Tuesday, May 20, 2025
Google search engine

Homeರಾಜ್ಯದೌರ್ಜನ್ಯ, ದಬ್ಬಾಳಿಕೆ ಬಹಳ ದಿನ ನಡೆಯಲ್ಲ : ನಿಖಿಲ್ ಕುಮಾರಸ್ವಾಮಿ

ದೌರ್ಜನ್ಯ, ದಬ್ಬಾಳಿಕೆ ಬಹಳ ದಿನ ನಡೆಯಲ್ಲ : ನಿಖಿಲ್ ಕುಮಾರಸ್ವಾಮಿ

ಭದ್ರಾವತಿ: ದಮ್ಮು, ತಾಕತ್ತು ಇದ್ರೆ ಶಾಸಕ ಬಿ.ಕೆ. ಸಂಗಮೇಶ್ ಅವರ ಮಗನ ಮೇಲೆ ಎಫ್‌ಐಆರ್ ದಾಖಲು ಮಾಡಲಿ. ಶಾಸಕರ ಮಗನ ಧ್ವನಿಯನ್ನು ಎಫ್‌ಎಸ್‌ಎಲ್ ಪರೀಕ್ಷೆ ಮಾಡಿಸಲಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಜ್ಯೋತಿ ಅವರಿಗೆ ಬೆದರಿಕೆ ಹಾಕಿದ ಪ್ರಕರಣದ ವಿರುದ್ದ ಭದ್ರಾವತಿ ಜೆಡಿಎಸ್ ತಾಲೂಕು ಘಟಕ ಹಾಗೂ ಬಿಜೆಪಿ ಘಟಕ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ‘ರಾಮನಗರದಲ್ಲಿ ಧಮ್, ತಾಕತ್ ಬಗ್ಗೆ ಮಾತನಾಡುತ್ತೀರಿ. ಈ ಪ್ರಕರಣದ ಬಗ್ಗೆಯೂ ಎಫ್‌ಐಆರ್ ಹಾಕಿ, ತನಿಖೆ ಮಾಡಿಸಿ’ ಎಂದು ಆಗ್ರಹಿಸಿದರು ಈ ಪ್ರತಿಭಟನೆ ಇಲ್ಲಿಗೆ ಮುಕ್ತಾಯ ಆಗಲ್ಲ, ಇಲ್ಲಿಂದ ಹೊಸ ಅಧ್ಯಾಯ ಶುರುವಾಗಲಿದೆ. ಭದ್ರಾವತಿಯ ನಾಗರೀಕರು ಜಾಗೃತರಾಗಿರಬೇಕು ನಿಮ್ಮ ಜೊತೆ ನಾವಿರುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ಮಹಿಳಾ ಅಧಿಕಾರಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಶಾಸಕರ ಪುತ್ರನನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಭದ್ರಾವತಿ ತಹಸೀಲ್ದಾರ್ ಅವರಿಗೆ ನಿಖಿಲ್ ಕುಮಾರಸ್ವಾಮಿ ಅವರು ಮನವಿ ಸಲ್ಲಿಸಿದರು.

ಭದ್ರಾವತಿಯಲ್ಲಿ ಕಾಂಗ್ರೆಸ್ ಶಾಸಕರ ದೌರ್ಜನ್ಯ ಬಹಳ ದಿನ ನಡೆಯಲ್ಲ. ಅಭಿವೃದ್ದಿಗೆ ಮಿಸಲಿಡಬೇಕಾದ ಸಮಯವನ್ನು ಇಸ್ಪೀಟ್ ದಂಧೆ ಮತ್ತು ಮಾದಕ ವಸ್ತುಗಳ ಪೂರೈಕೆಗೆ ಶಾಸಕರು ಸಮಯ ಮೀಸಲಿಟ್ಟಿದ್ದಾರೆ ಎಂದು ಶಾಸಕ ಸಂಗಮೇಶ್ ವಿರುದ್ಧ ನಿಖಿಲ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ನಮ್ಮಪ್ಪ ಎರಡು ಸಲ ಸಿಎಂ ಆಗಿದ್ದರೂ ಸಹ ಇದುವರೆಗೂ ಅಧಿಕಾರಿಗಳಿಗೆ ಒಂದು ಕೆಲಸವನ್ನು ಮಾಡಿ ಎಂದು ನಾನು ಫೋನ್ ಮಾಡಿಲ್ಲ. ಪೊಲೀಸ್ ಅಧಿಕಾರಿಗಳು ಪಾರದರ್ಶಕವಾಗಿ ನಡೆದುಕೊಳ್ಳಬೇಕು” ಎಂದು ನಿಖಿಲ್ ಹೇಳಿದರು.

ಪೊಲೀಸ್ ನವರಿಗೆ ಕೈ ಮುಗಿದು ಕೇಳುತ್ತೇನೆ, ಪಾರದರ್ಶಕವಾಗಿ ಕೆಲಸ ಮಾಡಿ. ಇಡೀ ರಾಜ್ಯಾಧ್ಯಂತ ಶಾಸಕರ ದುರಂಹಕಾರ ಗೊತ್ತಾಗಿದೆ. ರಾಜ್ಯದ ಜನರಿಗೆ ಮಾಧ್ಯಮದವರು ವಾಸ್ತವ ತಿಳಿಸಿದ್ದಾರೆ. ಅಪ್ಪಾಜಿ ಗೌಡರನ್ನ ನಾವು ನೆನಪಿಸಿಕೊಳ್ಳಬೇಕು ಆಸ್ತಿ ಮಾಡದೆ ಜನರ ಪ್ರಾಮಾಣಿಕ ಕೆಲಸ ಮಾಡಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

RELATED ARTICLES
- Advertisment -
Google search engine

Most Popular