Wednesday, November 26, 2025
Google search engine

Homeರಾಜ್ಯಸುದ್ದಿಜಾಲಸಂವಿಧಾನದಿಂದಲೇ ಮನುಷ್ಯರಂತೆ ಬದುಕುತ್ತಿದ್ದೇವೆ: ಶಾಸಕ ಡಿ. ರವಿಶಂಕರ್

ಸಂವಿಧಾನದಿಂದಲೇ ಮನುಷ್ಯರಂತೆ ಬದುಕುತ್ತಿದ್ದೇವೆ: ಶಾಸಕ ಡಿ. ರವಿಶಂಕರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ ಆರ್ ನಗರ: ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಮಹತ್ವ ಕೊಡುವಂತ ಸಂವಿಧಾನ ಇಲ್ಲದಿದ್ದರೆ ನಾವೆಲ್ಲ ಬದುಕಲು ಸಾಧ್ಯವೇ ಇರುತಿರಲಿಲ್ಲ. ಸಂವಿಧಾನದಿoದ ನಾವು ಮನುಷ್ಯರಂತೆ ಬದುಕುತ್ತಿದ್ದೇವೆ ಇಲ್ಲವಾದಲ್ಲಿ ನಮಗೂ ಪ್ರಾಣಿಗಳಿಗೂ ವ್ಯತ್ಯಾಸ ಇರುತ್ತಿರಲಿಲ್ಲ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ತಾಲೂಕು ವಾಲ್ಮೀಕಿ ನಾಯಕರ ಸಮುದಾಯ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನದಿoದ ದೇಶದ ಎಲ್ಲರು ಗೌರವಯುತವಾಗಿ ಬದುಕಲು ಹಕ್ಕುಗಳನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ನಾವೆಲ್ಲ ಕೃತಜ್ಞರಾಗಬೇಕು ಎಂದು ಹೇಳಿದರು.

ಪ್ರಪಂಚದಲ್ಲೇ ಬೃಹತ್ ಸಂವಿಧಾನವನ್ನು ನಮ್ಮ ಭಾರತ ದೇಶಕ್ಕೆ ರಚಿಸಿ ಕೊಟ್ಟಂತ ಬಾಬಾ ಸಾಹೇಬರು ಹಲವು ಭಾಷೆ, ಜಾತಿ, ಧರ್ಮದ ಎಲ್ಲರಿಗೂ ಸಲ್ಲುವ ಏಕತೆ ಹಾಗೂ ಸಮಾನತೆಯನ್ನು ಸಾರುವ ನಾವೆಲ್ಲ ಭಾರತೀಯರು ಎಂಬ ಒಂದೇ ಭಾವನೆಯನ್ನು ಬೆಳೆಸಲು ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಜಗತ್ತಿನ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವನ್ನು ರಚಿಸಲು ಸಂವಿಧಾನವೇ ಮೂಲ ಕಾರಣ ಎಂದು ನಮಗೆ ತಿಳಿಸಿದ್ದಾರೆ ಎಂದರು.

ವಿದ್ಯಾರ್ಥಿಗಳು ಆಟ ಆಡುವಾಗ ಆಡಬೇಕು, ಪಾಠಕೇಳುವಾಗ ಕೇಳಬೇಕು, ಓದುವಾಗ ಓದಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ತಾಳ್ಮೆ ಮತ್ತು ಶಿಸ್ತು ಇಲ್ಲದೆ ಹೋದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ ತಾಳ್ಮೆ, ಕಲಿಯುವಿಕೆ ಹಾಗೂ ಆಲಿಸುವಿಕೆ ವಿದ್ಯಾರ್ಥಿ ದೆಸೆಯಲ್ಲಿ ಬಹಳ ಮುಖ್ಯವಾಗಿದ್ದು ಇಂದಿನ ಮಕ್ಕಳು ಮುಂದಿನ ದೇಶದ ಭವಿಷ್ಯ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದು ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಿ. ಅಂಬೇಡ್ಕರ್ ರವರ ಆದರ್ಶ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ದೇಶದ ಉತ್ತಮ ನಾಯಕರಾಗಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕೆಲವು ದಲಿತ ಮುಖಂಡರು ಕಳೆದ ಎರಡು ವರ್ಷಗಳಿಂದ ತಾಲೂಕು ಮಟ್ಟದ ಪರಿಶಿಷ್ಠ ಜಾತಿ ಮತ್ತು ಪಂಗಡದವರ ಹಿರತಕ್ಷಣಾ ಸಭೆ ಕರೆಯದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾಸಕ ಡಿ.ರವಿಶಂಕರ್ ಶೀಘ್ರವಾಗಿ ಎಸ್ ಸಿ ಮತ್ತು ಎಸ್‌ಟಿ ಸಭೆ ಕರೆಯುವಂತೆ ಸ್ಥಳದಲ್ಲಿದ್ದ ತಹಸಿಲ್ಧಾರ್ ಜಿ.ಸುರೇಂದ್ರಮೂರ್ತಿಯವರಿಗೆ ಸೂಚನೆ ನೀಡಿದರಲ್ಲದೇ ಡಿ,೬ ರಂದು ನಡೆಯಲಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಪರಿನಿರ್ವಹಣ ದಿನವನ್ನು ಎಲ್ಲರು ಸೇರಿ ಗೌರವಯುತವಾಗಿ ಅರ್ಥಪೂರ್ಣವಾಗಿ ಆಚರಿಸೋಣ ಎಂದು ಹೇಳಿದರು.

