ಮೈಸೂರು: ಶ್ರೀ ಸುತ್ತೂರು ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಏರ್ಪಡಿಸುವ ಕುಸ್ತಿ ಪಂದ್ಯಾವಳಿಯನ್ನು ಕೇಂದ್ರ ಗೃಹ ಸಚಿವರ ಆಗಮನದ ನಿರೀಕ್ಷೆಯಿಂದ ಫೆಬ್ರವರಿ ೯ ಶುಕ್ರವಾರದಂದು ಏರ್ಪಡಿಸಲಾಗಿತ್ತು. ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾರವರು ಸಂಸತ್ ಅಧಿವೇಶನ ಮುಂದುವರಿದಿರುವ ಕಾರಣ ಫೆಬ್ರವರಿ ೧೧, ಭಾನುವಾರದಂದು ಆಗಮಿಸುತ್ತಿದ್ದಾರೆ. ಆ ಕಾರಣದಿಂದ ಕುಸ್ತಿ ಪಂದ್ಯಾವಳಿಯನ್ನು ಪ್ರತಿವರ್ಷದಂತೆ ತೆಪ್ಪೋತ್ಸವದ ದಿನದಂದು ಅಂದರೆ ಫೆಬ್ರವರಿ ೧೦, ಶನಿವಾರ ಮಧ್ಯಾಹ್ನ ೨.೦೦ ಗಂಟೆಗೆ ಏರ್ಪಡಿಸಲಾಗಿದೆ.
ಕುಸ್ತಿಪಟುಗಳು, ಉಸ್ತಾದ್‌ಗಳು, ಕುಸ್ತಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಈ ಬದಲಾವಣೆಯನ್ನು ಗಮನಿಸಿ, ಆಗಮಿಸಿ ಕುಸ್ತಿ ಕಲೆಯನ್ನು ಪ್ರೋತ್ಸಾಹಿಸಬೇಕಾಗಿ ಕೋರಿದೆ