ಕೆ. ಆರ್. ನಗರ: ನಮ್ಮ ದೇಶ ಸದೃಢವಾಗಲು ಮೋದಿ ಬೇಕು. ನಮ್ಮ ಮುಂದಿನ ಪೀಳಿಗೆ ನೆಮ್ಮದಿಯಿಂದ ಇರಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ದೇಶವನ್ನು ಆಳಬೇಕು ಎಂದು ನಮೋ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ನಮೋ ಬ್ರಿಗೇಡ್ ಬೈಕ್ ಯಾತ್ರ ಮೂಲಕ ಕೆ ಆರ್ ನಗರಕ್ಕೆ ಆಗಮಿಸಿದ ರವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಅವರನ್ನು ಬೆಂಬಲಿಸಲು ಕೈಗೊಂಡಿರುವ ಮತ್ತೊಮ್ಮೆ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದವರು.
ಮೋದಿ ಪ್ರಧಾನಿ ಆದಮೇಲೆ ಪ್ರತಿಯೊಬ್ಬ ಹಿಂದು ಕೂಡ ಧೈರ್ಯವಾಗಿ ಪ್ರಪಂಚದ ಮೂಲೆಯಲ್ಲೂ ಕೂಡ ನಾನು ಹಿಂದೂ ಎಂದು ಹೇಳುವ ಸಂದರ್ಭ ಮೂಡಿದೆ. ಈಗಿನ ಸಿದ್ದರಾಮಯ್ಯ ಸರ್ಕಾರವನ್ನು, ಸಿದ್ದರಾಮಯ್ಯನವರನ್ನು ಟೀಕಿಸಿದರೆ ಅವರ ಮೇಲೆ F.I.R. ದಾಖಲಿಸುತ್ತಿದ್ದಾರೆ. ಆದ್ದರಿಂದ ಅವರ .ಐ. ಏನ್. ಡಿ. ಎ. ಒಕ್ಕೂಟ ಏನಾದರೂ ಅಧಿಕಾರಕ್ಕೆ ಬಂದರೆ ತಮ್ಮ ಸ್ವಾರ್ಥಕ್ಕಾಗಿ ನಮ್ಮ ದೇಶವನ್ನು ಚೀನಾ ಮತ್ತು ಪಾಕಿಸ್ತಾನಕ್ಕೆ ಮಾರಿಬಿಡುತ್ತಾರೆ ಎಂದು ಆರೋಪಿಸಿದರು.
ಈಗ ತಮ್ಮ ಸ್ವಾರ್ಥಕ್ಕಾಗಿ ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವ ಸಿದ್ದರಾಮಯ್ಯನವರು ತಮ್ಮ ಅಧಿಕಾರಕ್ಕಾಗಿ ಏನು ಮಾಡಲು ಸಿದ್ಧರಿದ್ದಾರೆ ಎಂದು ತಿಳಿಸಿದರು.



                                    