ಬೆಂಗಳೂರು : ಬಜೆಟ್ ಸಮಯದಲ್ಲಿ ಕಾಂಗ್ರೆಸ್ ಬಣ ಬಡಿದಾಟ ಜಾಸ್ತಿ ಆಗಲಿದೆ ಅಂತ ಮಾಜಿ ಸಚಿವ ಆರಗ ಜ್ಞಾನೇಂದ್ರ ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ನಲ್ಲಿ ಫಾರಿನ್ ಟ್ರಿಪ್ ಪಾಲಿಟಿಕ್ಸ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಸೊನ್ನೆ ಅಭಿವೃದ್ಧಿ, ಈಗ ಕಿತ್ತಾಟ ಶುರುವಾಗಿದೆ. ಅದು ಎಲ್ಲಿಗೆ ಹೋಗಿ ನಿಲ್ಲುತ್ತೋ ಹೇಳೋಕೆ ಸಾಧ್ಯವಿಲ್ಲ. ಹೈಕಮಾಂಡ್ ಹೇಳಿದಂತೆ ಕೇಳ್ತೀವಿ ಅಂತಾರೆ. ಹೈಕಮಾಂಡನ್ನ ಧಿಕ್ಕರಿಸೋ ಕೆಲಸ ನಡೆದಿದೆ. ಸಿಎಂ-ಡಿಸಿಎಂ ಕುರ್ಚಿ ಹೋರಾಟದಲ್ಲಿ ಸಂಪೂರ್ಣವಾಗಿ ಕರ್ನಾಟಕ ರಾಜ್ಯ ಹದಗೆಟ್ಟು ಹೋಗಿದೆ ಅಂತ ಕಿಡಿಕಾರಿದರು.
ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಕೆಳಮಟ್ಟಕ್ಕೆ ಕುಸಿದಿದೆ. ಬಣ ಬಡಿದಾಟದಲ್ಲಿ ಇವರು ರಾಜ್ಯ ಹಾಳು ಮಾಡ್ತಾ ಇದ್ದಾರೆ. ಕರ್ನಾಟಕ ರಾಜ್ಯ ಸಂಪತ್ಭರಿತ ರಾಜ್ಯ ಇವರ ಅಧಿಕಾರದಲ್ಲಿ ಅತ್ಯಂತ ಕೀಳು ಮಟ್ಟಕ್ಕೆ ಹೋಗ್ತಿದೆ. ಬಜೆಟ್ ಆದ ಮೇಲೆ ಇವರ ಬಣ ಬಡಿದಾಟ ಇನ್ನು ಜಾಸ್ತಿ ಆಗುತ್ತದೆ. ಬಜೆಟ್ ಸಮಯದಲ್ಲೇ ಇವರ ಬಣ ಬಡಿದಾಟ ಜಾಸ್ತಿ ಆಗಬಹುದು ಅನ್ನಿಸುತ್ತೆ ಅಂತ ತಿಳಿಸಿದರು.
ಇದೇ ವೇಳೆ ಕೋಗಿಲು ಲೇಔಟ್ ನಲ್ಲಿ ಮನೆಗಾಗಿ ಅರ್ಜಿ ಸಲ್ಲಿಕೆ ಮಾಡಿರೋ 26 ಜನರು ಅರ್ಹರಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಸರ್ಕಾರ ತುಷ್ಟೀಕರಣ ಮಾಡಿ ಅನಧಿಕೃತವಾಗಿ ನೆಲೆಸಿರೋರಿಗೆ ಮನೆ ಕೊಡೋಕೆ ಮುಂದಾಗಿದೆ ಅಂತ ವಾಗ್ದಾಳಿ ನಡೆಸಿದರು.
ಈ ಸರ್ಕಾರದಲ್ಲಿ ಯಾರ್ ಏನ್ ಬೇಕಾದ್ರು ಮಾಡಬಹುದು. ಯಾರನ್ನು ಎಲ್ಲೋ ತೆಗೆದುಕೊಂಡು ಕೂರಿಸೋದು, ಆಮೇಲೆ ಕ್ಲೈಮ್ ಮಾಡೋದು. ಇದನ್ನ ಮಾಡ್ತಾ ಇದ್ದಾರೆ. ಅರ್ಹತೆ ಇರೋ ಬಡವರಿಗೆ ನಿವೇಶನ ಕೊಡ್ತಿಲ್ಲ. ಅನಧಿಕೃತವಾಗಿ ಇರೋರಿಗೆ ಇನ್ನೇನೋ ಕೊಡ್ತೀನಿ ಅಂತ ಹೊರಟಿದೆ. ಈ ಸರ್ಕಾರ ತುಷ್ಟೀಕರಣ ನೀತಿ ಮಾಡ್ತಿದೆ ಎಂದು ಕಿಡಿಕಾರಿದರು.



