Tuesday, May 20, 2025
Google search engine

Homeರಾಜ್ಯಅಬ್ಬರಿಸುತ್ತಿರುವ ಕೃಷ್ಣಾ ನದಿ ಪಾತ್ರದಲ್ಲಿ ಯುವಕರ ಸೆಲ್ಫಿ ಹುಚ್ಚಾಟ: ಅಪಾಯಕ್ಕೆ ಆಹ್ವಾನ

ಅಬ್ಬರಿಸುತ್ತಿರುವ ಕೃಷ್ಣಾ ನದಿ ಪಾತ್ರದಲ್ಲಿ ಯುವಕರ ಸೆಲ್ಫಿ ಹುಚ್ಚಾಟ: ಅಪಾಯಕ್ಕೆ ಆಹ್ವಾನ

ಬಾಗಲಕೋಟೆ: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಎಲ್ಲಾ ನದಿಗಳು ಮೈದುಂಬಿ ಹರಿಯುತ್ತಿವೆ. ಅಂತೆಯೇ ಕೃಷ್ಣಾ ನದಿಗೆ ಕೂಡ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.

ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದ ಮಳೆ ಹಿನ್ನೆಲೆ ಕೃಷ್ಣ ನದಿಗೆ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಈ ನಡುವೆ ಯುವಕರು ಸೆಲ್ಫಿ ತೆಗೆದುಕೊಳ್ಳಲು ಅಪಾಯಕಾರಿ ಸಾಹಸ ಮಾಡುತ್ತಿರುವುದು ಕಂಡುಬಂದಿದೆ.

ಜಮಖಂಡಿ‌ ಉಪ ವಿಭಾಗದ ವ್ಯಾಪ್ತಿಯಲ್ಲಿ ‌ಹರಿಯುವ ಕೃಷ್ಣ ನದಿಗೆ ಅಂದಾಜು ಒಂದು ಲಕ್ಷಕ್ಕೂ  ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ‌ ಬ್ಯಾರೇಜ್’ಗೆ‌ ಅಪಾರ ಪ್ರಮಾಣದ‌ ನೀರು ಹರಿದುಬಂದಿದೆ.

ನದಿ ಪಾತ್ರಕ್ಕೆ ಯಾರೂ ತೆರಳಬಾರದೆಂದು ಜಮಖಂಡಿ‌ ಎಸಿ ಸಂತೋಷ ಕಾಮಗೌಡ್ರ ಡಂಗುರದ ಮೂಲಕ ಜಾಗೃತಿ ಮೂಡಿಸಿದರು ಕೂಡ  ಉಕ್ಕಿ ಹರಿಯುತ್ತಿರುವ ಕೃಷ್ಣ ನದಿ ಪಾತ್ರದಲ್ಲಿ ಸೆಲ್ಫಿ‌ ತೆಗೆದುಕೊಳ್ಳಲು ಯುವಕರು ಮುಗಿಬಿದ್ದಿದ್ದಾರೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನದಿ ಪಾತ್ರಕ್ಕೆ ಯಾರು ತೆರಳದಂತೆ ಬ್ಯಾರಿಕೇಡ್ ಅಳಡಿಸಿ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ.

RELATED ARTICLES
- Advertisment -
Google search engine

Most Popular