ಚಿಕ್ಕೋಡಿ: ಪ್ರಜಾಪ್ರಭುತ್ವದಲ್ಲಿ ಮತದಾನ ಮತ್ತು ಚುನಾವಣೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿ.ಪಂ. ಸಿಇಒ ರಾಹುಲ್ ಶಿಂಧೆ ಹೇಳಿದರು. ಚಿಕ್ಕೋಡಿ ತಾ. ಪಂ ಆವರಣದಲ್ಲಿ ಶುಕ್ರವಾರ ಏ. 19ರಂದು ಮತದಾನ ಜಾಗೃತಿ ಕುರಿತು ಎತ್ತಿನಗಾಡಿ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಮೇ 7 ರಂದು ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯುತ್ತಿದೆ. ಚುನಾವಣೆಯ ದಿನದಂದು ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು. ಮತದಾನವು ಸಂವಿಧಾನ ನೀಡಿದ ಕೊಡುಗೆಯಾಗಿದೆ, ಅಂತಹ ಅಮೂಲ್ಯ ಹಕ್ಕನ್ನು ತಪ್ಪದೆ ಚಲಾಯಿಸುವುದು ಪ್ರತಿಯೊಬ್ಬ ಅರ್ಹ ಮತದಾರರ ಜವಾಬ್ದಾರಿಯಾಗಿದೆ. ಬಲಿಷ್ಠ ಪ್ರಜಾಪ್ರಭುತ್ವ ಪಡೆಯಲು ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಸ್ವಇಚ್ಛೆಯಿಂದ ಅರ್ಹ ಮತದಾರರು ಮತ ಚಲಾಯಿಸಬಹುದು ಮತ್ತು ತಮ್ಮ ನೆರೆಹೊರೆಯವರು ಸಹ ತಪ್ಪದೆ ಮತದಾನ ಮಾಡಬಹುದು ಎಂದು ಜಾಗೃತಿ ಮೂಡಿಸಬಹುದು.
ಪಿ.ಎಂ. C. E. ಓ ರಾಹುಲ್ ಶಿಂಧೆ ವಹಿಸಿದ್ದರು. ತಾಲೂಕು ಪಂಚಾಯಿತಿ ಕಚೇರಿಯಿಂದ ಆರಂಭವಾದ ಜಾಥಾ ಕಾರ್ಯಕ್ರಮವು ತಾಲೂಕು ಪಂಚಾಯಿತಿ ಮುಂಭಾಗ ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣ ವೃತ್ತದವರೆಗೆ ಸಮಾರೋಪಗೊಂಡಿತು. ಚಿಕ್ಕೋಡಿ ತಾಲೂಕಿನ ಸುತ್ತಮುತ್ತಲಿನ ರೈತರು ಚಕ್ಕಡಿ ಬಂಡೆಯೊಂದಿಗೆ ಪಾಲ್ಗೊಂಡಿದ್ದರು. ಹಾಗೂ ಸಾಂಪ್ರದಾಯಿಕ ಉಡುಗೆ ತೊಡುಗೆ ಯೋಧ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಕರ್ತರು, ಎಸ್ ಎಚ್ ಜಿ ಸದಸ್ಯರು, ತಾಲೂಕು ಪಂಚಾಯಿತಿ ಸಿಬ್ಬಂದಿ, ಪುರಸಭೆ ಸಿಬ್ಬಂದಿ ಭಾಗವಹಿಸಿ ಚುನಾವಣಾ ಘೋಷಣೆ ಕೂಗುವ ಮೂಲಕ, ಬೀಡಿ ವ್ಯಾಪಾರಸ್ಥರಿಗೆ ಕೈ ಪತ್ರ ವಿತರಿಸುವ ಮೂಲಕ ಮತದಾನದ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಮೆಹಬೂಬಿ. ಪಂಚಾಯಿತಿ ಯೋಜನಾ ನಿರ್ದೇಶಕ ಡಾ.ಎಂ.ಕೃಷ್ಣರಾಜು, ಚಿಕ್ಕೋಡಿ ತಹಸೀಲ್ದಾರ್ ಚಿದಂಬರ ಕುಲಕರ್ಣಿ, ಜಿ.ಪಂಚಾಯತಿ ಲೆಕ್ಕಾಧಿಕಾರಿ ಗಂಗಾ ಹಿರೇಮಠ, ಚಿಕ್ಕೋಡಿ ತಾಲೂಕಾ. ಪಿ.ಎಂ. ಇ. ಓ. ಮಹಾಂತೇಶ ನಿಡವಣಿ, ವಿವಿಧ ಇಲಾಖೆಗಳ ಮುಖ್ಯಾಧಿಕಾರಿ ಜಗದೀಶ ಪೂಜಾರ ಸೇರಿದಂತೆ ನಾನಾ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.