Friday, September 19, 2025
Google search engine

Homeರಾಜ್ಯಸುದ್ದಿಜಾಲವಿಶ್ವದ ಮೊದಲ ವಾಸ್ತುಶಿಲ್ಪಿ ವಿಶ್ವಕರ್ಮರು ಅವರ ಕೊಡುಗೆ ಜಗತ್ತಿಗೆ ಅಮರ: ವೇಣುಗೋಪಾಲ್

ವಿಶ್ವದ ಮೊದಲ ವಾಸ್ತುಶಿಲ್ಪಿ ವಿಶ್ವಕರ್ಮರು ಅವರ ಕೊಡುಗೆ ಜಗತ್ತಿಗೆ ಅಮರ: ವೇಣುಗೋಪಾಲ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ:ವಿಶ್ವಕರ್ಮರು ಜಗತ್ತಿನ ಪ್ರಥಮ ವಾಸ್ತುಶಿಲ್ಪ ಕಲೆಗಾರರಾಗಿದ್ದು, ಅವರ ಕೊಡುಗೆ ಸೂರ್ಯ, ಚಂದ್ರರಿರುವವರೆಗೂ ಅಮರ ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್ ಹೇಳಿದರು.

ಪಟ್ಟಣದ ಆಡಳಿತಸೌಧದ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ, ಪುರಸಭೆ ಮತ್ತು ತಾಲೂಕು ವಿಶ್ವಕರ್ಮ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ವಿಶ್ವಕರ್ಮರು ದೇಶದ ಸ್ವಾಭಿಮಾನದ ಸಂಕೇತವಾಗಿದ್ದು, ಕೈಗಾರಿಕೆ, ಶಿಲ್ಪಕಲೆ, ಗಣಿತ, ವಿಜ್ಞಾನ ಕ್ಷೇತ್ರಗಳಲ್ಲಿ ತಮ್ಮದೆಯಾದ ಛಾಪು ಮೂಡಿಸಿ ವಿಶ್ವಮಾನ್ಯತೆಗೆ ಕಾರಣರಾಗಿದ್ದಾರೆ. ಆದರೂ ಸಮಾಜದ ಜತೆಗೆ ಸರ್ಕಾರದ ಸವಲತ್ತುಗಳು ಇಂದಿಗೂ ದೊರೆಯದೆ ಸೊರಗುವಂತಾಗಿದೆ ಎಂದರು.

ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕ್ಷೇತ್ರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿವೇಶನ ದೊರಕಿಸಿಕೊಡಬೇಕೆಂದು ಮನವಿ ಮಾಡಿದ ಅವರು ಭೌನ ನಿರ್ಮಾಣದಿಂದ ಸಮಾಜದ ಸಭೆ ಮತ್ತು ಸಮಾರಂಭಗಳನ್ನು ನಡೆಸಲು ಅನುಕೂಲವಾಗಲಿದೆ ಎಂದು ತಿಳಿಸಿದರು. ಮುಂಬರುವ ಜಾತಿಗಣತಿಯಲ್ಲಿ ಪ್ರತಿಯೊಬ್ಬ ವಿಶ್ವಕರ್ಮರೂ ತಮ್ಮ ಒಳಪಂಗಡಗಳನ್ನು ಬದಿಗಿಟ್ಟು, ಧರ್ಮ ಹಿಂದೂ, ಜಾತಿ ವಿಶ್ವಕರ್ಮ ಮತ್ತು ಉಪಜಾತಿಯಲ್ಲಿಯೂ ವಿಶ್ವಕರ್ಮ ಎಂದು ಬರೆಸಬೇಕು. ಇದರಿಂದ ನಮ್ಮ ಸಮಾಜದ ಜನತೆಯ ಸಂಖ್ಯೆ ಎಷ್ಟಿದೆ ಎಂಬುದು ಸಾಭೀತಾಗಲಿದೆ ಎಂದು ಸಲಹೆ ನೀಡಿದರು.
ರಾಜ್ಯ ವಿಶ್ವಕರ್ಮ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಎಸ್.ರೇವಣ್ಣ ಮಾತನಾಡಿ ರೈತರ ಬೆನ್ನೆಲುಬಾದ ವಿಶ್ವಕರ್ಮ ಸಮಾಜ ನೀಡಿದ ಕೊಡುಗೆ ಅಪಾರವಾಗಿದ್ದು, ಸಮಾಜದ ಪ್ರತಿಯೊಬ್ಬರೂ ಕುಲಕಸುಬಿನೊಂದಿಗೆ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಇದರಿಂದ ತಮ್ಮ ಮಕ್ಕಳು ಉನ್ನತ ಹುದ್ಧೆಗಳನ್ನು ಪಡೆಯಲು ಸಹಕಾರಿಯಾಗಲಿದೆಯೆಂದರು.

ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಮಾತನಾಡಿ ವಿಶ್ವಕರ್ಮ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯವಾದ ನಿವೇಶನವನ್ನು ಇಲಾಖೆಯ ಕಾನೂನಿನ ಪ್ರಕಾರ ಪ್ರಯತ್ನಿಸಲಾಗುವುದು ಎಂದು ಮಾಹಿತಿ ನೀಡಿದರು. ಪುರಸಭೆ ಮಾಜಿ ಸದಸ್ಯ ಕೆ.ಬಿ.ಸುಬ್ರಹ್ಮಣ್ಯ, ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ತಿಮ್ಮಶೆಟ್ಟಿ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸದಸ್ಯ ಎಸ್.ಆರ್.ಯಶ್ವಂತ್‌ಕುಮಾರ್, ಸಮಾಜದ ಮುಖಂಡರಾದ ಕೆ.ಪಿ.ರಮೇಶ್, ಸಿ.ವಿ.ಮೋಹನಕುಮಾರ್, ಪುಟ್ಟಸ್ವಾಮಾಚಾರ್, ರಾಮಾಚಾರಿ, ಪುಟ್ಟಣ್ಣಾಚಾರ್, ಪ್ರಕಾಶಾಚಾರ್, ಅರುಣ್, ತೇಜಕುಮಾರ್, ನಟಶೇಖರಾಚಾರ್ ಹಾಜರಿದ್ದರು.


RELATED ARTICLES
- Advertisment -
Google search engine

Most Popular