Wednesday, May 21, 2025
Google search engine

Homeಅಪರಾಧವಿವಾಹಿತ ಮಹಿಳೆಯೊಂದಿಗೆ ಯುವಕನ ಫೋಟೋ ವೈರಲ್: ಇಬ್ಬರು ನೇಣಿಗೆ ಶರಣು

ವಿವಾಹಿತ ಮಹಿಳೆಯೊಂದಿಗೆ ಯುವಕನ ಫೋಟೋ ವೈರಲ್: ಇಬ್ಬರು ನೇಣಿಗೆ ಶರಣು

ಮೈಸೂರು: ವಿವಾಹಿತ ಮಹಿಳೆಯೊಂದಿಗೆ ಯುವಕ ಸಲುಗೆ ಬೆಳೆಸಿದ್ದು, ಇವರಿಬ್ಬರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ಹೆದರಿ ಮಹಿಳೆ ಮತ್ತು ಯುವಕ ನೇಣಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.

ಹುಣಸೂರು ಪಟ್ಟಣದ ಕಲ್ಕುಣಿಗೆ ನಿವಾಸಿಗಳಾದ ಶೃತಿ(28), ಮುರಳಿ(20) ಆತ್ಮಹತ್ಯೆ ಮಾಡಿಕೊಂಡವರು.

ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಮುರಳಿ, ತಾನು ಶೃತಿ ಜೊತೆ ಇದ್ದ ಫೋಟೋವನ್ನು ಅಪ್ ​ಲೋಡ್ ಮಾಡಿ ​​​ಸ್ಟೇಟಸ್ ​ನಲ್ಲಿ ಇಟ್ಟುಕೊಂಡಿದ್ದ. ಈ ಫೋಟೋ ವೈರಲ್ ಆಗಿದೆ. ಬಳಿಕ ಇದು ಶೃತಿ ಹಾಗೂ ಮುರಳಿ ಮನೆಯವರಿಗೂ ಮುಟ್ಟಿದೆ. ಇದೇ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ಆಗಿದೆ. ಇದರಿಂದ ಹೆದರಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಎರಡೂ ಕುಟುಂಬದವರು ಪರಸ್ಪರ ದೂರು ನೀಡಿದ್ದಾರೆ.

RELATED ARTICLES
- Advertisment -
Google search engine

Most Popular