ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಮ್ಮ ಅವಧಿಯಲ್ಲಿ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 34 ಗ್ರಾ.ಪಂ.ವ್ಯಾಪ್ತಿಯಲ್ಲಿ ಬಾಕಿ ಉಳಿದ 7 ಗ್ರಾ.ಪಂ.ವ್ಯಾಪ್ತಿಯಲ್ಲಿ ಕೃಷಿಪತ್ತಿನ ಸಹಕಾರ ಸಂಘಗಳನ್ನು ಆರಂಭಿಸಲು ಶ್ರಮಿಸುವುದಾಗಿ ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.
ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಹೊಸ ಕೃಷಿತ್ತಿನ ಸಹಕಾರ ಸಂಘಗಳನ್ನು ಆರಂಭಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲು ಬ್ಯಾಂಕಿನ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.
ಸಂಘದ ಮೂಲಕ ಕಳೆದ ಎರಡು ವರ್ಷಗಳಿಂದ ಹೊಸದಾಗಿ ಸಾಲ ಪಡೆಯಲು ಅರ್ಜಿ ಸಲ್ಲಿಸುತ್ತಿರುವ ಷೇರುದಾರ ರೈತರಿಗೆ ಈ ಸಾಲಿನಿಂದ ಸಾಲ ಕೊಡಿಸಲು ಶ್ರಮಿಸುವುದಾಗಿ ತಿಳಿಸಿದ ದೊಡ್ಡಸ್ವಾಮೇಗೌಡರರು ಜತಗೆ ಹೆಚ್ಚಿನ ರೀತಿಯಲ್ಲಿ ರೈತರಿಗೆ ಟ್ಯಾಕ್ಟರ್, ಐಪಿ ಸೆಟ್, ಸ್ವ-ಸಹಾಯ ಸಂಘಗಳಿಗೆ ಸಕಾಲದಲ್ಲಿ ಸಾಲವನ್ನು ಮಂಜೂರಿಗೆ ಪ್ರಯತ್ನ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಜಿಲ್ಲಾ ನಿರ್ದೇಶಕ ಗಂಧನಹಳ್ಳಿ ಹೇಮಂತ್ , ಕಾಂಗ್ರೆಸ್ ಮುಖಂಡರಾದ ಜಿ.ಎಂ.ಲೋಹಿತ್, ಪರೀಗೌಡ, ಅರಸ್ ಮಂಜುನಾಥ್ ಮಹದೇವ್, ಬಾರ್ ಹರೀಶ್, ಮಹೇಶ್, ಜಿ ಆರ್ ಹರೀಶ್ ,ನಿಂಗರಾಜು, ರಂಗಸ್ವಾಮಿ ಗುಡ್ಡಪ್ಪ ರಾಕೇಶ್, ವೈಭವ್ ,ಇತರರು ಹಾಜರಿದ್ದರು.