Friday, November 28, 2025
Google search engine

Homeಕ್ರೀಡೆಟಿ20 ವಿಶ್ವಕಪ್‌ ಗೆಲ್ಲಿ, ಇಲ್ಲಾಂದ್ರೆ ಮನೆಗೆ ನಡೆಯಿರಿ: ಗೌತಮ್‌ ಗಂಭೀರ್‌ಗೆ ಬಿಸಿಸಿಐ ವಾರ್ನಿಂಗ್‌

ಟಿ20 ವಿಶ್ವಕಪ್‌ ಗೆಲ್ಲಿ, ಇಲ್ಲಾಂದ್ರೆ ಮನೆಗೆ ನಡೆಯಿರಿ: ಗೌತಮ್‌ ಗಂಭೀರ್‌ಗೆ ಬಿಸಿಸಿಐ ವಾರ್ನಿಂಗ್‌

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯ (IND vs SA) ನಡೆದಿದ್ದ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದ ಪಿಚ್‌ ಬಗ್ಗೆ ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ನೀಡಿದ್ದ ಹೇಳಿಕೆ ಬಗ್ಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಅಸಮಾಧಾನಗೊಂಡಿರುವುದು ವರದಿಯಾಗಿದ್ದು, ಈ ಪಂದ್ಯದಲ್ಲಿ ಭಾರತ ತಂಡ 408 ರನ್‌ಗಳ ಭಾರಿ ಅಂತರದಲ್ಲಿ ಸೋತು ಮುಖಭಂಗ ಅನುಭವಿಸಿತ್ತು. ಆ ಮೂಲಕ ಟೀಮ್‌ ಇಂಡಿಯಾ 2-0 ಅಂತರದಲ್ಲಿ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಷ್‌ ಆಘಾತ ಅನುಭವಿಸಿತ್ತು. ಇದರೊಂದಿಗೆ ಭಾರತ ತಂಡ ಗಂಭೀರ್‌ ಮಾರ್ಗದರ್ಶನದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಎರಡನೇ ಬಾರಿ ಕ್ಲೀನ್‌ ಸ್ವೀಪ್‌ ಸೋಲು ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಗೌತಮ್‌ ಗಂಭೀರ್‌ ಅವರ ಮೇಲೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿದ್ದು,

“ನಾನು ಎದುರು ನೋಡುತ್ತಿದ್ದ ಪಿಚ್‌ ಇದಾಗಿತ್ತು. ಇಲ್ಲಿನ ಪಿಚ್‌ ಕ್ಯುರೇಟರ್‌ ತುಂಬಾ ಸಹಾಯಕ ಹಾಗೂ ಬೆಂಬಲವಾಗಿತ್ತು, ಈ ತರಹದ ಪಿಚ್‌ ನಮಗೆ ಬೇಕಿತ್ತು ಹಾಗೂ ಅದೇ ತರಹ ನಮಗೆ ಪಿಚ್‌ ಸಿಕ್ಕಿದೆ. ಅಂದ ಹಾಗೆ ನೀವು ಚೆನ್ನಾಗಿ ಆಡಿಲ್ಲವಾದರೆ, ಈ ರೀತಿಯ ಫಲಿತಾಂಶ ನಿಮಗೆ ಸಿಗುತ್ತದೆ ಎಂದು ಕೋಲ್ಕತಾ ಟೆಸ್ಟ್‌ ಸೋಲಿನ ಬಳಿಕ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ತಿಳಿಸಿದ್ದರು.

ಭಾರತ ತಂಡದಲ್ಲಿ ಉತ್ತಮ ಬ್ಯಾಟರ್ ಗಳಿದ್ದಾರೆ ಯೋಚಿಸುವ ಅವಶ್ಯಕತೆ ಇಲ್ಲ :

