Friday, May 23, 2025
Google search engine

Homeರಾಜಕೀಯಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ: ಶಾಸಕ ಎಸ್‌ಟಿ ಸೋಮಶೇಖರ್

ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ: ಶಾಸಕ ಎಸ್‌ಟಿ ಸೋಮಶೇಖರ್

ಬೆಂಗಳೂರು: ನನ್ನ ಕ್ಷೇತ್ರಕ್ಕೆ ಯಾರು ಸಹಾಯ ಮಾಡುತ್ತಾರೋ ಅವರಿಗೆ ನಾನು ಬೆಂಬಲ ನೀಡುತ್ತೇನೆ. ಬಿಜೆಪಿಯವರ ಕೈಯಲ್ಲಿ ಏನು ಮಾಡುಕಾಗುತ್ತೋ ಮಾಡಿಕೊಳ್ಳಲಿ. ನಾನು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಹೇಳಿದ್ದಾರೆ.

ನಗರದ ಕೆಂಗೇರಿಯಲ್ಲಿ ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಅವರು, ಕ್ಷೇತ್ರದ ಎಲ್ಲ ಮತದಾರರ ಸಭೆ ಕರೆದಿದ್ದೆ, ಈ ಸಭೆಯಲ್ಲಿ ಇದುವರೆಗೂ ನಡೆದಂತಹ ಎಲ್ಲ ಮಾಹಿತಿಯನ್ನು ಕೊಟ್ಟಿದ್ದೇನೆ. ಬಿಜೆಪಿಯವರು ನನ್ನ ಜತೆಗೆ ನಡೆದುಕೊಂಡ ಬಗ್ಗೆಯೂ ಮಾಹಿತಿ ನೀಡಿದ್ದೇನೆ ಎಂದರು. ರಾಜ್ಯ ನಾಯಕರೂ ಮಾತ್ರವಲ್ಲದೇ, ಕೇಂದ್ರ ನಾಯಕರೂ ಕೂಡ ನನ್ನನ್ನೂ ಸಂಪರ್ಕ ಮಾಡಿಲ್ಲ. ಮೊನ್ನೆ ಅಮಿಶಾ ಅವರು ಬಂದಾಗಲೂ ಕೂಡ ನನಗೆ ಆಹ್ವಾನ ನೀಡಿಲ್ಲ. ಗುರುವಾರದವರೆಗೂ ಕಾದಿದ್ದೆ, ಆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ, ಕಾರ್ಯಕರ್ತರ ಸಭೆ ಕರೆದಿದ್ದೇನೆ. ನಮ್ಮ ಅವಶ್ಯಕತೆ ಇಲ್ಲದವರ ಬಳಿ ನಾವ್ಯಾಕೆ ಹೋಗಬೇಕು ಎಂದು ಹೇಳಿದರು.

RELATED ARTICLES
- Advertisment -
Google search engine

Most Popular