Friday, December 5, 2025
Google search engine

Homeರಾಜ್ಯಸುದ್ದಿಜಾಲ ರಾಟ್ ವೀಲರ್ ನಾಯಿ ದಾಳಿಗೆ ಮಹಿಳೆ ಬಲಿ

 ರಾಟ್ ವೀಲರ್ ನಾಯಿ ದಾಳಿಗೆ ಮಹಿಳೆ ಬಲಿ

ದಾವಣಗೆರೆ: ರಾಟ್ ವೀಲರ್ ನಾಯಿ ದಾಳಿಗೆ ಮಹಿಳೆ ಬಲಿಯಾದ ಘಟನೆ ದಾವಣಗೆರೆ ಹೊರ ವಲಯದ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ.

ನಾಯಿ ದಾಳಿಯಿಂದ ಸಾವನ್ನಪಿದ ಮಹಿಳೆಯನ್ನು ಅನಿತಾ (38) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ ಕಾರಿನಲ್ಲಿ ಬಂದ ಅಪರಿಚಿತರು 2 ರಾಟ್ ವೀಲರ್ ಜಾತಿಯ ನಾಯಿಗಳನ್ನು ಹೊನ್ನೂರು ಗೊಲ್ಲರಹಟ್ಟಿಯ ಬಳಿ ಬಿಟ್ಟು ಹೋಗಿದ್ದಾರೆ. ಅದೇ ಸಮಯದಲ್ಲಿ ಮನೆಯಿಂದ ಹೊರ ಬಂದ ಮಹಿಳೆ ಮೇಲೆ ಶ್ವಾನಗಳು ದಾಳಿ ನಡೆಸಿವೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಶಿರಾ ತಾಲೂಕು ಅಸ್ಪತ್ರೆಯ ಶವಗಾರದಲ್ಲಿ ಮಹಿಳೆಯ ಮೃತದೇಹವನ್ನು ಶವಪರಿಕ್ಷೆ ನಡೆಸಲಾಗಿದೆ. ಮಹಿಳೆಗೆ ಸುಮಾರು 50 ಕಡೆಗಳಲ್ಲಿ ನಾಯಿ ಕಚ್ಚಿದೆ ಎಂದು ತಿಳಿದು ಬಂದಿದೆ.

ನಾಯಿಗಳು ಗ್ರಾಮದ ಜಮೀನಿನಲ್ಲೇ ಬೀಡು ಬಿಟ್ಟಿದ್ದವು. ಅವುಗಳನ್ನು ಹಿಡಿದು ಅವುಗಳ ಕಾಲಿಗೆ ಹಗ್ಗ ಬಿಗಿದು ಕೋಲಿಗೆ ಕಟ್ಟಿಕೊಂಡು ಗ್ರಾಮಸ್ಥರು ಎಳೆದುಕೊಂಡು ಹೋಗಿದ್ದಾರೆ. ನಾಯಿಗಳನ್ನು ತಂದು ಬಿಟ್ಟ ನಾಯಿ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular