ವರದಿ: ಎಡತೊರೆ ಮಹೇಶ್
ಪೊನ್ನಂಪೇಟೆ ಕೂರ್ಗ್ ತಾಂತ್ರಿಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೊದಲನೇ ವರ್ಷದ ಇಂಜಿನಿಯರಿಂಗ್ ಓದಲು ಪ್ರವೇಶ ಮಾಡಿದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮವನ್ನು ಕಾಲೇಜಿನ ಅಧ್ಯಕ್ಷರಾದ ಡಾಕ್ಟರ್ ಕಾರ್ಯಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಡಾ. ಕಾರ್ಯಪ್ಪ ನಮ್ಮ ಕಾಲೇಜಿನಲ್ಲಿ cs , ec, Ai, ಮೆಕಾನಿಕಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್ , ಮುಂತಾದ ಕೋರ್ಸ್ ಗಳಿಗೆ ಪ್ರವೇಶ ಪಡೆದು ಉತ್ತಮವಾಗಿ ಓದಿ ನಿಮ್ಮ ಭವಿಷ್ಯ ಕಟ್ಟಿಕೊಳ್ಳಲು ಬಂದಿದ್ದೀರಿ. ಇದರ ಹಿಂದೆ ಒಂದನೇ ತರಗತಿಯಿಂದ ಇಲ್ಲಿವರೆಗೆ ನಿಮ್ಮನ್ನು ಓದಿಸಲು ನಿಮ್ಮ ತಂದೆ ತಾಯಿ ಎಷ್ಟು ಕಷ್ಟಪಟ್ಟಿರುತ್ತಾರೆ ಎಂಬುವುದು ನಿಮಗೆ ಗೊತ್ತಿದೆ ಅವರ ಪರಿಶ್ರಮಕ್ಕೆ ದಕ್ಕೆ ಬಾರದಂತೆ ಒಳ್ಳೆಯ ಮಕ್ಕಳಾಗಿ ಜವಾಬ್ದಾರಿತ ವಿದ್ಯಾರ್ಥಿಗಳಾಗಿ ನೀವು ನಿಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ಬರಿ ಓದಿದರೆ ಸಾಲದು ನೀವು ಇಂಜಿನಿಯರಿಂಗ್ ಪಾಸ್ ಆಗುತ್ತೀರಿ ಆದರೆ ನಮ್ಮ ಕಾಲೇಜಿನಲ್ಲಿ ನೀವು ಓದಿದ ಮೇಲೆ ಇಂಜಿನಿಯರಿಂಗ್ ಆಗಿ ಒಳ್ಳೆಯ ಸಂಬಳವನ್ನ ತಂದು ನಿಮ್ಮ ತಂದೆ ತಾಯಿಗಳ ಕೈಯಲ್ಲಿ ಕೊಟ್ಟಾಗ ನಿಮ್ಮ ಅಪ್ಪ ಅಮ್ಮ ಖುಷಿಪಡುವುದನ್ನು ನೀವು ಕಣ್ತುಂಬ ನೋಡಬೇಕು.ನೀವು ಬುಕ್ ಹಿಡಿದು ಓದಿದರೆ ಸಾಲದು ಚಾತುರ್ಯ ಮತ್ತು ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಶಿಸ್ತು ಪಾಲನೆ ಮಾಡಬೇಕು ಆಗ ಮಾತ್ರ ನಿಮ್ಮ ಯಶಸ್ಸಿನ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ನಂತರ ಡಾ. ಚೆಂಗಪ್ಪ ಮಾತನಾಡಿ ನಿಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸಿದ್ದೀರಿ ಅಷ್ಟಕ್ಕೆ ನಿಮ್ಮ ನಿಮ್ಮ ಜವಾಬ್ದಾರಿ ಮುಗಿಯುವುದಿಲ್ಲ ನೀವು ನಿಮ್ಮ ಮಗುವಿನ ಮೇಲೆ ನಿಗಾ ಇಡಬೇಕು ಕಾಲೇಜಿಗೆ ಬಂದು ನಮ್ಮ ಮಕ್ಕಳು ಓದುತ್ತಿದ್ದಾರ ಅಥವಾ ಇಲ್ಲವಾ ಎಂಬುದರ ಬಗ್ಗೆ ಕಾಲೇಜಿಗೆ ಕನಿಷ್ಠ ತಿಂಗಳಿಗೊಮ್ಮೆಯಾದರೂ ಬಂದು ವಿಚಾರಿಸಬೇಕು.
ನೀವು 18 ವರ್ಷದಿಂದ ನಿಮ್ಮ ಮಗುವನ್ನು ಇಲ್ಲಿಯವರೆಗೆ ಜೋಪಾನದಿಂದ ಪ್ರೀತಿಯಿಂದ ಕಾಪಾಡಿಕೊಂಡು ಬಂದಿದ್ದೀರಿ 2031, ರ ವರೆಗೆ ಅಂದರೆ ಇನ್ನು ಕೇವಲ ಐದು ವರ್ಷ ಇದೇ ಜೋಪಾನ ಮಾಡಿ, ನೀವು ಏನು ಕನಸು ಕಂಡಿದ್ದೀರಿ ಆ ಕನಸನ್ನ ನಿಮ್ಮ ಮಕ್ಕಳು ಇನ್ನು ಐದು ವರ್ಷದ ನಂತರ ಅದನ್ನು ನನಸು ಮಾಡುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಬಸವರಾಜ್ , ಹಾಗೂ ಕಾಲೇಜಿನ ಎಲ್ಲಾ ಶಿಕ್ಷಕ ವೃಂದದವರು ಕಾಲೇಜು ಆಡಳಿತ ಮಂಡಳಿಯ ಮುಖ್ಯಸ್ಥರು, ಸಿಬ್ಬಂದಿಯವರು, ಪೋಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.