ತಹಸಿಲ್ಧಾರ್ ಜಿ.ಸುರೇಂದ್ರಮೂರ್ತಿ ಮಾತನಾಡಿ ನಮ್ಮ ಸಂವಿಧಾನ ದೇಶದ ಸರ್ವರು ಸಮಾನರು ಹಾಗೂ ಸ್ವತಂತ್ರರು ಎನ್ನುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರೀಕರಿಗು ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನನು ನೀಡಿದೆ. ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಹೊಂದಿರುವ ನಮ್ಮ ದೇಶ ಮತ್ತು ಸಂವಿಧಾನವನ್ನು ನಾವೇಲ್ಲಾ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಸಂವಿಧಾನ ದಿನಾಚರಣೆ ಆಚರಸಿಸೋನ ಎಂದು ಮನವಿ ಮಾಡಿದರು.

ಕಾರ್ಯಕ್ರಮವನ್ನು ಕುರಿತು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್‌ಮಹದೇವ್, ತಾಪಂ ಮಾಜಿ ಅಧ್ಯಕ್ಷ ಎಂ.ಹೆಚ್.ಸ್ವಾಮಿ, ಪ್ರಾಧ್ಯಾಪಕ ಡಾ.ಪ್ರಭು, ತಾಲೂಕು ಆದಿಜಾಂಭವ ಸಂಘದ ಅಧ್ಯಕ್ಷ ಎಂ.ಲೋಕೇಶ್, ನಿವೃತ್ತ ಪ್ರಾಂಶುಪಾಲ ಕೃಷ್ಣ, ದಲಿತ ಮುಖಂಡರಾದ ಹನಸೋಗೆ ನಾಗರಾಜ್, ಶಾಂತಮ್ಮರಾಜಯ್ಯ ಕಾರ್ಯ ಕ್ರಮವನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮಕ್ಕು ಮುನ್ನ ಶಾಸಕ ಡಿ.ರವಿಶಂಕರ್ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಜಾಗೃತಿ ಜಾತ ನಡೆಸಿದರು

ತಾಪಂ ಇಓ ಕುಲದೀಪ್, ಬಿಇಓ ಆರ್.ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಎಲ್.ಶಂಕರಮೂರ್ತಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ನಿರ್ದೇಶಕ ಸೈಯದ್ ಜಾಬೀರ್, ಉಪನ್ಯಾಸಕ ಡಿ.ಶ್ರೀನಿವಾಸ್, ಕಾಂಗ್ರೆಸ್ ತಾಲೂಕು ಎಸ್.ಸಿ.ಘಟಕದ ಅಧ್ಯಕ್ಷ ನಂದೀಶ್, ಆರೋಗ್ಯ ರಕ್ಷ ಕಮಿಟಿ ಸದಸ್ಯ ಹೆಚ್.ಹೆಚ್.ನಾಗೇಂದ್ರ, ರಾಜ್ಯ ರೈತ ಪರ್ವ ಸಂಘದ ಗೌರವಾಧ್ಯಕ್ಣ ಜೆ.ಎಂ.ಕುಮಾರ್, ಭೀಮ ಆರ್ಮಿ ತಾಲೂಕು ಅಧ್ಯಕ್ಷ ಗುರುರಾಜ್, ಪ್ರಗತಿಪರ ರೈತ ಕೆ.ಪಿ.ಜಗದೀಶ್, ಮುಖಂಡರಾದ ಹೊಸಕೋಟೆ ಚಲುವರಾಜ್, ಮಂಜುರಾಜ್, ಎಂ.ಟಿ.ರಾಜೇಶ್, ಬಸವೇಶ್, ಎಂ.ಎಸ್.ಪುಟ್ಟಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.

RELATED ARTICLES
- Advertisment -
Google search engine

Most Popular