ಬ್ರಿಟನ್ ಹಾಗೂ ಅಮೆರಿಕಾದಲ್ಲಿ ಕೊರೊನಾ ರೂಪಾಂತರ ವೇಗವಾಗಿ ಹರಡುತ್ತಿದೆ.
BA.2.86, BA.X ಎಂದು ಹೆಸರಿಸಲಾಗಿರುವ ಕೋವಿಡ್ ರೂಪಾಂತರಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದೆ. ಇದರ ಮೇಲೆ ನಿಗಾ ಇಡಲಾಗಿದೆ.
ಸದ್ಯಕ್ಕೆ ಕೋವಿಡ್ ರೋಗಲಕ್ಷಣಗಳ ಪ್ರಕಾರ ಮತ್ತು ಮಾದರಿಯಲ್ಲಿ ಯಾವುದೇ ಹೊಸ ಬದಲಾವಣೆ ಕಂಡುಬರುತ್ತಿಲ್ಲ. ಆದಾಗ್ಯೂ, ಆರೋಗ್ಯ ತಜ್ಞರು ಜನರು ಕೋವಿಡ್‌ನ ಸಾಮಾನ್ಯ ಲಕ್ಷಣಗಳ ಬಗ್ಗೆ ಕಾಳಜಿ ವಹಿಸುವಂತೆ ತಜ್ಞರು ಸೂಚಿಸಿದ್ದಾರೆ.
ಸೋಂಕಿನ ಲಕ್ಷಣಗಳಿದ್ದರೆ ಕೂಡಲೇ ಪರೀಕ್ಷಿಸಿಕೊಳ್ಳಬೇಕು, ಆದಷ್ಟು ಬೇಗ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.



                                    