ಬೆಂಗಳೂರು : ಕುರ್ಚಿ ಕಾದಾಟದ ಕಿಚ್ಚು ತಣ್ಣಗಾಗಿಸಲು ಕಾಂಗ್ರೆಸ್ ಹೈಕಮಾಂಡ್ ಖಡಕ್ ಸೂಚನೆ ನೀಡುತ್ತಿದ್ದಂತೆ, ಇತ್ತ ಸಿಎಂ-ಡಿಸಿಎಂ ಒಗ್ಗಟ್ಟಿನ ತಂತ್ರ ಪ್ಲೇ ಮಾಡುತ್ತಿದ್ದಾರೆ. ಕಳೆದ ಭಾನುವಾರ ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ಬ್ರೇಕ್ಫಾಸ್ಟ್ ಮೀಟಿಂಗ್ ಮಾಡಿ ಒಟ್ಟಿಗೆ ಫೋಟೋಗೆ ಪೋಸ್ ಕೊಟ್ಟ ನಾಯಕರು, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬ ಸಂದೇಶ ಸಾರಿದ್ದರೂ, ಇಂದು ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರನ್ನ ಬ್ರೇಕ್ಫಾಸ್ಟ್ಗೆ ಕರೆದು ಸಭೆ ನಡೆಸಿದ್ದೂ, ಈ ಬಗ್ಗೆ ವಿಪಕ್ಷಗಳು ಟೀಕೆ ಮಾಡ್ತಿದೆ. ಸಿಎಂ-ಡಿಸಿಎಂ ಬ್ರೇಕ್ಫಾಸ್ಟ್ ಮೀಟಿಂಗ್ಗೆ ಜೆಡಿಎಸ್ ಪೋಸ್ಟ್ ಮೂಲಕ ಟಾಂಗ್ ಕೊಟ್ಟಿದೆ.
ಡಮ್ಮಿ ಸಿಎಂ ಸಿದ್ದರಾಮಯ್ಯ: ಜೆಡಿಎಸ್ ಟ್ವೀಟ್
ರಾಜ್ಯ ಸರ್ಕಾರದಲ್ಲಿ ನಾಯಕತ್ವದ ಕಿತ್ತಾಟ ನಡೆಯುತ್ತಿದ್ದು, ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ವಿಪಕ್ಷ ನಾಯಕರು ಆರೋಪ ಮಾಡಿದ್ದು, ಈ ಬಗ್ಗೆ ಜೆಡಿಎಸ್ ವರಿಷ್ಠ, ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡುವ ಮೂಲಕ ಸಿಎಂ ಮೀಟಿಂಗ್ಗೆ ಟಾಂಗ್ ಕೊಟ್ಟಿದ್ದಾರೆ.
ಜೆಡಿಎಸ್ ಪೋಸ್ಟ್ನಲ್ಲಿ ಏನಿದೆ ನೋಡಯವುದಾದರೆ, ಡಮ್ಮಿ ಸಿಎಂ ಸಿದ್ದರಾಮಯ್ಯ, ಕುರ್ಚಿ ಆಸೆಗೆ ಡಿಕೆ ಶಿವಕುಮಾರ್ ಜೊತೆ ಸೆಟಲ್‌ಮೆಂಟ್‌ಗೆ ಬಂದ ಸಿದ್ದಹಸ್ತ ಎಂದು ಬರೆದು ಟಾಂಗ್ ನೀಡಿದ್ದಾರೆ.
ಸಿದ್ದರಾಮಯ್ಯ : ಶಿವಕುಮಾರ್ ಈಗ್ಲೂ ನೀನೇ ಸೂಪರ್ ಸಿಎಂ ಕಣಯ್ಯ.
ನೀನೆಷ್ಟೆ ಕಮಿಷನ್ ತಗೊಂಡ್ರು ನಾನ್ಯಾವತ್ತಾದ್ರೂ ಅಡ್ಡಿ ಮಾಡಿದಿನಾ ?
ಡಿಕೆಶಿ : ಅದು ಹಾಗಲ್ಲ ಸರ್. ನೀವ್ ಕೊಟ್ಟ ಮಾತು..
ಸಿದ್ದರಾಮಯ್ಯ : ಏಯ್ ಕೇಳಪ್ಪ ಇಲ್ಲಿ. ಸಂಪುಟದಲ್ಲಿ ನೀನು ಯಾರ್ ಹೇಳ್ತೀಯೋ ಅವ್ರೆ ಮಂತ್ರಿ. ಈಗ ನಡೀ..
ಪ್ರೆಸ್ ಮುಂದೆ ನಾವಿಬ್ಬರು ಅಣ್ತಮ್ಮ ಅಂತ ಹೇಳಿದ್ಯಲ್ಲ. ಹಂಗೇ ನಡ್ಕೋ.
ಇಷ್ಟೇ ಇವರಿಬ್ಬರ ನಡುವಿನ Break _ Fast ಮೀಟಿಂಗ್ ಕಥೆ ಎಂದು ಜೆಡಿಎಸ್ ವ್ಯಂಗ್ಯ ಮಾಡಿದೆ.

ಅದಲ್ಲದೇ ಮತ್ತೊಂದು ಟ್ವೀಟ್ ಮಾಡಿರುವ ಜೆಡಿಎಸ್, ವಿದ್ಯಾರ್ಥಿಗಳಿಗೆ ಲಾಠಿ ಏಟು ! ಸಿಎಂ – ಡಿಸಿಎಂಗೆ ನಾಟಿಕೋಳಿ ಬ್ರೇಕ್ ಫಾಸ್ಟು ! ಎಂದು ಬರೆದಿದೆ. ಹಾಗೂ ಅಧಿಕಾರಕ್ಕೆ ಬಂದರೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸುಳ್ಳು ಭರವಸೆ ಕೊಟ್ಟಿದ್ದ ಕಾಂಗ್ರೆಸ್, ಅದನ್ನು ಮರೆತು ಈಗ ಉದ್ಯೋಗ ಆಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಕುರ್ಚಿಗಾಗಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಲು ಸಿಕ್ಕಾಪಟ್ಟೆ ಸಮಯವಿದೆ. ನೌಕರಿಗಾಗಿ ಬೀದಿಯಲ್ಲಿ ಹೋರಾಟ ಮಾಡುತ್ತಿರುವ ವಿದ್ಯಾರ್ಥಿಗಳ ಸಮಸ್ಯೆ, ಅಹವಾಲು ಆಲಿಸಲು ಟೈಂ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದು ಟ್ವೀಟ್ನಲ್ಲೇ ಕುಟುಕಿದ್ದಾರೆ.