“ಹೌದು, ಅದು ತುಂಬಾ ಅದ್ಭುತವಾದ ಪಿಚ್‌ ಅಲ್ಲದಿರಬಹುದು, ಅಲ್ಲಿ ನೀವು ದೊಡ್ಡ ಹೊಡೆತಗಳನ್ನು ಆಡಬಹುದು. ಈ ವಿಕೆಟ್‌ನಲ್ಲಿ ಯಾವುದೇ ಕಠಿಣತೆ ಇರಲಿಲ್ಲ. ಅದು ಆಡಲಾಗದ ಪಿಚ್‌ ಆಗಿರಲಿಲ್ಲ. ಅದು ನಿಮ್ಮ ತಂತ್ರವನ್ನು ನಿರ್ಣಯಿಸಬಹುದಾದ ವಿಕೆಟ್ ಆಗಿತ್ತು, ನಿಮ್ಮ ಮಾನಸಿಕ ದೃಢತೆಯನ್ನು ಪ್ರಶ್ನಿಸಬಹುದು ಮತ್ತು ಅದಕ್ಕಿಂತ ಮುಖ್ಯವಾದದ್ದು ನಿಮ್ಮ ಮನೋಧರ್ಮ ಎಂದು ಹೇಳಿದ್ದಾರೆ.

ಗುವಾಹಟಿ ಟೆಸ್ಟ್‌ ಪಂದ್ಯದಲ್ಲಿಯೂ ಭಾರತ ತಂಡದ ಸಂಗತಿಗಳು ಬದಲಾಗಿರಲಿಲ್ಲ. ಭಾರತದ ಬ್ಯಾಟ್ಸ್‌ಮನ್‌ಗಳು ಇಲ್ಲಿಯೂ ಕೂಡ ಕುಸಿದಿದ್ದರು. ಕೋಲ್ಕತಾ ಪಿಚ್‌ ರೀತಿ ಇಲ್ಲಿನ ವಿಕೆಟ್‌ ಅಷ್ಟೊಂದು ತಿರುಗುತ್ತಿರಲಿಲ್ಲ, ಆದರೆ ಇದು ಸಾಂಪ್ರದಾಯಿಕ ಪಿಚ್‌, ಅಂದರೆ ಆಟಗಾರರು ಆಡಿಕೊಂಡು ಬೆಳೆದಿರುವ ಪಿಚ್‌ ರೀತಿ ಇದಾಗಿದೆ ಎಂದರು.

ಗೌತಮ್‌ ಗಂಭೀರ್‌ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಾತ್ರ ಅವರು ಇನ್ನೂ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಮೂಡಿ ಬಂದಿಲ್ಲ. ಹಾಗಾಗಿ ಮುಂದಿನ ವರ್ಷ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಇದೆ. ಈ ಟೂರ್ನಿಯಲ್ಲಿ ಭಾರತ ತಂಡ ಪ್ರದರ್ಶನ ಉತ್ತಮವಾಗಿಲ್ಲ ಅಥವಾ ಪ್ರಶಸ್ತಿ ಗೆದ್ದಿಲ್ಲವಾದರೆ, ಗೌತಮ್‌ ಗಂಭೀರ್‌ ವಿರುದ್ಧ ಸಂಗತಿಗಳು ಕಾಣಿಸಬಹುದು. ಅಂದರೆ, ಅವರನ್ನು ಹೆಡ್‌ ಕೋಚ್‌ ಸ್ಥಾನದಿಂದ ಕೈ ಬಿಟ್ಟರೂ ಅಚ್ಚರಿ ಪಡುವುದಿಲ್ಲ ಎಂದು ಮನೋಜ್ ತಿವಾರಿ ಹೇಳಿದ್ದಾರೆ.

ಗೌತಮ್‌ ಗಂಭೀರ್‌ಗೆ ಸಿತಾಂಶು ಕೊಟಕ್‌ ಬೆಂಬಲ

ಕ್ಯುರೇಟರ್‌ಗಳು ಹೊಣೆ ಹೊರಬಾರದೆಂದು ಗೌತಮ್ ತನ್ನ ಮೇಲೆಯೇ ಆರೋಪ ಹೊರಿಸಿಕೊಂಡರು. ನಾವು ಭಾರತದಲ್ಲಿ ಆಡುವಾಗ – ಇತರ ದೇಶಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುವಂತೆ – ನಾವು ಸ್ಪಿನ್ ಅನ್ನು ಅವಲಂಬಿಸಿದ್ದೇವೆ ಎಂದು ಸಹಾಯಕ ಕೋಚ್‌ ಸಿತಾಂಶು ಕೊಟಕ್‌ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular