Monday, November 3, 2025
Google search engine

Homeರಾಜ್ಯಸುದ್ದಿಜಾಲನಾಡದ್ರೋಹಿ ಎಂಇಎಸ್‌ಗೆ 'ಬ್ರೇಕ್' ಬೀಳಲಿದೆಯೇ ?.

ನಾಡದ್ರೋಹಿ ಎಂಇಎಸ್‌ಗೆ ‘ಬ್ರೇಕ್’ ಬೀಳಲಿದೆಯೇ ?.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ:
ಈಗ ಇಡೀ ರಾಜ್ಯದ ಕಣ್ಣು ಗಡಿನಾಡ ಬೆಳಗಾವಿಯತ್ತ ನೆಟ್ಟಿದೆ.
ನವೆಂಬ‌ರ್ 1- ರಾಜ್ಯೋತ್ಸವದಂದು ಕರ್ನಾಟಕದಾದ್ಯಂತ ಕನ್ನಡ ಧ್ವಜಗಳ ಹಿರಿಮೆ ತೇಲಬೇಕಾದ ದಿನವೇ ಬೆಳಗಾವಿಯಲ್ಲಿ “ಕರಾಳ ದಿನ”ದ ಹೆಸರಿನಲ್ಲಿ ನಾಡದ್ರೋಹದ ನಾಟಕ ನಡೆಯುತ್ತಿರುವುದು ನಿಜಕ್ಕೂ ಲಜ್ಞಾಸ್ಪದ.
ವರ್ಷದಿಂದ ವರ್ಷಕ್ಕೆ “ಅನುಮತಿ ಇಲ್ಲ” ಎಂದು ಹೇಳುತ್ತಾ ಕೊನೆಯ ಕ್ಷಣದಲ್ಲಿ ಎಂಇಎಸ್ ಪುಂಡರಿಗೆ ಕಾನೂನು ಬಾಹಿರವಾಗಿ ಮೆರವಣಿಗೆ ನಡೆಸಲು ಅವಕಾಶ ನೀಡಿರುವ ಅಧಿಕಾರಿಗಳ ನಿಲುವು ಈಗ ಪ್ರಶ್ನಾರ್ಥಕವಾಗಿದೆ.

ಇದೇ ವೇಳೆ, “ಕರಾಳ ದಿನ” ಆಚರಣೆಗೆ ವಿಪರೀತ ಪೊಲೀಸ್ ಬಂದೋಬಸ್ತ್ ನೀಡುವುದು ಕನ್ನಡಿಗರ ಮನಸ್ಸಿಗೆ ಚುಚ್ಚುವ ಕತ್ತಿಯಂತಾಗಿದೆ.
ಈ ಬಾರಿ ಮಾತ್ರ – ಬೆಳಗಾವಿ ಪೊಲೀಸರು “ಲಾರಿಯನ್ನು ಲಾರಿಯಂತೆ” ಬಳಸುವ ಧೈರ್ಯ ತೋರಿಸಿದರೆ, ನಾಡದ್ರೋಹದ ಈ ಕಪ್ಪು ಅಧ್ಯಾಯಕ್ಕೆ ಕೊನೆ ಬರಬಹುದು.
ಇದು ಕೇವಲ ಕಾನೂನು-ಸುವ್ಯವಸ್ಥೆಯ ಪರೀಕ್ಷೆ ಅಲ್ಲ,

