ಮಂಡ್ಯ: ಏ.26 ರಂದು ಮತದಾನ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ರ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಇಂದು ಸಂಜೆ 6 ಗಂಟೆವರೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗುವುದು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ್, ಮಂಡ್ಯ ಜಿಲ್ಲೆಯಲ್ಲಿ ಒಟ್ಟು 2076 ಮತಗಟ್ಟೆಗಳಿವೆ. 693 ಸೂಕ್ಷ್ಮ ಮತಗಟ್ಟೆಗಳಿವೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಒಟ್ಟು 17,79,243 ಮತದಾರರಿದ್ದು, 8,76,112 ಮಹಿಳಾ ಮತದಾರರು, 9,02,963 ಪುರುಷ ಮತದಾರರು ಹಾಗೂ 168 ಇತರೆ ಮತದಾರರು ಇದ್ದಾರೆ.
ಮತಗಟ್ಟೆಯಲ್ಲಿ ಮೂರು ಜನ ಏಜೆಂಟ್ ನೇಮಕ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಏ.24 ರ ಸಂಜೆ 5 ಗಂಟೆಯಿಂದ ಏ.27 ರ ಸಂಜೆ 6 ರ ವರೆಗೆ ಜಿಲ್ಲಾಧ್ಯಂತ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಜಿಲ್ಲಾದ್ಯಂತ 3366 ಪೊಲೀಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.
ವಿಕಲಚೇತನರಿಗೆ ಹಾಗೂ ಹಿರಿಯನಾಗರಿಕರಿಗಾಗಿ ವೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳ 200 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಯಾವುದೇ ರಾಜಕೀಯ ಟೆಂಟ್ ಗೆ ನಿಷೇಧ ಹೇರಲಾಗಿದೆ.
ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶಾಮಿಯಾನದ ವ್ಯವಸ್ಥೆಗೆ ಸೂಚಿಸಲಾಗಿದೆ. ಮತಗಟ್ಟೆಗಳಲ್ಲಿ ಮೊಬೈಲ್ ನಿಷೇಧವಿದ್ದು, ಒಬ್ಬ PRO ಗೆ ಮಾತ್ರ ಮೊಬೈಲ್ ಬಳಕೆಗೆ ಅವಕಾಶ ನೀಡಲಾಗಿದೆ.
ಲೋಕಸಭಾ ಚುನಾವಣೆಗಾಗಿ 373 ವಾಹನಗಳ ಬಳಕೆ ಮಾಡಲಾಗಿದೆ. ಜಿಲ್ಲಾಧ್ಯಂತ 8396 ಮತದಾನ ಸಿಬ್ಬಂದಿಗಳ ನೇಮಿಸಲಾಗಿದೆ. ಏ.26 ರಂದು ನಡೆಯುವ ಸಂತೆ, ಜಾತ್ರೆ, ಉತ್ಸವ ನಿಷೇಧ ಹೇರಲಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ಮತಷ್ಟು ಅಲರ್ಟ್ ಮಾಡಲಾಗಿದೆ. ಅಕ್ರಮ ಹಣ ಸಾಗಣೆ ಕಂಡು ಬಂದರೆ ಸೂಕ್ತ ಕ್ರಮ ಮಾಡಲಾಗಿದೆ.
ಜಿಲ್ಲಾಧ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಕಡ್ಡಾಯವಾಗಿ ಎಲ್ಲರು ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.
ಮಂಡ್ಯ ಜಿಲ್ಲೆಯ ಲೋಕಸಭಾ ಚುನಾವಣೆಗೆ ಮಾಸ್ಟರಿಂಗ್/ ಡಿ ಮಾಸ್ಟರಿಂಗ್ ಕೇಂದ್ರ.
186-ಮಳವಳ್ಳಿ ಶಾಂತಿ ಪಿಯು ಕಾಲೇಜು.
187-ಮದ್ದೂರು ಪಟ್ಟಣದ ಹೆಚ್ಕೆ ವೀರಣ್ಣಗೌಡ ಕಾಲೇಜು.
188-ಪಾಂಡವಪುರದ PSSK ಹೈಸ್ಕೂಲ್.
189-ಮಂಡ್ಯದ ವಿಶ್ವವಿದ್ಯಾಲಯ.
190- ಶ್ರೀರಂಗಪಟ್ಟಣದ ಪಿಯು ಕಾಲೇಜು.
191-ನಾಗಮಂಗಲ ಸರ್ಕಾರಿ ಪಿಯು ಕಾಲೇಜು.
192-ಕೆ.ಆರ್.ಪೇಟೆಯ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್.
211-ಕೆ.ಆರ್.ನಗರದ ಸರ್ಕಾರಿ ಡಿಗ್ರಿ ಕಾಲೇಜು.
ಸುದ್ದಿಗೋಷ್ಟಿಯಲ್ಲಿ ಎಡಿಸಿ ಡಾ.ಹೆಚ್.ಎಲ್.ನಾಗರಾಜ್, ಸಿಇಓ ಶೇಖ್ ತನ್ವಿರ್ ಆಸೀಫ್, ಎಸ್.ಪಿ.ಎನ್.ಯತೀಶ್ ಭಾಗಿಯಾಗಿದ್ದರು.