ಕೋರ್ಟ್ ಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ವಾರಂಟ್ ಅಸಾಮಿಯನ್ನು ಮಂಗಳೂರಿನ ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಅಬ್ದುಲ್ ರವೂಫ್ @ ಮೀಸೆ ರವೂಫ್ ಎಂದು ಗುರುತಿಸಲಾಗಿದೆ. ಉಪ್ಪಳದ ಅಬ್ದುಲ್ ರವೂಫ್ @ ಮೀಸೆ ರವೂಫ್ ಮೇಲೆ ಕೇರಳದ ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 19 ಪ್ರಕರಣಗಳು ದಾಖಲಾಗಿತ್ತು ಮತ್ತು ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ ಕೊಣಾಜೆ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ಸೇರಿ ಒಟ್ಟು 25 ಪ್ರಕರಣಗಳು ದಾಖಲಾಗಿತ್ತು. ಕಾವೂರು ಠಾಣಾ ಪ್ರಕರಣದಲ್ಲಿ ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿತ್ತು ಹಾಗೂ ಕೊಣಾಜೆ ಠಾಣಾ 5 ಪ್ರಕರಣಗಳಲ್ಲಿ ಉದ್ಘೋಷಿತ ಅಪರಾಧಿ ಎಂದು ನ್ಯಾಯಾಲಯವು ಘೋಷಿಸಿತ್ತು. ಮಂಜೇಶ್ವರ ಪೊಲೀಸ್ ಠಾಣಾ ಒಂದು ಪ್ರಕರಣದಲ್ಲಿ ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿತ್ತು.
ಈತನು ಅಂತರಾಜ್ಯ ನಟೋರಿಯಸ್ ಕ್ರಿಮಿನಲ್ ಕೇರಳ ರಾಜ್ಯದ ಉಪ್ಪಳ ಪೈವಳಿಕೆಯ ಇಸುಬು ಜಿಯಾದ್ @ ಜಿಯಾ ಎಂಬಾತನ ಸಹಚರನಾಗಿರುತ್ತಾನೆ. ಈತನನ್ನು ಉತ್ತರ ಉಪ ವಿಭಾಗದ ಎ.ಸಿ.ಪಿ ಯವರಾದ ಶ್ರೀ ಶ್ರೀಕಾಂತ. ಕೆ. ರವರ ನೇತೃತ್ವದ ತಂಡದವರಾದ ಶ್ರೀ ಚಂದ್ರಶೇಖರ್, ಎ.ಎಸ್.ಐ, ಸಿಬ್ಬಂದಿಗಳಾದ ಹೆಚ್.ಸಿ .ರೆಜಿ ವಿ.ಎಂ , ದಾಮೋದರ.ಕೆ ಮತ್ತು ಹಾಲೇಶ್ ನಾಯ್ಕ್ ರವರು ಈ ದಿನ ದಿನಾಂಕ:16-12-2025 ರಂದು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.



