Tuesday, November 4, 2025
Google search engine

Homeರಾಜ್ಯಸುದ್ದಿಜಾಲಕಿತ್ತೂರು ಉತ್ಸವ ವೀರಜ್ಯೋತಿಗೆ ಸ್ವಾಗತ.

ಕಿತ್ತೂರು ಉತ್ಸವ ವೀರಜ್ಯೋತಿಗೆ ಸ್ವಾಗತ.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ: ಕಿತ್ತೂರು ಉತ್ಸವದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ವೀರಜ್ಯೋತಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಖಾನಾಪುರ ತಾಲ್ಲೂಕಿನ ನಂದಗಡ ಮೂಲಕ ಬೆಳಗಾವಿ ನಗರವನ್ನು ಪ್ರವೇಶಿಸಿದ ಜ್ಯೋತಿಯನ್ನು ಮಹಾಪೌರರಾದ ಮಂಗೇಶ್ ಪವಾರ್ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪೂಜೆ ಸಲ್ಲಿಸಿ ಬರಮಾಡಿಕೊಂಡರು.
ಮಹಾನಗರ ಪಾಲಿಕೆ ಆಯುಕ್ತರಾದ ಶುಭ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ತಹಶೀಲ್ದಾರ ಬಸವರಾಜ ನಾಗರಾಳ, ಮುರುಗೇಶ್ ಶಿವಪೂಜಿ, ಕಸ್ತೂರಿ ಭಾವಿ ಮತ್ತಿತರರು ಉಪಸ್ಥಿತರಿದ್ದರು.
ಕಲಾತಂಡಗಳ ಜತೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜ್ಯೋತಿಯು ಕಾಕತಿಗೆ ತೆರಳಿತು.
ಕಾಕತಿಯಿಂದ, ಹಿರೇ ಬಾಗೇವಾಡಿ, ಚಿಕ್ಕ ಬಾಗೇವಾಡಿ, ತಿಗಡಿ, ಮರೀಕಟ್ಟಿ, ಸಂಪಗಾಂವ ಮತ್ತಿತರ ಗ್ರಾಮಗಳ ಮೂಲಕ ಬೈಲಹೊಂಗಲಕ್ಕೆ ತೆರಳಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅ.9 ರಂದು ಬೆಂಗಳೂರಿನ ವಿಧಾನಸೌಧದ ಬಳಿ ಜ್ಯೋತಿಯಾತ್ರೆಗೆ ಚಾಲನೆ ನೀಡಿದ್ದರು. ಅ.23 ರಂದು ಜ್ಯೋತಿಯು ಕಿತ್ತೂರು ತಲುಪಲಿದೆ

RELATED ARTICLES
- Advertisment -
Google search engine

Most Popular