ಇದು ಕನ್ನಡದ ಗೌರವ ಕಾಯುವ ನಿಜವಾದ ಅಗ್ನಿಪರೀಕ್ಷೆ.
ಕರವೇನಿಂದ ಎಚ್ಚರಿಕೆ

ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ ಇತ್ತೀಚೆಗೆ ಬೆಳಗಾವಿಯಲ್ಲಿ “ಕನ್ನಡ ದೀಕ್ಷೆ” ಕಾರ್ಯಕ್ರಮ ನಡೆಯಿತು.
ಈ ವೇಳೆ ಅವರು ಸ್ಪಷ್ಟವಾಗಿ ಎಚ್ಚರಿಸಿದರು
ಯಾವುದೇ ಪರಿಸ್ಥಿತಿಯಲ್ಲೂ ಕರಾಳ ದಿನಕ್ಕೆ ಅನುಮತಿ ಕೊಡಬಾರದು. ಅಗತ್ಯವಾದರೆ ಕನ್ನಡಿಗರು ಬೀದಿಗಿಳಿದು ಹೋರಾಟ ನಡೆಸುತ್ತಾರೆ!”
ಕರವೇ ಬೆಳಗಾವಿ ಘಟಕ ಈಗಾಗಲೇ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಶಹಾಪುರದ ಶಿವಾಜಿ ಉದ್ಯಾನದಿಂದ ಆರಂಭವಾಗುವ ಕರಾಳ ದಿನದ ಮೆರವಣಿಗೆಗೆ ಯಾವುದೇ ರೀತಿಯ
ಅನುಮತಿ ನೀಡಬಾರದು ಎಂದು ಒತ್ತಾಯಿಸಿದೆ.
ಹೆಚ್ಚುವರಿಯಾಗಿ, ಅದೇ ಮಾರ್ಗದಿಂದಲೇ ರಾಜ್ಯೋತ್ಸವ ಮೆರವಣಿಗೆ ಆಯೋಜನೆ ಮಾಡುವುದಾಗಿ ಕರವೇ ತಿಳಿಸಿದೆ . ಬೆಳಗಾವಿ ಪೊಲೀಸರು ಈಗ ಎರಡು ಮಾರ್ಗಗಳ ಮಧ್ಯೆ ನಿಂತಿದ್ದಾರೆ
ಒಂದೆಡೆ ಕಾನೂನು-ಸುವ್ಯವಸ್ಥೆಯ ಕರ್ತವ್ಯ,
ಮತ್ತೊಂದೆಡೆ ನಾಡು-ನುಡಿಯ ಗೌರವದ ಹೊಣೆ.
ಕರಾಳ ದಿನಕ್ಕೆ ಅನುಮತಿ ನಿರಾಕರಿಸುವ ಮೂಲಕ ಪೊಲೀಸರು ನಿಜವಾದ ಕನ್ನಡ ಸೇವೆ ಸಲ್ಲಿಸುವ ಅವಕಾಶವನ್ನು ಹೊಂದಿದ್ದಾರೆ. ಜನಾಭಿಪ್ರಾಯ ಸ್ಪಷ್ಟ.

ಕನ್ನಡ ನಾಡಿನ ಹೆಮ್ಮೆ ಎತ್ತಿಹಿಡಿಯಲಿ!”
ರಾಜ್ಯದ ಕಣ್ಣು ಬೆಳಗಾವಿಯತ್ತ!
ರಾಜ್ಯೋತ್ಸವದ ಹಬ್ಬದ ಹರ್ಷಕ್ಕಿಂತ ಹೆಚ್ಚಾಗಿ,
ಈ ಬಾರಿ ಬೆಳಗಾವಿಯ ಬೆಳಗಿನ ದೃಶ್ಯ ರಾಜ್ಯದ ಮನಸ್ಸನ್ನು ಅಳೆಯಲಿದೆ.
ಎಂಇಎಸ್‌ಗೆ ವೇದಿಕೆ ಸಿಗುತ್ತದೆಯಾ?
ಅಥವಾ ಬೆಳಗಾವಿ ಪೊಲೀಸರು ನಾಡದ್ರೋಹಕ್ಕೆ ಬಾಗಿಲು ಮುಚ್ಚುತ್ತಾರಾ?
ಎಂಬ ಪ್ರಶ್ನೆಗೆ ನವೆಂಬರ್ 1ರ ಬೆಳಗಾವಿಯೇ ಉತ್ತರ ಕೊಡಲಿದೆ.

RELATED ARTICLES
- Advertisment -
Google search engine

Most Popular