Thursday, March 12, 2026
Google search engine

Homeರಾಜ್ಯಸುದ್ದಿಜಾಲಮಹಿಳೆಯರಿಗೆ ಸಮಾನ ಹಕ್ಕು, ಗೌರವ ಅಗತ್ಯ : ಪ್ರಸನ್ನ ಕುಮಾರಿ

ಮಹಿಳೆಯರಿಗೆ ಸಮಾನ ಹಕ್ಕು, ಗೌರವ ಅಗತ್ಯ : ಪ್ರಸನ್ನ ಕುಮಾರಿ

ಕೋಲಾರ : ಮಹಿಳೆ ಸಮಾಜದ ಪ್ರಗತಿಗೆ ದೊಡ್ಡ ಶಕ್ತಿಯಾಗಿದ್ದು, ತಾಯಿ, ಶಿಕ್ಷಕಿ, ವೈದ್ಯೆ, ವಿಜ್ಞಾನಿ, ನಾಯಕಿಯಾಗಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಾ ಮಹಿಳೆಯು ಕುಟುಂದ ಹೃದಯ ಆಗಿದ್ದಾಳೆ ಎಂದು ಉಪನ್ಯಾಸಕಿ ಪ್ರಸನ್ನ ಕುಮಾರಿ ಬಣ್ಣಿಸಿದರು. ನಗರದ ಬುದ್ಧ ಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಜಿಲ್ಲಾ ಸಮನ್ವಯ ಸಮಿತಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರಿಗೆ ಸಮಾನ ಹಕ್ಕು ಗೌರವ ಮತ್ತು ಅವಕಾಶಗಳನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮಹಿಳೆಯರು ಗೌರವಿಸುವುದು ಮತ್ತು ಅವರ ಕನಸುಗಳಿಗೆ ಬೆಂಬಲ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಮಹಿಳೆಯರ ಶಕ್ತಿ ತ್ಯಾಗ ಸಾಧನೆಗಳನ್ನು ಗೌರವಿಸುವ ಸಲುವಾಗಿ ನಡೆಯುವ ಇಂತಹ ಕಾರ್ಯಕ್ರಮಗಳು ಕಾಲ್ ಮಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಆಗಿವೆ ಎಂದರು.

೧೯೦೦ ರ ದಶಕದ ಆರಂಭದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ನಡೆದ ಹೋರಾಟದ ಪ್ರೇರಣೆಯ ಮಹಿಳಾ ದಿನಾಚರಣೆಯಲ್ಲಿ ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಸಾಧಕರನ್ನು ಗೌರವಿಸಲಾಗುತ್ತಿರುವುದು ಸ್ವಾಗತಾರ್ಹ ಎಂದು ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರಾದ ಮಂಜುನಾಥ್ ಅಭಿಪ್ರಾಯಪಟ್ಟರು.


ಬಳಿಕ ಸಮಿತಿಯ ಜಿಲ್ಲಾ ಗೌರವಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಮಹಿಳಾ ಹಕ್ಕುಗಳ ಜಾಗೃತಿ ಜೊತೆಗೆ ಶಿಕ್ಷಣ, ಉದ್ಯೋಗ, ಸಂರಕ್ಷಣೆಯ ಕಡೆ ಗಮನ ಸೆಳೆಯಲು ಸಮಾಜದ ಪ್ರತಿಯೊಬ್ಬ ಮಹಿಳೆಯೂ ಶಿಕ್ಷಣದಿಂದ ವಂಚಿತರಾಗಬಾರದು, ಮಹಿಳೆಯರ ಶ್ರಮ ಸಾಧನೆ ಸಮಯದ ಅಭಿವೃದ್ಧಿಗೆ ಮುಖ್ಯವಾಗುತ್ತದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಎನ್.ಮುನಿರಾಜು ಮಾತನಾಡಿ, ಮಹಿಳೆಯರನ್ನು ಗೌರವಿಸುವುದು ಎಂದರೆ ಸಮಾಜದ ಪ್ರಗತಿಯನ್ನು ಗೌರವಿಸುವುದು ಆಗಿದೆ. ಜಿಲ್ಲೆಯ ಎಲ್ಲ ಇಲಾಖೆಗಳ ನೌಕರರು ಸಮಿತಿಯ ಸರಸತ್ವ ಆಂದೋಲನದಲ್ಲಿ ಭಾಗವಹಿಸಿ ಜಾಗೃತ ಆಗಬೇಕು ಸೌಲಭ್ಯಗಳಿಂದ ವಂಚಿತರಾಗಬಾರದು ಮಹಿಳೆ ಸಮಾಜದ ಕಣ್ಣು ಎಂಬುದನ್ನು ಸಾಬೀತುಪಡಿಸುವ ಚಿಂತನೆ ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ಸಮಿತಿಯ ಮುಖಂಡರುಗಳಾದ ಮುಕುಂದ, ಸುನಿತಾ, ಅಶ್ವಿನ್, ಆರೋಗ್ಯ ಇಲಾಖೆ ಲೋಕೇಶ್ ಟ್ರೈನಿಂಗ್ ಆಫೀಸರ್ ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular