ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಎಂಬಲ್ಲಿ ನೂತನವಾಗಿ ಫ್ಲೈ ಓವರ್ ನಿರ್ಮಾಣ ಆಗಿದೆ. ಇತ್ತೀಚಿಗೆ ಸುರಿದಂತಹ ಭಾರೀ ಮಳೆಗೆ ಈ ಫ್ಲೈ ಓವರ್ ನಿಂದ ಕೆಳಗಿನ ಸರ್ವಿಸ್ ರಸ್ತೆಗೆ ವಾಟರ್ ಫಾಲ್ ರೀತಿಯಲ್ಲಿ ನೀರು ಸುರಿತಾ ಇತ್ತು. ಇದೇ ವೇಳೆ ಸರ್ವಿಸ್ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಕಾರಿನ ಮೇಲೆ ಈ ನೀರು ಬೀಳ್ತಾ ಇತ್ತು.
ಈ ಕುರಿತು ಅಲ್ಲಿನ ಸ್ಥಳೀಯರೊಬ್ಬರು ವಿಡಿಯೋ ಮಾಡಿ ನಿಮಗೆ ಕಾರು ಸರ್ವಿಸ್ ಮಾಡಬೇಕೆಂದರೆ ಕಲ್ಲಡ್ಕ ಫ್ಲೈ ಓವರ್ ಬಳಿ ಬನ್ನಿ, ಇಲ್ಲಿ ಉಚಿತವಾಗಿ ನಿಮ್ಮ ಕಾರನ್ನು ಸರ್ವಿಸ್ ಮಾಡಬಹುದೆಂದು ವ್ಯಂಗ್ಯದ ರೀತಿಯಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ರು. ಇದು ಬಹಳ ವೈರಲ್ ಆಗಿತ್ತು. ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಇತ್ತೀಚಿಗೆ ಕಲ್ಲಡ್ಕದಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಿದ್ರು. ಪ್ರತಿಸಲ ಮಳೆ ಬರುವಾಗ ಈ ಫ್ಲೈ ಓವರ್ ನಿಂದ ಕೆಳಗಿನ ಸರ್ವಿಸ್ ರಸ್ತೆಗೆ ನೀರು ಬೀಳ್ತಾ ಇದ್ದು ಇದು ವಾಹನ ಸವಾರರಿಗೆ ಕಿರಿಕಿರಿ ಮಾಡ್ತಾ ಇದೆ.