ವರದಿ :ಸ್ಟೀಫನ್ ಜೇಮ್ಸ್.
ಯಶಸ್ಚಿಯಾದ ರೋಟರಿ ಕ್ಲಬ್ ಹಾಫ್ ಮ್ಯಾರಥಾನ್. ಬೆಳಗಾವಿ
ಬೆಳಗಾವಿಯ ಅಭಿವೃದ್ಧಿಗಾಗಿ ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾಮ್ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ 15ನೇ ಆವೃತ್ತಿಯ ಹಾಫ್ ಮ್ಯಾರಾಥಾನ್ ನಲ್ಲಿ ಸಾವಿರಾರು ಜನರು ಭಾಗಿಯಾಗಿ ಓಟ ನಡೆಸಿ ವಿಜೇತರಾದರು.

ಭಾನುವಾರ ಕೆಎಲ್ಇ ಲಿಂಗರಾಜ್ ಕಾಲೇಜಿನ ಆವರಣದಿಂದ ಆರಂಭವಾದ ಮ್ಯಾರಥಾನ್ ನಗರ್ ಕಾಲೇಜು ರಸ್ತೆ, ಕ್ಯಾಂಪ್, ಸಾವಗಾವ ರೋಡ್ ಪ್ರದೇಶ ಸೇರಿದಂತೆ ನಗರದ ವಿವಿಧ ಪ್ರದೇಶದಲ್ಲಿ ಓಟ ನಡೆಸಿದರು.
ಮ್ಯಾರಾಥಾನ್ ನಲ್ಲಿ ಭಾಗಿಯಾಗಿದ್ದ ಉಮಾ ಮಾತನಾಡಿ, ಯುವಕರು ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಮ್ಯಾರಾಥಾನ್ ಭಾಗಿಯಾಗಬೇಕು. ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡೆಯಲ್ಲಿಯೂ ಭಾಗವಹಿಸಬೇಕು. ಇಂದಿನ ದಿನಗಳಲ್ಲಿ ಆರೋಗ್ಯವನ್ನು ಹಣ ಕೊಟ್ಟು ಪಡೆದುಕೊಳ್ಳುವಂತಾಗಿದೆ. ಅದರ ಬದಲು ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದ ಕರೆ ನೀಡಿದರು.

ಸಾಯಿಶ್ರೀ ಪಾಟೀಲ್ ಮಾತನಾಡಿದರು. ಕಳೆದ 2018ರಿಂದ ರೋಟರಿ ಕ್ಲಬ್ ಆಫ್ ವೇಣುಗ್ರಾಮ್ ಬೆಳಗಾವ್ ಆಯೋಜಿಸುವ ಮ್ಯಾರಾಥಾನ್ ನಲ್ಲಿ ಭಾಗವಹಿಸುತ್ತಾ ಬಂದಿದ್ದೇನೆ. ಇದು ನನ್ನ 36 ಮ್ಯಾರಾಥಾನ್ ಬೆಳಗಾವಿಯಲ್ಲಿ ಓಟ ನಡೆಸುವುದು ಸಂತೋಷ ತಂದಿದೆ. ನಾನು ಭಾಗವಿಸಿದ ಮ್ಯಾರಾಥಾನ್ ನಲ್ಲಿ 10 ಪದಕಗಳನ್ನು ಪಡೆದಿದ್ದೇನೆ. ಇಂಥ ಮ್ಯಾರಾಥಾನ್ ಗಳು ಬೆಳಗಾವಿಯಲ್ಲಿ ಹೆಚ್ಚು ಆಗಬೇಕು ಎಂದರು.
ಬೈರು ನಾಯಕ ಮಾತನಾಡಿ, ಹುಕ್ಕೇರಿ ತಾಲೂಕಿನಿಂದ ಬೆಳಗಾವಿ ಮ್ಯಾರಾಥಾನ್ ನಲ್ಲಿ ಭಾಗವಹಿಸಿದ್ದೇನೆ. ನಾನು ಕಳೆದ ಮೂರು ವರ್ಷದಿಂದ ಮ್ಯಾರಾಥಾನ್ ನಲ್ಲಿ ಓಟ ನಡೆಸಿದ್ದೇನೆ. ಯುವಕರು ಆರೋಗ್ಯ ಕಾಪಾಡಿಕೊಳ್ಳಲು, ಸೇನೆ ಭರ್ತಿಗಾಗಿ ಇಂಥ ಮ್ಯಾರಾಥಾನ್ ಗಳು ಸಹಾಯಕವಾಗುತ್ತದೆ. ಅಲ್ಲದೆ, ಯುವಕರು ಕ್ರೀಯಾಶೀಲರಾಗಿರುತ್ತಾರೆ. ಗ್ರಾಮೀಣ ಪ್ರದೇಶದಲ್ಲಿಯೂ ಇಂಥ ಮ್ಯಾರಾಥಾನ್ ಆಯೋಜಿಸಬೇಕು ಎಂದರು.
ಈ ಮ್ಯಾರಥಾನ್ ನಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಓಟಗಾರರು ಭಾಗಿಯಾಗಿ 21 ಕಿ.ಮೀ, 10 ಕಿ.ಮೀ, 5ಕಿ.ಮೀ ಹಾಗೂ 3 ಕಿ.ಮೀ ಫನ್ ರನ್ ಮ್ಯಾರಾಥಾನ್ ನಲ್ಲಿ ಭಾಗವಹಿಸಿದ್ದರು. ಮ್ಯಾರಾಥಾನ್ ವಿಜೇತರಿಗೆ ಸುವರ್ಣ ನಾಣ್ಯ ಬಹುಮಾನ ನೀಡಲಾಯಿತು.
ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾಮ್ ಅಧ್ಯಕ್ಷ ಶಶಿಕಾಂತ ನಾಯಕ, ಲೋಕೇಶ್ ಹೊಂಗಲ, ವೈಶಾಲಿ ಸಾಗರೆ, ಸಚಿನ ಕುಲಗೋಡ ಸೇರಿದಂತೆ ಆಯೋಜನೆ ಮಾಡಿದ್ದರು.
ಈ ಸಂದರ್ಭದಲ್ಲಿ ಸಿಪಿಐ ವಿಜಯ ಶಿನ್ನೂರ ಮಾರ್ಕೇಟ್ ಪಿಎಸ್ಐ ವಿಠ್ಠಲ, ಕೀರ್ತಿ ಟೋಪಣ್ಣವರ ಸೇರಿದಂತೆ ಇನ್ನಿತರರು ಓಟದಲ್ಲಿ ಭಾಗಿಯಾಗಿದ್ದರು.



