Tuesday, October 7, 2025
Google search engine

Homeರಾಜ್ಯಸುದ್ದಿಜಾಲನಾಗರಹೊಳೆಯಲ್ಲಿ ವನ್ಯಜೀವಿ ಸಪ್ತಾಹ: ಆಲದ ಕಟ್ಟೆ ಹಾಡಿ ಗ್ರಾಮಸ್ಥರಿಂದ ಸ್ವಚ್ಛತಾ ಕಾರ್ಯ

ನಾಗರಹೊಳೆಯಲ್ಲಿ ವನ್ಯಜೀವಿ ಸಪ್ತಾಹ: ಆಲದ ಕಟ್ಟೆ ಹಾಡಿ ಗ್ರಾಮಸ್ಥರಿಂದ ಸ್ವಚ್ಛತಾ ಕಾರ್ಯ

ಪಿರಿಯಾಪಟ್ಟಣ : ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಆನೆ ಚೌಕೂರು ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಆಲದ ಕಟ್ಟೆ ಹಾಡಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸೇರಿ ಪಿರಿಯಾಪಟ್ಟಣ, ಗೋಣಿಕೊಪ್ಪ ಮುಖ್ಯರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದರು.

ನಂತರ ಮಾತನಾಡಿದ ಆನೆ ಚೌಕೂರು ಅರಣ್ಯ ಪ್ರದೇಶದ ವಲಯ ಅರಣ್ಯಅಧಿಕಾರಿ ಸುಬ್ರಮಣಿ ಮಾತನಾಡಿ ಅರಣ್ಯ ಸಂಪತ್ತು ಸಂರಕ್ಷಣೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ವಿವಿಧ ಹಂತದಲ್ಲಿ ಸರ್ಕಾರೇತರ ಸಂಘಗಳು ಮತ್ತು ಸರ್ಕಾರ ನಡೆಸಿಕೊಂಡು ಬರುತ್ತಿದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸರಿಸುಮಾರು 642 ಚದರ ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದು ನಾಗರಹೊಳೆ ಅರಣ್ಯದಲ್ಲಿ ಹಲವಾರು ಬಗೆಯ ಪ್ರಾಣಿ ಸಂಕುಲ ಮತ್ತು ಸಸ್ಯ ಪ್ರಭೇದಗಳು ಇವೆ ಸಾರ್ವಜನಿಕ ರಸ್ತೆಯಲ್ಲಿ ಓಡಾಡುವಾಗ ಕಾಡಿನ ರಸ್ತೆ ಪಕ್ಕದಲ್ಲಿ ಪ್ಲಾಸ್ಟಿಕ್ ಕವರ್ ಮತ್ತು ಖಾಲಿ ನೀರಿನ ಬಾಟಲಿಗಳು ಮತ್ತು ಇತರ ತ್ಯಾಜ್ಯಗಳನ್ನು ಎಸೆದಿದ್ದು ಅವುಗಳನ್ನು ಪ್ರಾಣಿಗಳು ತಿಂದು ಸಾಯುತ್ತವೆ, ಅವುಗಳನ್ನು ಕಾಪಾಡುವ ಆದ್ಯಕರ್ತವ್ಯ ನಮ್ಮದಾಗಿದೆ, ಸಾರ್ವಜನಿಕರು ಸಹ ನಮ್ಮೊಂದಿಗೆ ಕೈಜೋಡಿಸಿದರೆ ಅರಣ್ಯವನ್ನು ಸುರಕ್ಷಿತವಾಗಿ ಕಾಪಾಡಲು ಸಾಧ್ಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ರಾಮಣ್ಣ ಹಾಗೂ ಅನಿಲ್ ಎಸ್. ಎ, ಗಸ್ತು ಅರಣ್ಯ ಪಾಲಕರು ರಾಜೇಶ್ ಸಿ , ಧರ್ಮೇಗೌಡ , ಜೇನು ಕುರುಬ ಅಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಸಿದ್ದು, ಗ್ರಾಮದ ಮುಖಂಡರಾದ ಕುಳ್ಳ, ಸಣ್ಣಪ್ಪ, ಮುತ್ತ, ಸುರೇಶ, ಗೌರಮ್ಮ, ಗ್ರಾಮಸ್ಥರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular