Monday, February 16, 2026
Google search engine

Homeರಾಜಕೀಯತಮಿಳುನಾಡಿಗೆ ನೀರು ಬಿಟ್ಟಿದ್ದೀರಿ, ತುಮಕೂರಿಗೂ ನೀರು ಕೊಡಿ: ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯ

ತಮಿಳುನಾಡಿಗೆ ನೀರು ಬಿಟ್ಟಿದ್ದೀರಿ, ತುಮಕೂರಿಗೂ ನೀರು ಕೊಡಿ: ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯ

ತುಮಕೂರು: ತಮಿಳುನಾಡಿಗೆ ನೀರು ಬಿಟ್ಟಿದ್ದೀರಿ, ತುಮಕೂರಿಗೂ ನೀರು ಕೊಡಿ ಎಂದು ಸರ್ಕಾರಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.

ತುಮಕೂರಿನ ಖಾಸಗಿ ಹೊಟೇಲ್‌ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜಿಲ್ಲೆಯ ಸಚಿವದ್ವಯರಿಗೆ ಪತ್ರದ ಮೂಲಕ ಮನವಿ ಮಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ತುಮಕೂರಿಗೆ ಹೇಮಾವತಿ ನೀರು ಹರಿಸುವಂತೆ ಮನವಿ ಮಾಡಿದ್ದಾರೆ.

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣಗೂ ಪತ್ರದ ಮುಖೇನ ಕೋರಿಕೆ ಸಲ್ಲಿಸಿದ್ದಾರೆ.

ಹೇಮಾವತಿ ನೀರು ತಮಿಳುನಾಡಿಗೆ ಬಿಡುತ್ತಿರುವುದು ದುರಂತ. ಕಳೆದ ತಿಂಗಳು ನೆಪ ಮಾತ್ರಕ್ಕೆ ತುಮಕೂರು ಜಿಲ್ಲೆಗೆ ನೀರು ಬಿಟ್ಟು ಸ್ಥಗಿತಗೊಳಿಸಲಾಗಿದೆ.  ಕೇವಲ 5 ಟಿಎಂಸಿ ನೀರು ಹರಿಸಲಾಗಿದೆ. ಇನ್ನುಳಿದ 20 ಟಿಎಂಸಿ ನೀರು ಬಿಡುವಂತೆ ಆಗ್ರಹಿಸಿದ್ದಾರೆ.

ತಮಿಳುನಾಡಿಗೆ ಯಾವ ಪುರುಷಾರ್ಥಕ್ಕೆ ನೀರು ಹರಿಸಲಾಗುತ್ತಿದೆ, ಇಡೀ ಜಿಲ್ಲೆ ಬರಗಾಲದಿಂದ ತತ್ತರಿಸಿದೆ. ಈ ನಡುವೆ ಹೇಮಾವತಿ ನೀರು ತಮಿಳುನಾಡಿಗೆ ಹೇಗೆ ಬಿಟ್ಟಿದ್ದೀರಿ.?  ಎಂದು ಎಂದು ಸೊಗಡು ಶಿವಣ್ಣ ಪ್ರಶ್ನೆ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular