಿಲ್ಲ ಎಂದು ಹೇಳಿದ್ದಾರೆ.
ಇದರಲ್ಲಿ ತಾರತಮ್ಯ ಏನಿದೆ? ತನ್ನಿಂದ ತಾನೇ ರದ್ದಾದಾಗ ಏನು ಮಾಡೋದು? ಅವರು ಮೀಟಿಂಗ್ ಬರಲು ಆಗುತ್ತದೆಯಾ? ಸಭೆಗೆ ಬಂದು ಕೂರಲು ಆಗುತ್ತದೆಯಾ? ಮಾಹಿತಿ ಇಲ್ಲದೇ ಇರೋವ್ರಿಗೆ ಮಾಹಿತಿ ಕೊಡ್ತಾ ಇದ್ದೀನಿ ಎಂದು ಸ್ಪಷ್ಟಪಡಿಸಿದ್ದಾರೆ.



