ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಕಾರ್ಡ್‌ಗಳನ್ನು ಮನೆ ಮನೆಗೆ ತಲುಪಿಸುವುದರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್‌ರವರ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಚಾಮುಂಡಿಬೆಟ್ಟ, ಕಡಕೊಳ, ಸಿಂಧುವಳ್ಳಿ ಗ್ರಾಮಗಳಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರವಾಗಿ ಮತಯಾಚಿಸಿ ಮಾತನಾಡಿದ ಅವರು ಬಿ.ಜೆ.ಪಿ. ಸುಳ್ಳಿನ ಪಕ್ಷವಾಗಿದ್ದು ಕೊಟ್ಟ ಯಾವುದೇ ಭರವಸೆಗಳನ್ನು ಇದುವರೆವಿಗೂ ಈಡೇರಿಸಿಲ್ಲ. ಚುನಾವಣೆಯ ಸಮಯದಲ್ಲಿ ಹೇಳಿದ ಸುಳ್ಳು ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಗೃಹಸಚಿವ ಅಮಿತ್ ಶಾ ಹೇಳುತ್ತಾರೆ. ಇವರನ್ನು ನಂಬಬೇಡಿ, ಮೋದಿ ಮುಖ ನೋಡಿ ಓಟು ಹಾಕಬೇಡಿ. ಮೋದಿಯವರು ಎಲ್ಲಾ ಕ್ಷೇತ್ರಗಳಿಗೂ ಬಂದು ಕೆಲಸ ಮಾಡಲು ಆಗುವುದಿಲ್ಲ. ನುಡಿದಂತೆ ನಡೆದ ಕಾಂಗ್ರೆಸ್ ಪಕ್ಷವನ್ನು ತಾವೆಲ್ಲರೂ ಬೆಂಬಲಿಸಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಈ ಬಾರಿ ಅಧಿಕಾರಕ್ಕೆ ಬಂದರೆ ಬಡಕುಟುಂಬದ ಮಹಿಳೆಗೆ ಮಹಾಲಕ್ಷ್ಮಿ ಯೋಜನೆಯಡಿ ವರ್ಷಕ್ಕೆ ೧ ಲಕ್ಷ ರೂ ನೇರವಾಗಿ ಅವರ ಖಾತೆಗೆ ಬರುತ್ತದೆ.
ರೈತರ ಸಾಲ ಮನ್ನಾ ಮಾಡುತ್ತಾರೆ. ಕೃಷಿಗೆ ಬೆಂಬಲ ಬೆಲೆ ನೀಡುತ್ತಾರೆ. ಆದ್ದರಿಂದ ಜನಪರ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಕೇಂದ್ರ ಸರ್ಕಾರವನ್ನು ಧೈರ್ಯವಾಗಿ ಪ್ರಶ್ನೆ ಮಾಡುವ ನಮ್ಮ ಅಭ್ಯರ್ಥಿ ಎಂ. ಲಕ್ಷ್ಮಣ್‌ರವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಮಾತನಾಡಿ ಇದೊಂದು ಪ್ರತಿಷ್ಠೆಯ ಚುನಾವಣೆಯಾಗಿದ್ದು ನಾನು ಗೆದ್ದರೆ ಸಿದ್ದರಾಮಯ್ಯರವರು ಗೆದ್ದಂತೆ. ಬಿಜೆಪಿಯವರ ಯಾವುದೇ ಭಾವನಾತ್ಮಕ ವಿಷಯಗಳಿಗೆ ಕಿವಿಗೊಡಬೇಡಿ. ಗ್ಯಾರಂಟಿಯಿಂದ ರಾಜ್ಯದ ಶೇ. ೯೫ ರಷ್ಟು ಬಡವರಿಗೆ ಅನುಕೂಲವಾಗಿದ್ದು ಪ್ರತಿಯೊಬ್ಬರು ನನಗೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಮುಡಾ ಅಧ್ಯಕ್ಷ ಕೆ. ಮರೀಗೌಡ, ಜಿ.ಪಂ. ಮಾಜಿ ಸದಸ್ಯರಾದ ರಾಕೇಶ್ ಪಾಪಣ್ಣ, ಪಟೇಲ್ ಜವರೇಗೌಡ, ಅರುಣ್‌ಕುಮಾರ್, ಜವರಪ್ಪ, ಕೂರ್ಗಳ್ಳಿ ಮಹಾದೇವ್, ಕಡಕೊಳ ನಾಗರಾಜ್, ಬೀರಿಹುಂಡಿ ಬಸವಣ್ಣ, ನಾರಾಯಣ, ಲತಾಸಿದ್ದಶೆಟ್ಟಿ, ಮುಖಂಡರಾದ ಕೃಷ್ಣಕುಮಾರ್ ಸಾಗರ್, ಕೋಟೆಹುಂಡಿ ಮಹಾದೇವ, ತಾ.ಪಂ. ಮಾಜಿ ಸದಸ್ಯರಾದ ಶ್ರೀಕಂಠ ತೊಂಡೇಗೌಡ, ಕೆಂಚಪ್ಪ, ಕೆ. ಹೆಬ್ಬಾಳೇಗೌಡ, ಮಂಜುಳಾ ಮಂಜುನಾಥ್, ಜಿ.ಕೆ. ಬಸವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಹೊಸಹುಂಡಿ ರಘು, ಗ್ರಾ.ಪಂ. ಅಧ್ಯಕ್ಷೆ ನಾಗಮ್ಮ, ಭರತಕಾಳಯ್ಯ, ಶಂಭು ನಾಗವಾಲ, ನರೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ. ಗುರುಸ್ವಾಮಿ, ಜೆ. ಸತೀಶ್‌ಕುಮಾರ್, ಕೊಪ್ಪಲ್‌ರಾಜಣ್ಣ, ಮಹಾದೇವ್, ನಾಡನಹಳ್ಳಿ ರವಿ, ಶಿವಣ್ಣ, ರವಿ, ದಡದಹಳ್ಳಿ ಮಹಾದೇವ, ಶಿವಲಿಂಗ, ಕೆ.ಪಿ. ಮಹಾದೇವ, ವಕೀಲ ಮನೋಜ್, ದನಗಳ್ಳಿ ಬಸವರಾಜ್ ಹಾಜರಿದ್ದರು.